ಭಾರತದ ವಿರುದ್ಧ ಸರಣಿಗೆ ನ್ಯೂಜಿಲ್ಯಾಂಡ್​ ತಂಡ ಪ್ರಕಟ: ಟೀಂ ಇಂಡಿಯಾಗೆ ಕಬ್ಬಿಣದ ಕಡಲೆ ಆಗಲಿದೆಯೇ ಕಿವೀಸ್?

ಪ್ರಸ್ತುತ ಏಕದಿನ ರ‍್ಯಾಂಕಿಂಗ್​ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿದ್ದು, ಈ ಸರಣಿ ಎರಡು ತಂಡಗಳ ರ‍್ಯಾಂಕಿಂಗ್ ಮೇಲೂ ಪ್ರಭಾವ ಬೀರಲಿದೆ.

zahir | news18
Updated:January 17, 2019, 8:48 PM IST
ಭಾರತದ ವಿರುದ್ಧ ಸರಣಿಗೆ ನ್ಯೂಜಿಲ್ಯಾಂಡ್​ ತಂಡ ಪ್ರಕಟ: ಟೀಂ ಇಂಡಿಯಾಗೆ ಕಬ್ಬಿಣದ ಕಡಲೆ ಆಗಲಿದೆಯೇ ಕಿವೀಸ್?
ಸಾಂದರ್ಭಿಕ ಚಿತ್ರ
  • News18
  • Last Updated: January 17, 2019, 8:48 PM IST
  • Share this:
ವಿಶ್ವಕಪ್​ಗೂ ಮುನ್ನ ಭಾರತದ ವಿರುದ್ಧ ನಡೆಯಲಿರುವ ಏಕದಿನ ಸರಣಿ ಹಾಗೂ ಟಿ20 ಪಂದ್ಯಗಳಿಗೆ ನ್ಯೂಜಿಲ್ಯಾಂಡ್​ ತಂಡವನ್ನು ಪ್ರಕಟಿಸಲಾಗಿದೆ. 14 ತಂಡದ ಸದಸ್ಯರ ತಂಡವನ್ನು ಕೇನ್​ ವಿಲಿಯಮ್ಸನ್ ಮುನ್ನೆಡೆಸಲಿದ್ದು, ಲಂಕಾ ವಿರುದ್ಧ ಸರಣಿಯಲ್ಲಿ ವಿಶ್ರಾಂತಿ ಪಡೆದಿದ್ದ ಆಟಗಾರರು ತಂಡಕ್ಕೆ ಮರಳಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಆಟಗಾರರು ಸರಣಿ ಬಳಿಕ, ನ್ಯೂಜಿಲ್ಯಾಂಡ್​​ಗೆ ತೆರಳಿದ್ದು ಅಲ್ಲಿ ಐದು ಏಕದಿನ ಹಾಗೂ ಮೂರು ಟಿ20 ಪಂದ್ಯಗಳನ್ನಾಡಲಿದೆ. ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ವಿಶ್ರಾಂತಿ ಮೇರೆಗೆ ಹೊರಗುಳಿದಿದ್ದ ಆಟಗಾರರಾದ ಕಾಲಿನ್ ಡಿ ಗ್ರಾಂಡ್​ಹೋಮ್ ಮತ್ತು ಟಾಮ್ ಲ್ಯಾಂಥಮ್​ರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

ಜನವರಿ 23 ರಿಂದ ಕಿವೀಸ್ ಸರಣಿ ಆರಂಭವಾಗಲಿದ್ದು, ಮೊದಲ ಮೂರು ಏಕದಿನ ಪಂದ್ಯಗಳಿಗೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಈ ಹಿಂದೆ ಗಾಯಗೊಂಡು ತಂಡದಿಂದ ಕೈಬಿಡಲಾಗಿದ್ದ ಸ್ಪಿನ್ನರ್​ ಸ್ಯಾಂಟ್ನರ್​ಗೆ ಅವಕಾಶ ನೀಡಲಾಗಿದೆ. ಲಂಕಾ ವಿರುದ್ಧದ ಟಿ20 ಪಂದ್ಯದಿಂದ ಕೋಕ್​ ಪಡೆದಿದ್ದ ಯುವ ವೇಗಿ ಟೆಂಟ್​ ಬೋಲ್ಟ್ ಟೀಂ ಇಂಡಿಯಾ ಸರಣಿಗೆ ಮತ್ತೆ ತಂಡವನ್ನು ಕೂಡಲಿದ್ದಾರೆ.

2019 ರ ವಿಶ್ವಕಪ್​ಗೂ ಮುನ್ನ ನಡೆಯುತ್ತಿರುವ ಪಂದ್ಯವಾಗಿರುವುದರಿಂದ ಉಭಯ ತಂಡಗಳಿಗೂ ಈ ಸರಣಿ ಮಹತ್ವದಾಗಿದೆ. ಆಸ್ಟ್ರೇಲಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಟೀಂ ಇಂಡಿಯಾ ಕಿವೀಸ್​ ಸರಣಿಯನ್ನು ವಶಪಡಿಸಿಕೊಳ್ಳುವ ಮೂಲಕ ವರ್ಲ್ಡ್​ ಕಪ್​ಗೂ ಮುನ್ನ ಆತ್ಮ ವಿಶ್ವಾಸ ಹೆಚ್ಚಿಸಿಕೊಳ್ಳುವ ತವಕದಲ್ಲಿದೆ.

ಇದನ್ನೂ ಓದಿ: ಇದು ವಿಶ್ವ ದಾಖಲೆ ಬರೆದ ಒಂದು ಮೊಟ್ಟೆಯ ಕಥೆ

ಪ್ರಸ್ತುತ ಏಕದಿನ ರ‍್ಯಾಂಕಿಂಗ್​ನಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನದಲ್ಲಿದ್ದು, ಈ ಸರಣಿ ಎರಡು ತಂಡಗಳ ರ‍್ಯಾಂಕಿಂಗ್ ಮೇಲೂ ಪ್ರಭಾವ ಬೀರಲಿದೆ. ಈ ಹಿನ್ನೆಲೆಯಲ್ಲಿ ಎರಡು ತಂಡಗಳು ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲಿದೆ ಎನ್ನಲಾಗಿದೆ. ಅದೇ ರೀತಿ ಶ್ರೀಲಂಕಾ ಸರಣಿಯನ್ನು ಗೆದ್ದು ಬೀಗುತ್ತಿರುವ ಯುವ ಪಡೆಯನ್ನೊಳಗೊಂಡ ನ್ಯೂಜಿಲ್ಯಾಂಡ್​ ಭಾರತದ ವಿರುದ್ಧ ಸರಣಿಗೆ ಕಠಿಣ ಅಭ್ಯಾಸವನ್ನು ಪ್ರಾರಂಭಿಸಿದೆ.

ಇದನ್ನೂ ಓದಿ: BSNL ಭರ್ಜರಿ ಆಫರ್​: ಪ್ರತಿನಿತ್ಯ 3.21GB ಡೇಟಾ ಉಚಿತನ್ಯೂಜಿಲ್ಯಾಂಡ್ ತಂಡ ಇಂತಿದೆ: ಕೇನ್ ವಿಲಿಯಮ್ಸನ್ ( ನಾಯಕ), ಕಾಲಿನ್ ಮನ್ರೋ, ಹೆನ್ರಿ ನಿಕೋಲ್ಸ್, ಇಶ್ ಸೋಧಿ, ಟಿಮ್ ಸೌಥಿ, ರಾಸ್ ಟೇಲರ್, ಮಿಚೆಲ್ ಸ್ಯಾಂಟ್ನರ್, ಟ್ರೆಂಟ್ ಬೋಲ್ಟ್, ಟಾಮ್ ಲ್ಯಾಂಥಮ್, ಡಗ್ ಬ್ರೇಸ್ ವೆಲ್, ಕಾಲಿನ್ ಡಿ ಗ್ರಾಂಡ್ ಹೋಮ್, ಲ್ಯೂಕಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ.

ಇದನ್ನೂ ಓದಿ: 12ನೇ ತರಗತಿ ಪಾಸಾದವರಿಂದ ಹೆಡ್​ ಕಾನ್ಸ್ಟೇಬಲ್​ ಹುದ್ದೆಗಳಿಗೆ ಅರ್ಜಿ ಆಹ್ವಾನ

First published:January 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading