ಸಚಿನ್ ದಾಖಲೆ ಪುಡಿ ಮಾಡಿದ 16ರ ಪೋರ: ನೇಪಾಳ ಬ್ಯಾಟ್ಸ್​ಮನ್​​ನ ಹೊಸ ಸಾಧನೆ ಏನು?

ರೋಹಿತ್ ಅವರು ವಿಶ್ವದಾಖಲೆ ಬರೆದಿದ್ದು, ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅರ್ಧಶತಕ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಮಾಡಿದ್ದಾರೆ.

Vinay Bhat | news18
Updated:January 27, 2019, 11:46 AM IST
ಸಚಿನ್ ದಾಖಲೆ ಪುಡಿ ಮಾಡಿದ 16ರ ಪೋರ: ನೇಪಾಳ ಬ್ಯಾಟ್ಸ್​ಮನ್​​ನ ಹೊಸ ಸಾಧನೆ ಏನು?
ರೋಹಿತ್, ನೇಪಾಳ ಕ್ರಿಕೆಟ್ ತಂಡದ ಆಟಗಾರ
  • News18
  • Last Updated: January 27, 2019, 11:46 AM IST
  • Share this:
ದುಬೈ: ಈಗಷ್ಟೆ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟಿರುವ ನೇಪಾಳ ಕ್ರಿಕೆಟ್ ತಂಡ ಬರಬರುತ್ತಾ ಭದ್ರವಾಗಿ ನೆಲೆಯೂರು ಎಲ್ಲ ಲಕ್ಷಣಗಳು ಕಾಣುತ್ತಿವೆ. ಸದ್ಯ ನೇಪಾಳದ 16 ವರ್ಷ ಪ್ರಾಯದ ಆಟಗಾರ ರೋಹಿತ್ ಪಡಿಲ್ ಅವರು ಯುಎಇ ವಿರುದ್ಧ ನಡೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.

ಈ ಫಿಫ್ಟಿಯೊಂದಿಗೆ ರೋಹಿತ್ ಅವರು ವಿಶ್ವದಾಖಲೆ ಬರೆದಿದ್ದು, ಅಂತರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಅರ್ಧಶತಕ ಗಳಿಸಿದ ವಿಶ್ವದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಮಾಡಿದ್ದಾರೆ.

ಅಲ್ಲದೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮುರಿದಿದ್ದಾರೆ.  16 ವರ್ಷ 146 ದಿನಗಳ ರೋಹಿತ್ ಯುನೈಟೆಡ್ ಅರಬ್ ಅಮಿರೇಟ್ಸ್​​ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ 58 ಎಸೆತಗಳಲ್ಲಿ 55 ರನ್ ಚಚ್ಚಿದ್ದಾರೆ. ಇತ್ತ ಸಚಿನ್ ಅವರು ತಮ್ಮ ಚೊಚ್ಚಲ ಅರ್ಧಶತಕ ಬಾರಿಸಿದ್ದು 16 ವರ್ಷ 213 ದಿನಗಳಲ್ಲಿ. ಇನ್ನು ಸಚಿನ್​​ ಅವರೊಂದಿಗೆ ಶಾಹಿದ್ ಅಫ್ರಿದಿ ದಾಖಲೆಯನ್ನೂ ರೋನಿತ್ ಸರಿಗಟ್ಟಿದ್ದಾರೆ. ಅಫ್ರಿದಿ 37 ಎಸೆತಗಳಲ್ಲಿ ಅರ್ಧಶತಕ ಬಾರಿಸಿದಾಗ 16 ವರ್ಷ 217 ದಿನಗಳಾಗಿತ್ತು.

ಇದನ್ನೂ ಒದಿ: ಧೋನಿ ಅದ್ಭುತ ಸ್ಟಂಪಿಂಗ್, ರೋಹಿತ್ ಸ್ಪೋಟಕ ಆಟ: ಇಲ್ಲಿದೆ ಪಂದ್ಯದ ಸಂಪೂರ್ಣ ಹೈಲೈಟ್ಸ್​​

ಸದ್ಯ ರೋಹಿತ್ ಅವರು ಇವರಿಬ್ಬರ ದಾಖಲೆಯನ್ನು ಮುರಿದು ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅರ್ಧಶತಕ ಸಿಡಿಸಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

First published:January 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading