ಕಿವೀಸ್ ವಿರುದ್ಧ 75 ರನ್​ಗಳ ಭರ್ಜರಿ ಜಯ: ಸರಣಿ ಕ್ಲೀನ್ ಸ್ವೀಪ್ ಮಾಡಿದ ಪಾಂಡೆ ಪಡೆ

ಪಾಂಡೆ ಪಡೆ 75 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಕಿವೀಸ್ ನಾಡಲ್ಲಿ ಗೆಲುವಿನ ಪತಾಕೆ ಹಾರಿಸಿದೆ. ಮೂರು ಅನಧಿಕೃತ ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರು ಪಂದ್ಯ ಗೆದ್ದಿರುವ ಭಾರತ ಎ ತಂಡ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ

Vinay Bhat | news18
Updated:December 11, 2018, 3:18 PM IST
ಕಿವೀಸ್ ವಿರುದ್ಧ 75 ರನ್​ಗಳ ಭರ್ಜರಿ ಜಯ: ಸರಣಿ ಕ್ಲೀನ್ ಸ್ವೀಪ್ ಮಾಡಿದ ಪಾಂಡೆ ಪಡೆ
ಮನೀಶ್ ಪಾಂಡೆ
  • News18
  • Last Updated: December 11, 2018, 3:18 PM IST
  • Share this:
ನ್ಯೂಜಿಲೆಂಡ್ ಪ್ರವಾಸ ಬೆಳೆಸಿದ್ದ ಭಾರತ ಎ ತಂಡ ಏಕದಿನ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ಅದ್ಭುತ ಪ್ರದರ್ಶನ ತೋರಿದೆ. ಇಂದು ನಡೆದ ಮೂರನೇ ಹಾಗೂ ಅಂತಿಮ ಅನಧಿಕೃತ ಏಕದಿನ ಪಂದ್ಯದಲ್ಲಿ ಭಾರತ ಎ ತಂಡ 75 ರನ್​ಗಳ ಭರ್ಜರಿ ಗೆಲುವು ಸಾಧಿಸಿದ್ದು, ಕಿವೀಸ್​ಗೆ ತವರಿನಲ್ಲೆ ಭಾರೀ ಮುಖಭಂಗವಾಗಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ಎ ತಂಡ ನಿಗದಿತ 50 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 275 ರನ್ ಕಲೆಹಾಕಿತು. ಅನ್ಮೊಲ್​ಪ್ರೀತ್ ಸಿಂಗ್ 71, ಅಂಕಿತ್ ಬಾವ್ನೆ 48 ಹಾಗೂ ವಿಜಯ್ ಶಂಕರ್ 42 ರನ್​ ಬಾರಿಸಿ ಭರ್ಜರಿ ಪ್ರದರ್ಶನ ತೋರಿದರು. ಅಂತೆಯ ಕೊನೆಯಲ್ಲಿ ಅಬ್ಬರಿಸಿದ ಅಕ್ಷರ್ ಪಟೇಲ್ 31 ರನ್ ಸಿಡಿಸಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಇದರೊಂದಿಗೆ ಪಾಂಡೆ ಪಡೆ 275 ರನ್ ಕಲೆಹಾಕಿತು.

ಇದನ್ನೂ ಓದಿ: ವಿಚಿತ್ರ ರೀತಿಯ ಬೌಲಿಂಗ್: ಶ್ರೀಲಂಕಾ ಆಟಗಾರನನ್ನು ಕ್ರಿಕೆಟ್​​ನಿಂದಲೆ ಕಿತ್ತೆಸೆದ ಐಸಿಸಿ

276 ರನ್​ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಎ ತಂಡ ಉತ್ತಮ ಆರಂಭ ಪಡೆದುಕೊಂಡಿತಾದರು ಬಳಿಕ ದಿಢೀರ್ ಕುಸಿತ ಕಂಡಿತು. ತಂಡದ ಪರ ಟಿಮ್ ಸೈಫೆರ್ಟ್​(55) ಏಕಾಂಗಿ ಹೋರಾಟ ನಡೆಸಿದರಾದರು, ಇವರಿಗೆ ಉಳಿದ ಬ್ಯಾಟ್ಸ್​ಮನ್​ಗಳು ಸಾತ್ ನೀಡಲಿಲ್ಲ. ಭಾರತದ ಸಂಘಟಿತ ಬೌಲಿಂಗ್ ದಾಳಿಗೆ ಬೆಚ್ಚಿದ ಕಿವೀಸ್ 44.2 ಓವರ್​​ನಲ್ಲಿ 200 ರನ್​ಗೆ ಸರ್ವಪತನ ಕಂಡಿತು. ಭಾರತ ಎ ಪರ ಸಿದ್ಧಾರ್ಥ್​ ಕೌಲ್ 4 ವಿಕೆಟ್ ಕಿತ್ತರೆ, ಕೃಷ್ಣಪ್ಪ ಗೌತಮ್ 2 ವಿಕೆಟ್ ಪಡೆದರು.

ಈ ಮೂಲಕ ಪಾಂಡೆ ಪಡೆ 75 ರನ್​ಗಳ ಭರ್ಜರಿ ಗೆಲುವಿನೊಂದಿಗೆ ಕಿವೀಸ್ ನಾಡಲ್ಲಿ ಗೆಲುವಿನ ಪತಾಕೆ ಹಾರಿಸಿದೆ. ಮೂರು ಅನಧಿಕೃತ ಪಂದ್ಯಗಳ ಏಕದಿನ ಸರಣಿಯಲ್ಲಿ ಮೂರೂ ಪಂದ್ಯ ಗೆದ್ದಿರುವ ಭಾರತ ಎ ತಂಡ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ಸಂಕ್ಷಿಪ್ತ ಸ್ಕೋರ್:

ಭಾರತ ಎ: 275/8 (50 ಓವರ್​)(ಅನ್ಮೊಲ್​ಪ್ರೀತ್ ಸಿಂಗ್ 71, ಅಂಕಿತ್ ಬಾವ್ನೆ 48, ಸೆತ್ ರಾನ್ಸ್​ 49/3)

ನ್ಯೂಜಿಲೆಂಡ್ ಎ: 200/10 (44.2 ಓವರ್​)

(ಟಿಮ್ ಸೈಫೆರ್ಟ್​​ 55, ಸಿದ್ಧಾರ್ಥ್​ ಕೌಲ್ 37/4, ಕೃಷ್ಣಪ್ಪ ಗೌತಮ್ 40/2)
First published: December 11, 2018, 3:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading