Neeraj Chopra: ಈ ರೇಂಜಿಗೆ ವರ್ಕೌಟ್ ಮಾಡೋದ್ರಿಂದಲೇ ನೀರಜ್ ಚೋಪ್ರಾ 'ಚಿನ್ನದ ಹುಡುಗ' ಆಗಿದ್ದು!

Neeraj Chopra fitness: ಚಿನ್ನದ ಹುಡುಗ ನೀರಜ್ ಚೋಪ್ರಾ ಜಿಮ್ ನಲ್ಲಿ ಸಕ್ಕತ್ತಾಗಿ ವರ್ಕೌಟ್ ಮಾಡಿ ಬೇವರಿಳಿಸುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಪ್ರಯತ್ನ ಹಾಗೂ ಪರಿಶ್ರಮಕ್ಕೆ ಯಾವುದೇ ಹೆಸರು ಬೇಡ ಎಂದು ಬರೆದುಕೊಂಡಿದ್ದಾರೆ

ನೀರಜ್ ಚೋಪ್ರಾ

ನೀರಜ್ ಚೋಪ್ರಾ

  • Share this:
    ಕಠಿಣವಾದ ಪರಿಶ್ರಮ ಹಾಗೂ ನಿರಂತರ ಪ್ರಯತ್ನದಿಂದ(Effort) ಏನನ್ನು ಬೇಕಾದರೂ ಸಾಧನೆ(Achievement) ಮಾಡಬಹುದು ಎಂಬುದಕ್ಕೆ ಹಲವಾರು ಜನರು ನಮ್ಮ ಮುಂದೆ ಇದ್ದಾರೆ.. ಅದರಲ್ಲೂ ದೇಹದ ತೂಕದ(Body Weight) ಬಗ್ಗೆ ಕೀಳಿರಿಮೆ ಇಟ್ಟುಕೊಂಡು ಎಷ್ಟೋ ಜನ ತಮ್ಮನ್ನು ತಾವು ಕಡೆಗಣನೆ ಮಾಡಿಕೊಳ್ಳುತ್ತಿದ್ದಾರೆ.ಆದರೆ ಕೆಲವರು ಮಾತ್ರ ದೇಹದ ತೂಕ ಲೆಕ್ಕವೇ ಅಲ್ಲ ಅದನ್ನು ನಮಗೆ ಬೇಕಾದಂತೆ ಮಾಡಿಕೊಳ್ಳಬಹುದು ಎಂದು ತೋರಿಸಿ ಸಾಧನೆ ಮಾಡಿದವರು ಇದ್ದಾರೆ.. ಈ ರೀತಿ ಸಾಧನೆಯ ಮಾಡಿದವರಲ್ಲಿ 2021ರಲ್ಲಿ ನಡೆದ ಒಲಿಂಪಿಕ್ಸ್ ನಲ್ಲಿ(Olympics) ಜಾವೆಲಿನ್ ಥ್ರೋ(Javelin Throw) ವಿಭಾಗದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು ಚಿನ್ನದ ಹುಡುಗ ಎಂದೇ ಖ್ಯಾತಿ ಪಡೆದ ನೀರಜ್ ಚೋಪ್ರಾ (Neeraj Chopra)ಕೂಡ ಒಬ್ಬರು. ತಮ್ಮ ನಿರಂತರ ಪ್ರಯತ್ನ ಹಾಗೂ ಪರಿಶ್ರಮದಿಂದಲೇ ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ಇಂದು ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದಾರೆ.. ಅಲ್ಲದೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ದೈಹಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಅಭಿಮಾನಿಗಳ ಮನ ಸೆಳೆಯುತ್ತಿದ್ದಾರೆ.. ಪದ್ಯ ನೀರಜ್ ಚೋಪ್ರಾ ಇನ್ಸ್ಟಾಗ್ರಾಂ ನಲ್ಲಿ ವಿಡಿಯೋವನ್ನು ಶೇರ್ ಮಾಡಿದ್ದು ಎಲ್ಲರಿಗೂ ಸ್ಫೂರ್ತಿ ತುಂಬುವ ಮಾತುಗಳನ್ನಾಡಿದ್ದಾರೆ.

    ಇನ್ಸ್ಟಾಗ್ರಾಂ ನಲ್ಲಿ ವರ್ಕೌಟ್ ವಿಡಿಯೋ ಶೇರ್ ಮಾಡಿದ ನೀರಜ್ ಚೋಪ್ರಾ

    ಚಿನ್ನದ ಹುಡುಗ ನೀರಜ್ ಚೋಪ್ರ ಜಿಮ್ ನಲ್ಲಿ ಸಕ್ಕತ್ತಾಗಿ ವರ್ಕೌಟ್ ಮಾಡಿ ಬೇವರಿಳಿಸುತ್ತಿರುವ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದು, ಪ್ರಯತ್ನ ಹಾಗೂ ಪರಿಶ್ರಮಕ್ಕೆ ಯಾವುದೇ ಹೆಸರು ಬೇಡ ಎಂದು ಬರೆದುಕೊಂಡಿದ್ದಾರೆ..ಸದ್ಯ ನೀರಜ್ ಚೋಪ್ರಾ ಅವರ ಈ ವಿಡಿಯೋಗೆ 6 ಲಕ್ಷಕ್ಕೂ ಅಧಿಕ ಜನರು ಮಾಡಿದ್ದು, ಸಾವಿರಾರು ಜನರು ಕಾಮೆಂಟ್ ಮಾಡುವ ಮೂಲಕ, ನೀರಜ್ ಚೋಪ್ರಾ ವರ್ಕೌಟ್ ಗೆ ಮೆಚ್ಚುಗೆ ಸೂಚಿಸಿದ್ದಾರೆ.




    ಇದನ್ನೂ ಓದಿ: ಅಬ್ಬಾ..! ಒಂದು Instagram Postನಿಂದ ಎಷ್ಟೊಂದು ಹಣ ಸಂಪಾದನೆ ಮಾಡ್ತಾರೆ ಗೊತ್ತಾ...?

    ಟೋಕಿಯೋ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ

    ಟೋಕಿಯೋ ಒಲಿಂಪಿಕ್ಸ್‌ ಜಾವೆಲಿನ್‌ ಥ್ರೋ ವಿಭಾಗದಲ್ಲಿ
    ಪುರುಷರ ಜಾವೆಲಿನ್‌ ಥ್ರೋ ಫೈನಲ್‌ ಸುತ್ತಿನಲ್ಲಿ 87.58 ಮೀಟರ್‌ ದೂರ ಜಾವೆಲಿನ್ ಎಸೆಯುವ ಮೂಲಕ ನೀರಜ್‌ ಚೋಪ್ರಾ ಚಿನ್ನದ ಪದಕ ಮುಡಿಗೇರಿಸಿಕೊಂಡ್ರು . ಆ ಮೂಲಕ 100 ವರ್ಷಗಳ ಬಳಿಕ ಒಲಿಂಪಿಕ್ಸ್‌ ಕ್ರೀಡಾಕೂಟದ ಟ್ರ್ಯಾಕ್‌ ಹಾಗೂ ಫೀಲ್ಡ್‌ ವಿಭಾಗದಲ್ಲಿ ಈ ಸಾಧನೆ ಮಾಡಿದ ಭಾರತದ ಮೊದಲ ಅಥ್ಲಿಟ್‌ ಎಂಬ ಖ್ಯಾತಿಗೆ ಭಾಜನರಾಗಿದ್ದಾರೆ.ಇನ್ನು ಅಭಿನವ್‌ ಬಿಂದ್ರಾ ಬಳಿಕ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಅಥ್ಲಿಟ್‌ ನೀರಜ್‌ ಚೋಪ್ರಾ ಎಂಬ ಖ್ಯಾತಿಗೂ ಕೂಡ ಅವರು ಭಾಜನರಾಗಿದ್ದಾರೆ.

    ಇದನ್ನೂ ಓದಿ: ಮತ್ತೆ IPL ನಲ್ಲಿ ಬೆಂಗಳೂರು ಪರ ಆಡಬೇಕು ಎಂದ ಸ್ಟಾರ್ ಬೌಲರ್

    ಬಾಲ್ಯದಲ್ಲಿ ತುಂಬಾ ದಪ್ಪಗೆ ಇದ್ದರಂತೆ ನೀರಜ್ ಚೋಪ್ರಾ

    ಇನ್ನು ಇಂದು ಇಡೀ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ನೀರಜ್ ಚೋಪ್ರಾ ಅವರು ಬಾಲ್ಯದಲ್ಲಿ ತುಂಬಾ ದಪ್ಪಗೆ ಇದ್ದರಂತೆ.. ಹೀಗಾಗಿಯೇ ತಮ್ಮ ದೇಹದ ತೂಕ ಇಳಿಸಿಕೊಳ್ಳಲು ಕ್ರೀಡಾಂಗಣಕ್ಕೆ ಬರುತ್ತಿದ್ದ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆಯುವುದನ್ನು ನೋಡಿ, ಅದರಲ್ಲಿ ಆಸಕ್ತಿ ಬೆಳೆಸಿಕೊಂಡು ಇಂದು ವಿಶ್ವವೇ ಮೆಚ್ಚುವ ಜಾವೆಲಿನ್ ಥ್ರೋ ಆಟಗಾರನಾಗಿ ಬೆಳೆದು ನಿಂತಿದ್ದಾರೆ.. ಅಲ್ಲದೆ ದೇಹದ ತೂಕ ಲೆಕ್ಕವೇ ಅಲ್ಲ ಎಂಬುದನ್ನು ಜಗತ್ತಿಗೆ ಸಾರಿ ತೋರಿದ್ದಾರೆ.. ಯಾರು ದೇಹದ ತೂಕ ಇಳಿಸಿಕೊಳ್ಳಬೇಕು ಎಂದು ನಿರಂತರ ಪ್ರಯತ್ನ ಪಡುತ್ತಿರುತ್ತಾರೆ ಅಂತವರಿಗೆ ನೀರಜ್ ಚೋಪ್ರಾ ಮಾದರಿಯಾಗಿದ್ದಾರೆ. ಸದ್ಯ ನೀರಜ್ ಅವರು ಇನ್ಸ್ಟಾಗ್ರಾಂ ನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋ ಕೂಡ ಎಲ್ಲರಿಗೂ ಸ್ಫೂರ್ತಿ ತುಂಬುವ ವಿಡಿಯೋ ಆಗಿದೆ.
    Published by:ranjumbkgowda1 ranjumbkgowda1
    First published: