ಕಿವೀಸ್ ನಾಡಲ್ಲಿ ಮಿಂಚಿದ ಕೃಷ್ಣಪ್ಪ ಗೌತಮ್; ಡ್ರಾಗೆ ತೃಪ್ತಿಪಟ್ಟ ಭಾರತ-ನ್ಯೂಜಿಲೆಂಡ್ ಎ ತಂಡಗಳು

ಭಾರತ ಎ ಮತ್ತು ನ್ಯೂಜಿಲೆಂಡ್ ಎ ತಂಡಗಳ ನಡುವಿನ ಮೂರೂ ಅನಧಿಕೃತ ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಡಿ. 6ರಿಂದ 3 ಅನಧಿಕೃತ ಏಕದಿನ ಪಂದ್ಯಗಳು ನಡೆಯಲಿವೆ.

Vijayasarthy SN | cricketnext
Updated:December 4, 2018, 6:38 PM IST
ಕಿವೀಸ್ ನಾಡಲ್ಲಿ ಮಿಂಚಿದ ಕೃಷ್ಣಪ್ಪ ಗೌತಮ್; ಡ್ರಾಗೆ ತೃಪ್ತಿಪಟ್ಟ ಭಾರತ-ನ್ಯೂಜಿಲೆಂಡ್ ಎ ತಂಡಗಳು
ಕೃಷ್ಣಪ್ಪ ಗೌತಮ್
  • Cricketnext
  • Last Updated: December 4, 2018, 6:38 PM IST
  • Share this:
ವಾಂಗರೇಯ್(ಡಿ. 04): ನ್ಯೂಜಿಲೆಂಡ್ ಎ ಮತ್ತು ಭಾರತ ಎ ತಂಡಗಳ ನಡುವಿನ 3 ಅನಧಿಕೃತ ಟೆಸ್ಟ್ ಪಂದ್ಯಗಳ ಸರಣಿಯು ಯಾವುದೇ ಫಲಿತಾಂಶ ಕಾಣದೇ ಡ್ರಾನಲ್ಲಿ ಅಂತ್ಯಗೊಂಡಿದೆ. ಇಂದು ಮುಕ್ತಾಯಗೊಂಡ ಮೂರನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲೂ ಯಾವುದೇ ಫಲಿತಾಂಶ ಬರಲಿಲ್ಲ. ಈ ನಾಲ್ಕು ದಿನಗಳ ಪಂದ್ಯದಲ್ಲಿ ಭಾರತೀಯರ 323 ರನ್​ಗಳ ಮೊದಲ ಇನ್ನಿಂಗ್ಸ್ ಮೊತ್ತಕ್ಕೆ ಪ್ರತಿಯಾಗಿ ನ್ಯೂಜಿಲೆಂಡ್ ಎ ತಂಡ 398 ರನ್ ಗಳಿಸಿತು. ಕ್ಯಾಮ್ ಫ್ಲೆಚರ್ ಆಕರ್ಷಕ ಶತಕ ಭಾರಿಸಿದರು. ಟಿಮ್ ಸೇಫೆರ್ಟ್ 14 ರನ್​ಗಳಿಂದ ಶತಕವಂಚಿತರಾದರು. ಡೋಗ್ ಬ್ರೇಸ್​ವೆಲ್ ಮತ್ತು ಕೈಲೆ ಜೇಮೀಸನ್ ಕೂಡ ಅರ್ಧಶತಕ ಭಾರಿಸಿದರು. ಆದರೆ, ಕರ್ನಾಟಕದ ಹುಡುಗ ಹಾಗೂ ಪ್ರತಿಭಾನ್ವಿತ ಆಲ್​ರೌಂಡರ್ ಕೃಷ್ಣಪ್ಪ ಗೌತಮ್ ಬರೋಬ್ಬರಿ 6 ವಿಕೆಟ್ ಕಬಳಿಸಿದರು.

ಕರುಣ್ ನಾಯರ್ ನೇತೃತ್ವದ ಭಾರತ ಎ ತಂಡದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್​ನಲ್ಲಿ ವಿಜಯ್ ಶಂಕರ್, ಶುಬ್ಮನ್ ಗಿಲ್, ಎ. ಈಶ್ವರನ್, ರವಿಕುಮಾರ್ ಸಮರ್ಥ್ ಮತ್ತು ಕೆ. ಭರತ್ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಗೌತಮ್ ಈ ಪಂದ್ಯದಲ್ಲಿ ಬ್ಯಾಟಿಂಗಲ್ಲಿ ವಿಫಲರಾದರೂ ಬೌಲಿಂಗ್​ನಲ್ಲಿ ಎದುರಾಳಿಗಳನ್ನು ಕಾಡಿ ಗಮನ ಸೆಳೆದರು.

ಗೌತಮ್ ಅವರು ಈ ಸರಣಿಯ ಮೊದಲ ಪಂದ್ಯದಲ್ಲೂ ಉತ್ತಮ ಆಲ್​ರೌಂಡ್ ಪ್ರದರ್ಶನ ನೀಡಿದ್ದಾರೆ. ಕರ್ನಾಟಕದ ಆರ್. ಸಮರ್ಥ್ ಕೂಡ ಈ ಸರಣಿಯಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದಾರೆ. ಸರಣಿಯ ಮೊದಲೆರಡು ಪಂದ್ಯಗಳೂ ಡ್ರಾನಲ್ಲಿ ಅಂತ್ಯಗೊಂಡಿದ್ದವು.

ಡಿ. 6ರಿಂದ ಈ ಎರಡೂ ತಂಡಗಳ ನಡುವೆ 3 ಅನಧಿಕೃತ ಏಕದಿನ ಪಂದ್ಯಗಳ ಸರಣಿ ನಡೆಯಲಿದೆ. ಎಲ್ಲಾ ಮೂರೂ ಪಂದ್ಯಗಳು ಮೌಂಟ್ ಮೌಂಗನುಯ್​ನಲ್ಲಿ ನಡೆಯಲಿವೆ. ಕರ್ನಾಟಕದ ಮನೀಶ್ ಪಾಂಡೆ ಅವರು ಭಾರತ ಎ ತಂಡದ ನೇತೃತ್ವ ವಹಿಸಲಿದ್ದಾರೆ. ಮಯಂಕ್ ಅಗರ್ವಾಲ್ ಅವರು ಈ ತಂಡದಲ್ಲಿದ್ದಾರೆ. ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಶ್ರೇಯಸ್ ಅಯ್ಯರ್, ಶುಬ್ಮನ್ ಗಿಲ್, ವಾಷಿಂಗ್ಟನ್ ಸುಂದರ್ ಮೊದಲಾದ ಪ್ರತಿಭಾನ್ವಿತ ಆಟಗಾರರು ಈ ಏಕದಿನ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ.
First published:December 4, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading