• Home
  • »
  • News
  • »
  • sports
  • »
  • ICC chairman: ಎರಡನೇ ಬಾರಿಗೆ ಐಸಿಸಿ ಅಧ್ಯಕ್ಷರಾಗಿ ಆಯ್ಕೆ ಆದ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೆ

ICC chairman: ಎರಡನೇ ಬಾರಿಗೆ ಐಸಿಸಿ ಅಧ್ಯಕ್ಷರಾಗಿ ಆಯ್ಕೆ ಆದ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೆ

ಗ್ರೆಗ್ ಬಾರ್ಕ್ಲೇ

ಗ್ರೆಗ್ ಬಾರ್ಕ್ಲೇ

ICC chairman: ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ತವೆಂಗ್ವಾ ಮುಕುಹಲಾನಿ ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಸರಿದ ನಂತರ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಐಸಿಸಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

  • Share this:

ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲಿ (Greg Barclay) ಅವರು ಕ್ರಿಕೆಟ್‌ನ ಅತ್ಯುನ್ನತ ಸಂಸ್ಥೆಯಾದ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC chairman) ಅಧ್ಯಕ್ಷರಾಗಿ ಮರು ಆಯ್ಕೆಯಾಗಿದ್ದಾರೆ. ಮುಂದಿನ ಎರಡು ವರ್ಷಗಳ ಕಾಲ ಅವರು ಈ ಹುದ್ದೆಯನ್ನು ಅಲಂಕರಿಸಿರುತ್ತಾರೆ. ಇದು ಎರಡನೇ ಬಾರಿಗೆ ಅವರ ಅಧ್ಯಕ್ಷ ಪದವಿಯಾಗಿದೆ. ಇದಕ್ಕೂ ಮೊದಲು, ಬಾರ್ಕ್ಲಿ ನವೆಂಬರ್ 2020 ರಲ್ಲಿ ಐಸಿಸಿ ಚುನಾವಣೆಯಲ್ಲಿ ಗೆದ್ದಿದ್ದರು. ಶನಿವಾರ ಮೆಲ್ಬೋರ್ನ್‌ನಲ್ಲಿ ನಡೆದ ಐಸಿಸಿಯ ತ್ರೈಮಾಸಿಕ ಸಭೆಯಲ್ಲಿ ಮತದಾನ ನಡೆಯಿತು. ವಿದ್ಯುನ್ಮಾನ ಮತದಾನ ಪ್ರಕ್ರಿಯೆಯಲ್ಲಿ ಟೆಸ್ಟ್ ಆಡುವ ದೇಶಗಳ 12 ಪೂರ್ಣ ಸದಸ್ಯರು, ಮೂರು ಅಸೋಸಿಯೇಟ್ ದೇಶಗಳು ಮತ್ತು ಸ್ವತಂತ್ರ ಮಹಿಳಾ ನಿರ್ದೇಶಕಿ (ಪೆಪ್ಸಿಕೋದ ಇಂದ್ರಾ ನೂಯಿ) ಸೇರಿದಂತೆ 16 ನಿರ್ದೇಶಕರ ಮಂಡಳಿಗಳು ಭಾಗವಹಿಸಿದ್ದರು.


ಚುನಾವಣೆಯಿಂದ ಹಿಂದೆ ಸರಿದ ಜಿಂಬಾಬ್ವೆ ಮುಕುಹಲಾನಿ:


ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ಟ್ವೆಂಗ್ವಾ ಮುಕುಹಲಾನಿ ಅವರು ಬಾರ್ಕ್ಲೇ ವಿರುದ್ಧ ಯಾವುದೇ ಅಭ್ಯರ್ಥಿಗಳನ್ನು ನಿಲ್ಲಿಸದೆ ಚುನಾವಣಾ ಪ್ರಕ್ರಿಯೆಯಿಂದ ಹಿಂದೆ ಸರಿದ ನಂತರ ಮಾಜಿ ನ್ಯೂಜಿಲೆಂಡ್ ಕ್ರಿಕೆಟಿಗನಿಗೆ ಚುಕ್ಕಾಣಿ ಹಿಡಿಯಲು ICC ಮಂಡಳಿಯು ತನ್ನ ಸಂಪೂರ್ಣ ಬೆಂಬಲವನ್ನು ಪುನರುಚ್ಚರಿಸಿತು. ಈ ಮೂಲಕ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲಿ 2ನೇ ಬಾರಿಗೆ ಅವಿರೋಧವಾಗಿ ಐಸಿಸಿ ಅಧ್ಯಕ್ಷರಾದರು. ಈ ಮೂಲಕ ಮತ್ತೊಮ್ಮೆ ಗ್ರೆಗ್ ಆಯ್ಕೆ ಆಗಿದ್ದಾರೆ.



ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆಯಾದ ಮೇಲೆ ಬಾರ್ಕ್ಲೇ ಮಾಧ್ಯದ ಹೇಳಿಕೆ ನೀಡಿರುವ ಅವರು, "ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಮರು ಆಯ್ಕೆಯಾಗಿರುವುದು ಗೌರವವಾಗಿದೆ ಮತ್ತು ಅವರ ಬೆಂಬಲಕ್ಕಾಗಿ ನನ್ನ ಸಹ ಐಸಿಸಿ ನಿರ್ದೇಶಕರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ."ಎಂದು ಹೇಳಿದರು: 'ಕಳೆದ ಎರಡು ವರ್ಷಗಳಲ್ಲಿ ನಾವು ನಮ್ಮ ಜಾಗತಿಕ ಬೆಳವಣಿಗೆಯ ಕಾರ್ಯತಂತ್ರವನ್ನು ಪ್ರಾರಂಭಿಸುವುದರೊಂದಿಗೆ ಗಮನಾರ್ಹ ಪ್ರಗತಿಯನ್ನು ಸಾಧಿಸಿದ್ದೇವೆ, ಇದು ನಮ್ಮ ಕ್ರೀಡೆಗೆ ಯಶಸ್ವಿ ಮತ್ತು ಸುಸ್ಥಿರ ಭವಿಷ್ಯವನ್ನು ನಿರ್ಮಿಸುವ ಕಡೆಗೆ ಸ್ಪಷ್ಟ ನಿರ್ದೇಶನವನ್ನು ಒದಗಿಸುತ್ತದೆ. ಇನ್ನು, ಹೊಸ ನಿಯಮಗಳ ಪ್ರಕಾರ ಹೊಸ ಐಸಿಸಿ ಅಧ್ಯಕ್ಷರನ್ನು ನಿರ್ಧರಿಸಲು ಹಿಂದಿನ ಬಾರಿಗಿಂತ ಮೂರನೇ ಎರಡರಷ್ಟು ಸರಳ ಬಹುಮತದ ಅಗತ್ಯವಿತ್ತು. ಮುಕುಹ್ಲಾನಿ ವಾಪಸಾತಿಯಿಂದಾಗಿ ಬಾರ್ಕ್ಲೇ ಹೆಚ್ಚಿನ ತೊಂದರೆಯಿಲ್ಲದೆ ಅಧ್ಯಕ್ಷ ಪಟ್ಟ ಅಲಂಕರಿಸಿದರು.


ಇದನ್ನೂ ಓದಿ: Team India: ಟೀಂ ಇಂಡಿಯಾ ಸೋಲುತ್ತಿದ್ದಂತೆ ಬಾಲಬಿಚ್ಚಿದ ಪಾಕ್​ ಮಾಜಿ ಆಟಗಾರರು, ಫೈನಲ್​ ಗೆದ್ದು ಮಾತಾಡಿ ಎಂದ ಫ್ಯಾನ್ಸ್


ಅಭಯ ಹಸ್ತ ನೀಡಿದ ಬಿಸಿಸಿಐ:


ಇನ್ನು, ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಇಳಿದ ನಂತರ ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ  ಮೂಲಕಗ ಪ್ರಕಾರ ಗಂಗೂಲಿಗೆ ಬಿಸಿಸಿಐ ಬೆಂಬಲ ಸಿಗಲಿಲ್ಲವಂತೆ. ಆದರೆ ಬಿಸಿಸಿಐ ಗ್ರೆಗ್ ಬಾರ್ಕ್ಲಿಯ ಬೆಂಬಲಕ್ಕೆ ನಿಂತಿತ್ತು. ಇದರಿಂದಾಗಿ ಗ್ರೆಗ್ ಬಾರ್ಕ್ಲಿ ಸರಾಗವಾಗಿ ಐಸಿಸಿ ಅಧ್ಯಕ್ಷರಾದರು. ಇನ್ನು, ಈ ಬಾರಿ ಹೊಸ ನಿಯಮದ ಆಧಾರದ ಮೇಲೆ ಐಸಿಸಿ ಅಧ್ಯಕ್ಷ ಚುನಾವಣೆ ನಡೆಸಲಾಯಿತು. ವಾಸ್ತವವಾಗಿ, ಕಳೆದ ವರ್ಷ ಅಧ್ಯಕ್ಷರನ್ನು ಮೂರನೇ ಎರಡರಷ್ಟು ಬಹುಮತದ ಆಧಾರದ ಮೇಲೆ ಆಯ್ಕೆ ಮಾಡಲಾಗಿತ್ತು. ಆದರೆ ಹೊಸ ನಿಯಮಗಳ ಪ್ರಕಾರ, ಈ ಬಾರಿ ಐಸಿಸಿಯ ಅಧ್ಯಕ್ಷರನ್ನು ಸರಳ ಬಹುಮತದಿಂದ ಆಯ್ಕೆ ಮಾಡಲಾಗಿದೆ.

Published by:shrikrishna bhat
First published: