Paralympics- ಟೋಕಿಯೋಗೆ ಬರಲಾಗದ ಅಫ್ಘನ್ ಸ್ಪರ್ಧಿಗಳು; ಪಾರಾಲಿಂಪಿಕ್ಸ್​ನಲ್ಲಿ ಇಲ್ಲ ಅಫ್ಘಾನಿಸ್ತಾನ ಸ್ಪರ್ಧೆ

ಅಫ್ಘಾನಿಸ್ತಾನದಿಂದ ಹೊರಗೆ ವಿಮಾನ ಹಾರಾಟ ನಿಂತಿರುವ ಹಿನ್ನೆಲೆಯಲ್ಲಿ ಪ್ಯಾರಾಲಿಂಪಿಕ್ಸ್ (Tokyo Paralympics 2020) ನಡೆಯುವ ಟೋಕಿಯೋ ನಗರಕ್ಕೆ ಅಫ್ಘನ್ ಕ್ರೀಡಾಪಟುಗಳು ಬರಲು ಸಾಧ್ಯವಾಗಿಲ್ಲ. ಹೀಗಾಗಿ, ಉದ್ಘಾಟನಾ ಸಮಾರಂಭದ ಪರೇಡ್​ನಲ್ಲಿ ಅಫ್ಘನ್ ಧ್ವಜವನ್ನ ಮಾತ್ರ ಹಾರಾಟ ಮಾಡಲಾಯಿತು.

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅಫ್ಘಾನಿಸ್ತಾನದ ಧ್ವಜದ ಮೆರವಣಿಗೆ

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದಲ್ಲಿ ಅಫ್ಘಾನಿಸ್ತಾನದ ಧ್ವಜದ ಮೆರವಣಿಗೆ

 • News18
 • Last Updated :
 • Share this:
  ಟೋಕಿಯೋ: ತಾಲಿಬಾನ್ (Taliban) ದಾಳಿ ಬಳಿಕ ಅಫ್ಘಾನಿಸ್ತಾನ (Afghanistan) ಗೊಂದಲದ ಗೂಡಾಗಿದೆ. ಮುಂದೆ ಏನಾಗುತ್ತದೋ ಎಂಬ ಅನಿಶ್ಚಿತತೆ ಮತ್ತು ಭಯ ಬಹುತೇಕರನ್ನ ಕಾಡುತ್ತಿದೆ. ಪರಿಣಾಮವಾಗಿ ಈ ಬಾರಿಯ ಪ್ಯಾರಾಲಿಂಪಿಕ್ಸ್​ನಲ್ಲಿ (Tokyo Paralympics 2021) ಅಫ್ಘಾನಿಸ್ತಾನದ ಸ್ಪರ್ಧಿಗಳು ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಪಾರಾಲಿಂಪಿಕ್ಸ್ ನಡೆಯುತ್ತಿರುವ ಜಪಾನ್ ದೇಶದ ಟೋಕಿಯೋಗೆ ಅಫ್ಘಾನಿಸ್ತಾನದ ಯಾವ ಸ್ಪರ್ಧಾಳುವೂ ಬರಲಿಲ್ಲ. ನಿನ್ನೆ ರಾತ್ರಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಅಫ್ಘನ್ ಅಥ್ಲೀಟ್​ಗಳ ಅನುಪಸ್ಥಿತಿ ಇದ್ದರೂ ಆ ದೇಶದ ಧ್ವಜವನ್ನು ಪರೇಡ್​ನಲ್ಲಿ (Afghanistan Flag in Parade) ಸಾಗಿಸಲಾಗಿದ್ದು ವಿಶೇಷ. ಒಲಿಂಪಿಕ್ಸ್ ಅವಕಾಶ ವಂಚಿತ ಅಫ್ಘಾನ್ ಕ್ರೀಡಾಪಟುಗಳಿಗೆ ನೈತಿಕ ಬೆಂಬಲವಾಗಿ ಪರೇಡ್​ನಲ್ಲಿ ಅಫ್ಘಾನ್ ಧ್ವಜವನ್ನ ಒಳಗೊಳ್ಳುವ ನಿರ್ಧಾರ ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಕಮಿಟಿ (ಐಪಿಸಿ) ಯದ್ದಾಗಿದೆ. ಇದು ವಿಶ್ವಕ್ಕೆ ನಾನು ಕಳುಹಿಸಿರುವ ಶಾಂತಿ ಸಂದೇಶ ಎಂದು ಐಪಿಸಿ ಅಧ್ಯಕ್ಷ ಆಂಡ್ರ್ಯೂ ಪಾರ್ಸನ್ಸ್ ಹೇಳಿದರು.

  “ಇದು ಒಗ್ಗಟ್ಟಿನ ಪ್ರದರ್ಶನವಾಗಿದೆ. ನಿನ್ನೆ ಬೋರ್ಡ್ ಮೀಟಿಂಗ್ ವೇಳೆ ಈ ಬಗ್ಗೆ ನಿರ್ಧಾರ ಮಾಡಿದ್ದೆವು. ಅಫ್ಘನ್ ಧ್ವಜವನ್ನ ಪೆರೇಡ್​ನಲ್ಲಿ ಒಳಗೊಂಡರೆ ಇಡೀ ವಿಶ್ವಕ್ಕೆ ಏಕತೆ ಮತ್ತು ಶಾಂತಿಯ ಸಂದೇಶವನ್ನು ಸಾರಿದಂತಾಗುತ್ತದೆಯಾದ್ದರಿಂದ ಅದಕ್ಕೆ ಹೆಚ್ಚು ಪ್ರಚಾರ ಕೊಡುವುದು ಮುಖ್ಯ ಎಂದನಿಸಿತು… ಅಫ್ಘಾನ್ ಸ್ಪರ್ಧಾಳು ಇಲ್ಲಿಗೆ ಬಂದಿದ್ದರೆ ಚೆನ್ನಾಗಿರುತ್ತಿತ್ತು. ಆದರೆ, ದುರದೃಷ್ಟಕ್ಕೆ ಅವರು ಬರಲಾಗಿಲ್ಲ. ಆದರೆ, ಅವರ ಮನಸು ನಮ್ಮ ಜೊತೆಯೇ ಇದೆ” ಎಂದು ಉದ್ಘಾಟನಾ ಸಮಾರಂಭಕ್ಕೆ ಮುನ್ನ ಪಾರ್ಸನ್ಸ್ ತಿಳಿಸಿದರು.

  ಇದನ್ನೂ ಓದಿ: ಅಫ್ಘನ್​ ಕ್ರಿಕೆಟ್​ ಬೋರ್ಡಿಗೆ ಹಂಗಾಮಿ ಅಧ್ಯಕ್ಷನನ್ನು ನೇಮಿಸಿದ ತಾಲಿಬಾನ್

  ಅಫ್ಘನ್ ಅಥ್ಲೀಟ್​ಗಳು ಯಾಕೆ ಬರಲಾಗಲಿಲ್ಲ?: ಅಫ್ಘಾನಿಸ್ತಾನವು ತಾಲಿಬಾನ್ ಸಂಘಟನೆಯ ವಶವಾದ ಬೆನ್ನಲ್ಲೇ ಅಲ್ಲಿ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. ಅಫ್ಘಾನಿಸ್ತಾನಕ್ಕೆ ಹೊರಗಿನಿಂದ ಯಾವ ವಿಮಾನವೂ ಬರುವಂತಿಲ್ಲ, ಹೊರಗೂ ಹೋಗುವಂತಿಲ್ಲ. ಪಾಕಿಸ್ತಾನದೊಂದಿಗಿನ ಗಡಿಯನ್ನೂ ತಾಲಿಬಾನ್ ಬಂದ್ ಮಾಡಿದೆ. ಹೀಗಾಗಿ, ಅಫ್ಘನಿಸ್ತಾನದ ಕ್ರೀಡಾಪಟುಗಳು ಟೋಕಿಯೋಗೆ ಬರಲು ಸಾಧ್ಯವಾಗಿಲ್ಲ ಎಂಬುದು ತಿಳಿದುಬಂದಿದೆ.

  ಭಾರತದ ತಂಡ: ಕೆಲ ವರ್ಷಗಳಿಂದ ಪ್ರತೀ ಒಲಿಂಪಿಕ್ಸ್ ನಂತರ ವಿಶೇಷ ಚೇತನರಿಗಾಗಿ ಪಾರಾಲಿಂಪಿಕ್ಸ್ ನಡೆಸಿಕೊಂಡು ಬರಲಾಗುತ್ತಿದೆ. ಸಮ್ಮರ್ ಒಲಿಂಪಿಕ್ಸ್ ನಡೆದ ನಗರದಲ್ಲೇ ಈ ಪಾರಾಲಿಂಪಿಕ್ಸ್ ಕೂಡ ನಡೆಯುತ್ತದೆ. ಈ ಬಾರಿಯ ಪಾರಾಲಿಂಪಿಕ್ಸ್ 16ನೆಯದ್ದಾಗಿದೆ. ಸೆ. 5ರವರೆಗೆ ನಡೆಯಲಿರುವ ಈ ಕ್ರೀಡಾಕೂಟದಲ್ಲಿ 163 ದೇಶಗಳಿಂದ 4,500ಕ್ಕೂ ಹೆಚ್ಚು ಅಥ್ಲೀಟ್​ಗಳು ಪಾಲ್ಗೊಳ್ಳುತ್ತಿದ್ಧಾರೆ. ಭಾರತದಿಂದ 54 ಅಥ್ಲೀಟ್​ಗಳು ಅಲ್ಲಿಗೆ ಹೋಗಿದ್ಧಾರೆ. ಈ 16 ಪಾರಾಲಿಂಪಿಕ್ಸ್​ನಲ್ಲಿ ಭಾರತದಿಂದ ಕಳುಹಿಸಲಾದ ಅತಿ ದೊಡ್ಡ ತಂಡ ಈ ಬಾರಿಯದ್ದಾಗಿದೆ. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತ ಇದೂವರೆಗೆ ಗೆದ್ದಿರುವುದು 12 ಪದಕಗಳನ್ನ ಮಾತ್ರ. ನಾಲ್ಕು ಚಿನ್ನ, ನಾಲ್ಕು ಬೆಳ್ಳಿ ಮತ್ತು ನಾಲ್ಕು ಕಂಚಿನ ಪದಕಗಳಿವೆ. ಅದರೆ, ಈ ಬಾರಿ ಹೆಚ್ಚು ಪದಕಗಳನ್ನ ಭಾರತೀಯರು ಗೆಲ್ಲುವ ನಿರೀಕ್ಷೆ ಇದೆ.

  ಇದನ್ನೂ ಓದಿ: ಶೈಲಿ ಸಿಂಗ್​ಗೆ ಬೆಳ್ಳಿ; ವಿಶ್ವ ಜೂನಿಯರ್ ಅಥ್ಲೆಟಿಕ್ಸ್ ಕೂಟದಲ್ಲಿ ಭಾರತದ ಹೊಸ ದಾಖಲೆ

  ಪ್ಯಾರಾಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತೀಯರಲ್ಲಿ ಕನ್ನಡಿಗ ಗಿರೀಶ್ ನಾಗರಾಜೇಗೌಡ ಕೂಡ ಇದ್ದಾರೆ. ಹೈಜಂಪ್ ಸ್ಪರ್ಧಾಳುವಾದ ಇವರು 2012ರ ಲಂಡನ್ ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಗೆದ್ದಿದ್ದರು. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಜಾವೆಲಿನ್ ಪಟು ನೀರಜ್ ಚೋಪ್ರಾ ಪದಕ ಗೆದ್ದು ವಿಜೃಂಬಿಸಿದರೆ, ಪ್ಯಾರಾಲಿಂಪಿಕ್ಸ್​ನಲ್ಲಿ ಮತ್ತೊಬ್ಬ ಜಾವೆಲಿನ್ ಹೀರೋ ದೇವೇಮದ್ರ ಝಝಾರಿಯಾ ಅವರು ಹ್ಯಾಟ್ರಿಕ್ ಚಿನ್ನದ ಪದಕಗಳ ಮೇಲೆ ಕಣ್ಣಿಟ್ಟಿದ್ಧಾರೆ. ಇವರು 2004 ಮತ್ತು 2016ರ ಪ್ಯಾರಾಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಈ ಬಾರಿಯೂ ಇವರು ಕಣದಲ್ಲಿದ್ದಾರೆ.
  Published by:Vijayasarthy SN
  First published: