News18 India World Cup 2019

'ಕುಕ್' ಕನಸಿನ ತಂಡದಲ್ಲಿ ಯಾವೊಬ್ಬ ಭಾರತೀಯ ಆಟಗಾರನಿಗೂ ಸ್ಥಾನವಿಲ್ಲ: ಅಭಿಮಾನಿಗಳ ಆಕ್ರೋಶ

news18
Updated:September 6, 2018, 3:55 PM IST
'ಕುಕ್' ಕನಸಿನ ತಂಡದಲ್ಲಿ ಯಾವೊಬ್ಬ ಭಾರತೀಯ ಆಟಗಾರನಿಗೂ ಸ್ಥಾನವಿಲ್ಲ: ಅಭಿಮಾನಿಗಳ ಆಕ್ರೋಶ
news18
Updated: September 6, 2018, 3:55 PM IST
ನ್ಯೂಸ್ 18 ಕನ್ನಡ

ಭಾರತ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದ ಬಳಿಕ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಲಿರುವ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ಅಲೆಸ್ಟರ್ ಕುಕ್ ಇದೀಗ ಟೀಂ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಕಾರಣ ಕುಕ್​​​ ಅವರ ಸಾರ್ವಕಾಲಿಕ ಟೆಸ್ಟ್ ತಂಡ. ಅಲೆಸ್ಟರ್ ನಿವೃತ್ತಿಯಾಗುವ ಮೊದಲು ಕನಸಿನ ಟೆಸ್ಟ್ ತಂಡವನ್ನು ಆಯ್ಕೆ ಮಾಡಿದ್ದಾರೆ. ಜೊತೆಗೆ ಭಾರತೀಯ ಅಭಿಮಾನಿಗಳ ಸಿಟ್ಟಿಗೂ ಎಡೆಮಾಡಿಕೊಟ್ಟಿದ್ದಾರೆ.

ಕುಕ್ ಅವರ ಕನಸಿನ ತಂಡಕ್ಕೆ ಇಂಗ್ಲೆಂಡ್​ನ ಮಾಜಿ ಕ್ರಿಕೆಟಿಗ ಗ್ರಹಾಂ ಗೂಚ್ ನಾಯಕರಾಗಿದ್ದಾರೆ. ಆರಂಭಿಕರಾಗಿ ಮ್ಯಾಥ್ಯೂ ಹೇಡನ್ ಹಾಗೂ ಗೋಚ್ ಕಣಕ್ಕಿಳಿದರೆ, ಆ ಬಳಿಕ ಬ್ರಿಯಾನ್ ಲಾರಾ, ರಿಕಿ ಪಾಂಟಿಂಗ್, ಎಬಿ ಡಿವಿಲಿಯರ್ಸ್, ಕುಮಾರ ಸಂಗಕ್ಕರ ಹಾಗೂ ಜಾಕ್ ಕಾಲೀಸ್ ಕಣಕ್ಕಿಳಿಯಲಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ಮುತ್ತಯ್ಯ ಮುರುಳೀಧರನ್ ಹಾಗೂ ಶೇನ್ ವಾರ್ನ್ ಸ್ಥಾನ ಪಡೆದಿದ್ದರೆ, ವೇಗದ ಬೌಲಿಂಗ್​​ನಲ್ಲಿ ಗ್ಲೆನ್ ಮೆಗ್ರಾತ್ ಹಾಗೂ ಜೇಮ್ಸ್ ಆ್ಯಂಡರ್ಸನ್ ಇದ್ದಾರೆ.

ಹೀಗೆ ಅಲೆಸ್ಟರ್ ಕುಕ್ ತನ್ನ ಕನಸಿನ ತಂಡದಲ್ಲಿ ಭಾರತದ ಯಾವೊಬ್ಬ ಆಟಗಾರನಿಗೂ ಸ್ಥಾನ ನೀಡಿಲ್ಲ. ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್​ಗೂ ಸ್ಥಾನ ನೀಡದೇ ಇರುವುದು ಭಾರತೀಯ ಅಭಿಮಾನಿಗಳ ಸಿಟ್ಟಿಗೆ ಎಡೆಮಾಡಿಕೊಟ್ಟಿದೆ. ಸಚಿನ್ ಇಲ್ಲದೆ ಸಾರ್ವಕಾಲಿಕ ಟೆಸ್ಟ್ ತಂಡ ಪೂರ್ಣಗೊಳ್ಳಲು ಸಾಧ್ಯವಿಲ್ಲ ಎಂದು ಟೀಂ ಇಂಡಿಯಾ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ.

First published:September 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...