Michael Jackson & Gandhi- ಒಂದೇ ಕ್ಲಬ್​ನಲ್ಲಿ ಮಹಾತ್ಮ ಗಾಂಧಿ, ಮೈಕೇಲ್ ಜ್ಯಾಕ್ಸನ್; ಅದ್ಹೇಗೆ?

Sportsmen in the name of great personalities- ಬ್ರೆಜಿಲ್ ದೇಶದ ಅಥ್ಲೆಟಿಕೋ ಗೋಯೇನೀನ್ಸೆ ಎಂಬ ಕ್ಲಬ್​ನಲ್ಲಿ ಮೈಕೇಲ್ ಜಾಕ್ಸನ್, ಮಹಾತ್ಮ ಗಾಂಧಿ, ಜಾನ್ ಲೆನ್ನಾನ್, ಗ್ಲೇಡಿಯೇಟರ್ ಹೆಸರಿನ ಆಟಗಾರರು ಆಡಿದ ನಿದರ್ಶನ ಇದೆ.

ಮೈಕೇಲ್ ಜ್ಯಾಕ್ಸನ್

ಮೈಕೇಲ್ ಜ್ಯಾಕ್ಸನ್

 • News18
 • Last Updated :
 • Share this:
  ಬೆಂಗಳೂರು: ಮಹಾತ್ಮ ಗಾಂಧಿ, ಮೈಕೇಲ್ ಜ್ಯಾಕ್ಸನ್ ಮತ್ತು ಜಾನ್ ಲೆನಾನ್ (Mahatma Gandhi, Michael Jackson and John Lennon) ಈ ಮೂವರು ಒಂದೇ ಕ್ಲಬ್​ನಲ್ಲಿ ಆಡಿದ ಕುರಿತ ಒಂದು ಪೋಸ್ಟ್ ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇವರು ಇದ್ದ ಕಾಲಘಟ್ಟವೇ ಬೇರೆ, ಅದು ಹೇಗೆ ಒಟ್ಟಿಗೆ ಇರಲು ಸಾಧ್ಯ ಎಂದು ಕೇಳಬಹುದು. ಆದರೆ, ಮೇಲೆ ಹೇಳಿದ ಈ ಮೂರು ಹೆಸರುಗಳು ಐತಿಹಾಸಿಕ ವ್ಯಕ್ತಿಗಳದ್ದಲ್ಲ. ಬ್ರೆಜಿಲ್ ದೇಶದ ಎರಡನೇ ಡಿವಿಷನ್ ಫುಟ್ಬಾಲ್ ಕ್ಲಬ್ (Brazilian Serie B Football club) ಅಥ್ಲೆಟಿಕೋ ಗೋಯೇನೀನ್ಸೆ (Athletico Goianiense) ತಂಡದ ಫುಟ್ಬಾಲ್ ಆಟಗಾರರಾಗಿದ್ದಾರೆ. ವಿಚಿತ್ರ ಎಂದರೆ ಈ ತಂಡದಲ್ಲಿ ಗ್ಲೇಡಿಯೇಟರ್ ಹೆಸರಿನ ಒಬ್ಬ ಆಟಗಾರನೂ ಇದ್ದಾನೆ. ಅಂದಹಾಗೆ, ಇದು ಇತ್ತೀಚಿನ ಸುದ್ದಿಯಲ್ಲ. ಎಂಟು ವರ್ಷಗಳ ಹಿಂದೆ ಮೈಕೇಲ್ ಜ್ಯಾಕ್ಸನ್ ಎಂಬ ಫುಟ್ಬಾಲ್ ಆಟಗಾರ ಗೋಯೇನೀನ್ಸೆ ಕ್ಲಬ್​ಗೆ ಸೇರಿದ್ದನ್ನು ಕ್ಲಬ್​ನ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು. ಈ ಸಂಗತಿ ಆಗಾಗ ಉಲ್ಲೇಖವಾಗುತ್ತಿರುತ್ತದೆ. 10 ದಿನಗಳ ಹಿಂದೆ ಗಾಂಧಿ ಜಯಂತಿ ಇದ್ದ ವೇಳೆ ಮತ್ತೊಮ್ಮೆ ಇದು ಮುನ್ನೆಲೆಗೆ ಬಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಿರಬಹುದು.

  ಅಡ್ಡ ಹೆಸರುಗಳು ಕಾಮನ್: ಬ್ರೆಜಿಲ್ ದೇಶದಲ್ಲಿ ಫುಟ್ಬಾಲ್ ಆಟಗಾರರು ಸಾಮಾನ್ಯವಾಗಿ ಅಡ್ಡ ಹೆಸರು, ಫ್ಯಾಮಿಲಿ ಹೆಸರು ಇತ್ಯಾದಿಯನ್ನ ಮಿಶ್ರ ಮಾಡಿ ಇಟ್ಟುಕೊಳ್ಳುತ್ತಾರೆ. ಕೆಲವೊಮ್ಮೆ ಐತಿಹಾಸಿಕ ವ್ಯಕ್ತಿಗಳ ಹೆಸರನ್ನ ತಮ್ಮ ಅಡ್ಡ ಹೆಸರಾಗಿ ಇಟ್ಟುಕೊಳ್ಳುತ್ತಾರೆ. ಹೀಗಾಗಿ, ಇವರ ಹೆಸರುಗಳನ್ನ ಕೇಳಲು ಮತ್ತು ನೋಡಲು ವಿಚಿತ್ರವಾದರೂ ಖುಷಿ ಕೊಡುತ್ತೆ. ನಮ್ಮಲ್ಲಿ ರೌಡಿಗಳಿಗೆ ಅಡ್ಡ ಹೆಸರು ಇರುವಂತೆ. ಹಂಡೆ, ಹಂದಿ, ಪೆಗ್ ಇತ್ಯಾದಿ ಅಸಹ್ಯದ ಅಡ್ಡ ಹೆಸರುಗಳನ್ನ ನಮ್ಮ ರೌಡಿಗಳು ಹೊಂದಿರುತ್ತಾರೆ. ಅಲ್ಲಿ ದೊಡ್ಡ ವ್ಯಕ್ತಿಗಳ ಹೆಸರನ್ನ ಇಟ್ಟುಕೊಳ್ಳುತ್ತಾರೆ.

  ಉದಾಹರಣೆಗೆ 25 ವರ್ಷದ ಎಡ್ರಿಯಾನೊ ಮೈಕೇಲ್ ಜಾಕ್ಸನ್. ಈತನ ನಿಜವಾದ ಹೆಸರು ಕಾರ್ಲೊಸ್ ಅಡ್ರಿಯಾನೋ ಸೌಸಾ ಕ್ರುಜ್. ಈತ ಗೋಲ್ ಹೊಡೆದಾಗ ಮೈಕೇಲ್ ಜ್ಯಾಕ್ಸನ್ ರೀತಿ ಡ್ಯಾನ್ಸ್ ಮಾಡುತ್ತಾ ಸೆಲೆಬ್ರೇಟ್ ಮಾಡುತ್ತಾನೆ. ಹೀಗಾಗಿ, ಈತನಿಗೆ ಮೈಕೇಲ್ ಜ್ಯಾಕ್ಸನ್ ಅಂತ ನಿಕ್ ನೇಮ್ ಬಂದುಬಿಟ್ಟಿದೆ.

  ಮಹಾತ್ಮ ಗಾಂಧಿ:

  ಇನ್ನು, ಮಹಾತ್ಮ ಗಾಂಧಿ ವಿಚಾರಕ್ಕೆ ಬಂದರೆ ಈತ ಪೂರ್ಣ ಹೆಸರು ಮಹಾತ್ಮ ಗಾಂಧಿ ಹೆಬರ್​ಪಯೋ ಮ್ಯಾಟೋಸ್ ಪಿರೆಸ್. ಈತನ ತಂದೆ ಮಹಾತ್ಮ ಗಾಂಧಿ ಅವರ ಅಭಿಮಾನಿಯಾಗಿದ್ದರಿಂದ ತಮ್ಮ ಮಗನಿಗೆ ಮಹಾತ್ಮ ಗಾಂಧಿ ಅಂತ ಹೆಸರಿಟ್ಟಿರಬಹುದು. ನಮ್ಮಲ್ಲಿ ಕರುಣಾನಿಧಿ ಅವರು ತಮ್ಮ ಮಗನಿಗೆ ಸ್ಟಾಲಿನ್ ಅಂತ ಹೆಸರಿಟ್ಟಿಲ್ಲವೇ ಹಾಗೆ. 29 ವರ್ಷದ ಮಹಾತ್ಮ ಗಾಂಧಿ 2013ರಲ್ಲಿ ಅಥ್ಲೆಟಿಕೋ ಗೋಯಾನೀನ್ಸೆ ತಂಡವನ್ನು ಸೇರಿದರೂ ಬಳಿಕ ಇಪೋರಾ ಎಂಬ ಕ್ಲಬ್ ಸೇರಿಕೊಂಡು ಆಡುತ್ತಿದ್ಧಾರೆ.

  ಇನ್ನು, ದಶಕಗಳ ಹಿಂದಿನ ಖ್ಯಾಗ ಪಾಪ್ ಗಾಯಕ ಜಾನ್ ಲೆನ್ನಾನ್ ಹೆಸರಿನ ಫುಟ್ಬಾಲ್ ಆಟಗಾರನ ಪೂರ್ಣ ಹೆಸರು ಜಾನ್ ಲೆನ್ನಾನ್ ಸಿಲ್ವಾ ಸ್ಯಾಂಟೋಸ್. ಇನ್ನು, ಅಥ್ಲೆಟಿಕೋ ಗೋಯೇನೀನ್ಸೆ ಕ್ಲಬ್​ನಲ್ಲಿ ರಫೇಲ್ ಗ್ಲೇಡಿಯೇಟರ್ ಎಂಬ ಆಟಗಾರನೂ ಇದ್ದ.

  ಇದನ್ನೂ ಓದಿ: Purple Cap- ಹರ್ಷಲ್ ಪಟೇಲ್​ಗೆ ಪರ್ಪಲ್ ಕ್ಯಾಪ್? ಪೈಪೋಟಿ ಸಾಧ್ಯತೆ ಒಬ್ಬರಿಂದ ಮಾತ್ರ

  ಮಹಿಳಾ ಮೈಕೇಲ್ ಜ್ಯಾಕ್ಸನ್:

  ವಿಶ್ವದ ಬೇರೆ ಕಡೆಯೂ ಕೆಲ ಫುಟ್ಬಾಲ್ ತಂಡಗಳಲ್ಲಿ ಇಂಥ ಕೆಲ ಕುತೂಹಲಕಾರಿ ಹೆಸರುಗಳನ್ನ ಕೇಳಬಹುದು. ಅಥ್ಲೆಟಿಕೋ ಗೋಯೇನೀನ್ಸೆ ಕ್ಲಬ್​ನಲ್ಲಿ ಮೈಕೇಲ್ ಜ್ಯಾಕ್ಸನ್ ಇದ್ದಂತೆ ಬ್ರೆಜಿಲ್ ದೇಶದ ಮಹಿಳಾ ತಂಡದಲ್ಲೂ ಮೈಕೇಲ್ ಜಾಕ್ಸನ್ ಎಂಬ ಆಟಗಾರ್ತಿ ಆಡಿದ್ದು ಇದೆ. ಈಕೆಯ ನಿಜ ನಾಮಧೇಯ ಮಾರಿಲೇಯಾ ಡೋಸ್ ಸ್ಯಾಂಟೋಸ್ ಆಗಿದ್ದು, ಈಕೆ ಎರಡು ವಿಶ್ವಕಪ್ ಮತ್ತು ಒಂದು ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಹೆಸರು ಮಾಡಿದ್ದ ಫುಟ್ಬಾಲ್ ಆಟಗಾರ್ತಿ.

  ನಿಜವಾದ ಗಾಂಧಿ ಮತ್ತು ಫುಟ್ಬಾಲ್:

  ಇಲ್ಲಿ ಮಹಾತ್ಮ ಗಾಂಧಿ ಎಂಬ ಫುಟ್ಬಾಲ್ ಆಟಗಾರನ ವಿಚಾರ ಬಂದಾಗ ನಿಜವಾದ ಐತಿಹಾಸಿಕ ಪುರುಷ ಮಹಾತ್ಮ ಗಾಂಧಿ ಮತ್ತವರ ಫುಟ್ಬಾಲ್ ಸಂಬಂಧದ ಬಗ್ಗೆ ಹೇಳಲೇ ಬೇಕು. ಮೋಹನ್ ದಾಸ್ ಕರಮ್ ಚಂದ್ ಗಾಂಧಿ ಅವರು ಲಂಡನ್​ನಲ್ಲಿ ಬ್ಯಾರಿಸ್ಟರ್ ಮುಗಿಸಿ 19ನೇ ಶತಮಾನದ ಕೊನೆಯಲ್ಲಿ ಸೌಥ್ ಆಫ್ರಿಕಾದಲ್ಲಿ ಲಾಯರ್​ಗಿರಿ ಕೆಲಸ ಮಾಡಲು ಹೋಗಿದ್ದರು. ಅಲ್ಲಿ ಬಿಳಿಯರು ಸ್ಥಳೀಯ ಕರಿಯರು ಮತ್ತು ಭಾರತೀಯ ಮೂಲದವರ ಮೇಲೆ ನಡೆಸುತ್ತಿದ್ದ ದೌರ್ಜನ್ಯ ಕಂಡು ಕುದ್ದು ಹೋಗಿದ್ದರು. ವರ್ಣಭೇದದ ವಿರುದ್ಧ ಹೋರಾಡಲು ಜನರನ್ನ ಹುರಿದುಂಬಿಸಲು ಮಹಾತ್ಮ ಗಾಂಧಿ ಸೌಥ್ ಆಫ್ರಿಕಾದಲ್ಲಿ 3 ಫುಟ್ಬಾಲ್ ತಂಡಗಳನ್ನ ಕಟ್ಟಿ ಆಡಿಸುತ್ತಿದ್ದರು. ಭಾರತದಲ್ಲಿ ಗಾಂಧಿ ನೇತೃತ್ವದಲ್ಲಿ ನಡೆದ ಅಸಹಕಾರ ಸತ್ಯಾಗ್ರಹ ಇತ್ಯಾದಿ ಹೋರಾಟಗಳಿಗೆ ಮೂಲ ಆಕರ ಶುರುವಾಗಿದ್ದು ಸೌಥ್ ಆಫ್ರಿಕಾದಲ್ಲಿ ಗಾಂಧಿ ಇದ್ದಾಗ.
  Published by:Vijayasarthy SN
  First published: