US Open 2020: ಅನೇಕ ಸ್ಟಾರ್ ಆಟಗಾರರ ಅನುಪಸ್ಥಿತಿಯಲ್ಲಿ ಪ್ರಾರಂಭವಾಗಿರುವ ಯುಎಸ್ ಓಪನ್ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಿಂದ ವಿಶ್ವದ ನಂಬರ್ ಒನ್ ಆಟಗಾರ ನೊವಾಕ್ ಜೊಕೊವಿಕ್ ಅನಿರೀಕ್ಷಿತವಾಗಿ ನಿರ್ಗಮಿಸಿದ್ದಾರೆ. ನಿನ್ನೆ ಭಾನುವಾರ ನಡೆದ ಟೂರ್ನಿಯ ಪ್ರಿಕ್ವಾರ್ಟರ್ ಫೈನಲ್ ಪಂದ್ಯದ ಮೊದಲ ಸೆಟ್‌ನಲ್ಲಿ 5-6 ಗೇಮ್‌ಗಳ ಅಂತರದಲ್ಲಿ ಸ್ಪೇನ್‌ನ ಆಟಗಾರ ಪಾಬ್ಲೊ ಕರ್ರೆನೊ ಬುಸ್ಟಾ ಎದುರು ಹಿನ್ನಡೆಯಲ್ಲಿದ್ದ ನೊವಾಕ್, ಈ ಸಂದರ್ಭದಲ್ಲಿ ಲೈನ್ ಅಂಪೈರಿಂಗ್ ಮಾಡುತ್ತಿದ್ದ ಮಹಿಳಾ ಸಿಬ್ಬಂದಿ ಕಡೆಗೆ ಚೆಂಡಿನಲ್ಲಿ ಜೋರಾಗಿ ಹೊಡೆದಿದ್ದಾರೆ.
ಜೊಕೊವಿಕ್ ಹೊಡೆದ ಚೆಂಡು ಲೈನ್ ಜಡ್ಜ್ ಗಂಟಲಿಗೆ ಬಡಿದಿದೆ. ಈ ಕೃತ್ಯ ಉದ್ದೇಶಪೂರ್ವಕವಾಗಿ ನಡೆದಿಲ್ಲದಿದ್ದರೂ ಚೆಂಡು ಬಲವಾಗಿ ಬಡಿದ ಕಾರಣಕ್ಕೆ ಮಹಿಳಾ ಜಡ್ಜ್ ಕುಸಿದು ಬಿದ್ದಿದ್ದಾರೆ. ಜೊಕೊವಿಕ್ ಮತ್ತು ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
IPL 2020 Schedule: ಬಹುನಿರೀಕ್ಷಿತ ಐಪಿಎಲ್ 2020 ವೇಳಾಪಟ್ಟಿ ಬಿಡುಗಡೆ: ಇಲ್ಲಿದೆ ಸಂಪೂರ್ಣ ಮಾಹಿತಿ
Top-seeded Novak Djokovic was defaulted from his fourth-round match at the #USOpen after he accidentally hit a line judge with a tennis ball Sunday. pic.twitter.com/TTstxZB2Jw
— ESPN (@espn) September 6, 2020
ಈ ಮೂಲಕ ಉದ್ದೇಶ ಪೂರ್ವಕವಾಗಿ ಈ ಕೆಲಸ ಮಾಡದೇ ಇದ್ದರೂ, ಇದರಿಂದ ಲೈನ್ ಅಂಪೈರ್‌ಗೆ ತೊಂದರೆಯಾದ ಕಾರಣ ಟೂರ್ನಿಯ ಅಧಿಕಾರಿಗಳು ವಿಶ್ವದ ನಂ.1 ಆಟಗಾರನನ್ನು ನಿಯಮಾನುಸಾರ ಅನರ್ಹಗೊಳಿಸಬೇಕಾಯಿತು.
ಪಂದ್ಯದ ನಂತರ ಮಾಧ್ಯಮ ಹೇಳಿಕೆ ನೀಡದ ಜೊಕೊವಿಕ್, ಸಾಮಾಜಿಕ ಜಾಲತಾಣದ ಮೂಲಕ ಕ್ಷಮೆಯಾಚಿಸಿದ್ದಾರೆ. "ಈ ಇಡೀ ಪರಿಸ್ಥಿತಿಯು ನನಗೆ ನಿಜವಾಗಿಯೂ ದುಃಖ ತರಿಸಿದೆ" ಎಂದು ಜೊಕೊವಿಕ್ ಬರೆದಿದ್ದಾರೆ.
"ಈ ಘಟನೆಯಿಂದ ನನಗೆ ಅತೀವ ಬೇಸರವಾಗಿದೆ. ಲೈನ್ ಅಂಪೈರ್ ಬಗ್ಗೆ ವಿಚಾರಿಸಿದ್ದೇನೆ, ದೇವರ ದಯೆಯಿಂದ ಆಕೆ ಈಗ ಚೇತರಿಸಿದ್ದಾರೆ ಎಂದು ಟೂರ್ನಿಯ ಸಂಘಟಕರು ತಿಳಿಸಿದ್ದಾರೆ. ಅವರಿಗೆ ಅಂತಹ ಒತ್ತಡವನ್ನು ಉಂಟುಮಾಡಿದ್ದಕ್ಕೆ ನನಗೆ ತುಂಬಾ ವಿಷಾದವಿದೆ. ಅವರ ಗೌಪ್ಯತೆಯನ್ನು ಗೌರವಿಸಲು ನಾನು ಅವರ ಹೆಸರನ್ನು ಬಹಿರಂಗಪಡಿಸುತ್ತಿಲ್ಲ. ಅನರ್ಹತೆಗೆ ಸಂಬಂಧಿಸಿದಂತೆ, ನಾನು ಹಿಂತಿರುಗಿ ನನ್ನ ನಿರಾಶೆಯ ಬಗ್ಗೆ ಕೆಲಸ ಮಾಡಬೇಕಾಗಿದೆ ಮತ್ತು ಆಟಗಾರ ಹಾಗೂ ಮನುಷ್ಯನಾಗಿ ನನ್ನ ಬೆಳವಣಿಗೆ ಮತ್ತು ವಿಕಾಸದ ಪಾಠವಾಗಿ ಈ ಎಲ್ಲವನ್ನು ಒಪ್ಪಿಕೊಳ್ಳಬೇಕಿದೆ. ನನ್ನ ನಡವಳಿಕೆಗೆ ಸಂಬಂಧಿಸಿದಂತೆ ಯುಎಸ್ ಓಪನ್ ಪಂದ್ಯಾವಳಿ ಮತ್ತು ಎಲ್ಲರಿಗೂ ನಾನು ಕ್ಷಮೆಯಾಚಿಸುತ್ತೇನೆ" ಎಂದು ಜೊಕೊವಿಕ್ ಹೇಳಿದ್ದಾರೆ.
IPL ನಲ್ಲಿ ಪರ್ಪಲ್ ಕ್ಯಾಪ್ ಗೆದ್ದ ಭಾರತದ 4 ಬೌಲರುಗಳು ಇವರೇ..!
This whole situation has left me really sad and empty. I checked on the lines person and the tournament told me that thank God she is feeling ok. I‘m extremely sorry to have caused her such stress. So unintended. So… https://t.co/UL4hWEirWL
— Novak Djokovic (@DjokerNole) September 6, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ