ವೆಲ್ಲಿಂಗ್‌ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲೆಂಡ್ 1 ರನ್‌ಗಳಿಂದ ಇಂಗ್ಲೆಂಡ್ ಅನ್ನು ಸೋಲಿಸಿದೆ. ಇಂಗ್ಲೆಂಡ್ (NZ vs ENG) ಗೆಲುವಿಗೆ 258 ರನ್ ಗಳ ಗುರಿ ನೀಡಿತ್ತು. ಆದರೆ, ಆಂಗ್ಲರ ತಂಡ 256 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 2 ಟೆಸ್ಟ್‌ಗಳ ಸರಣಿಯನ್ನು ನ್ಯೂಜಿಲೆಂಡ್ (New Zealand) 1-1ರಲ್ಲಿ ಸಮಬಲಗೊಳಿಸಿದೆ. ಮೌಂಟ್ ಮೌಂಗನುಯಿಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಬೆನ್ ಸ್ಟೋಕ್ಸ್ (Ben Stokes) ನೇತೃತ್ವದ ಆಂಗ್ಲ ತಂಡ 267 ರನ್ ಗಳ ಜಯ ಸಾಧಿಸಿತ್ತು. ನೀಲ್ ವ್ಯಾಗ್ನರ್ ನ್ಯೂಜಿಲೆಂಡ್ ಗೆಲುವಿನ ಹೀರೋ ಆದರು. ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 4 ವಿಕೆಟ್ ಪಡೆದು ಮಿಂಚಿದರು. ಇದಕ್ಕೂ ಮೊದಲು 1993ರಲ್ಲಿ ಅಡಿಲೇಡ್ ಟೆಸ್ಟ್‌ನಲ್ಲಿ ವೆಸ್ಟ್ ಇಂಡೀಸ್ 1 ರನ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿತ್ತು. 30 ವರ್ಷಗಳ ನಂತರ ನ್ಯೂಜಿಲೆಂಡ್ ಈ ಸಾಧನೆ ಮಾಡಿದೆ.
ಕ್ರಿಕೆಟ್ ಇತಿಹಾಸದಲ್ಲಿ 4ನೇ ಸಲ:
ಟೆಸ್ಟ್ ಇತಿಹಾಸದಲ್ಲಿ ಇದು ನಾಲ್ಕನೇ ಬಾರಿ ಈ ರೀತಿ ಆಗಿದೆ. ಫಾಲೋ-ಆನ್ ಆಡುವಾಗ ತಂಡವು ಪಂದ್ಯವನ್ನು ಗೆದ್ದಿರುವುದು. ಇಂಗ್ಲೆಂಡ್ ಗೆಲುವಿಗೆ 258 ರನ್ ಗಳ ಗುರಿ ಇತ್ತು. ಒಂದು ಬಾರಿ ಇಂಗ್ಲೆಂಡ್ 80 ರನ್ ಗಳಿಗೆ 5 ವಿಕೆಟ್ ಕಳೆದುಕೊಂಡಿತ್ತು. ಆದರೆ ಜೋ ರೂಟ್ ಮತ್ತು ನಾಯಕ ಬೆನ್ ಸ್ಟೋಕ್ಸ್ 6ನೇ ವಿಕೆಟ್‌ಗೆ 121 ರನ್‌ಗಳ ಜೊತೆಯಾಟವನ್ನು ಆಡಿದರು.
The end of a thrilling five days in Wellington. Neil Wagner (4-62) stars with the ball on the final day at the Basin Reserve. The Series drawn 1-1. Catch up on the scores | https://t.co/i5aMjAngcf. #NZvENG pic.twitter.com/8Cr2dCmZ28
— BLACKCAPS (@BLACKCAPS) February 28, 2023
ಇದನ್ನೂ ಓದಿ: Rest of India Squad: ಕನ್ನಡಿಗನಿಗೆ ಒಲಿದ ನಾಯಕನ ಪಟ್ಟ, ಸರ್ಫರಾಜ್ ಖಾನ್ಗಿಲ್ಲ ಸ್ಥಾನ
ಹೀರೋ ಆದ ವ್ಯಾಗ್ನರ್:
ಇನ್ನು, ನೀಲ್ ವ್ಯಾಗ್ನರ್ ನ್ಯೂಜಿಲೆಂಡ್ ಗೆಲುವಿನ ಹೀರೋ ಆದರು. ಎರಡನೇ ಇನ್ನಿಂಗ್ಸ್‌ನಲ್ಲಿ 62 ರನ್‌ಗಳಿಗೆ 4 ವಿಕೆಟ್ ಪಡೆದು ಮಿಂಚಿದರು. ಇವರಲ್ಲದೆ ನಾಯಕ ಟಿಮ್ ಸೌಥಿ 3 ವಿಕೆಟ್ ಪಡೆದರು. ಮ್ಯಾಟ್ ಹೆನ್ರಿ ಕೂಡ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಟಿಮ್ ಸೌಥಿ ನಾಯಕತ್ವದಲ್ಲಿ ನ್ಯೂಜಿಲೆಂಡ್‌ನ ಮೊದಲ ಗೆಲುವು ಇದಾಗಿದೆ.
ಈ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 435/8 ಸ್ಕೋರ್‌ಗೆ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ತಂಡ ಮೊದಲ ಇನಿಂಗ್ಸ್‌ನಲ್ಲಿ 209 ರನ್‌ಗಳಿಗೆ ಆಲೌಟ್ ಆಗಿತ್ತು. ಇದಾದ ನಂತರ ಇಂಗ್ಲೆಂಡ್ ನ್ಯೂಜಿಲೆಂಡ್‌ಗೆ ಫಾಲೋ ಆನ್ ನೀಡಿತು. ನ್ಯೂಜಿಲೆಂಡ್‌ನ ಮಾಜಿ ನಾಯಕ ಕೇನ್ ವಿಲಿಯಮ್ಸನ್ ಎರಡನೇ ಇನ್ನಿಂಗ್ಸ್‌ನಲ್ಲಿ 132 ರನ್ ಗಳಿಸಿದರೆ, ಟಾಮ್ ಬ್ಲಂಡೆಲ್ 90 ರನ್ ಗಳಿಸಿದರು. ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್‌ನಲ್ಲಿ 483 ರನ್ ಗಳಿಸಿತು. ಅಂದರೆ, ಆತಿಥೇಯ ತಂಡ ಇಂಗ್ಲೆಂಡ್ ನ 226 ರನ್ ಗಳ ಮುನ್ನಡೆ ಸಾಧಿಸಿದೆ. ಅದೂ ಅಲ್ಲದೆ 258 ರನ್ ಗಳ ಟಾರ್ಗೆಟ್ ನೀಡಲಾಗಿತ್ತು. ಪ್ರವಾಸಿ ತಂಡ ಕೇವಲ 256 ರನ್ ಗಳಿಸಲಷ್ಟೇ ಶಕ್ತವಾಯಿತು. ಟೆಸ್ಟ್‌ನಲ್ಲಿ ಈ ರೀತಿ ನಾಲ್ಕನೇ ಬಾರಿ ಸಂಭವಿಸಿದೆ. ತಂಡವು ಫಾಲೋ-ಆನ್ ನಂತರ ಪಂದ್ಯವನ್ನು ಗೆದ್ದಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ