ಏಕದಿನ ಕ್ರಿಕೆಟ್​​ನಲ್ಲಿ ಚೊಚ್ಚಲ ಗೆಲುವು ಕಂಡ ನೇಪಾಳ ತಂಡ

news18
Updated:August 4, 2018, 10:29 PM IST
ಏಕದಿನ ಕ್ರಿಕೆಟ್​​ನಲ್ಲಿ ಚೊಚ್ಚಲ ಗೆಲುವು ಕಂಡ ನೇಪಾಳ ತಂಡ
news18
Updated: August 4, 2018, 10:29 PM IST
ನ್ಯೂಸ್ 18 ಕನ್ನಡ

ಅಂತಾರಾಷ್ಟ್ರೀಯ ಕ್ರಿಕೆಟ್​​ಗೆ ಮಾನ್ಯತೆ ಪಡೆದ ಬಳಿಕ ಚೊಚ್ಚಲ ಸರಣಿಯನ್ನಾಡುತ್ತಿರುವ ನೇಪಾಳ ಕ್ರಿಕೆಟ್ ತಂಡವು ನೆದರ್​​​ಲೆಂಡ್ ವಿರುದ್ಧ ಐತಿಹಾಸಿಕ ಏಕದಿನ ಗೆಲುವು ದಾಖಲಿಸಿದೆ.

ಬುಧವಾರವಷ್ಟೆ ತನ್ನ ಮೊದಲ ಅಂತಾರಾಷ್ಟ್ರೀಯಾ ಪಂದ್ಯವಾಡಿ ಪಾದಾರ್ಪಣೆ ಮಾಡಿದ್ದ ನೇಪಾಳಕ್ಕೆ ನೆದರ್​​ಲೆಂಡ್ ವಿರುದ್ಧ 55 ರನ್​ಗಳ ಸೋಲು ಕಂಡಿತ್ತು. ಆದರೆ ಎರಡನೇ ಪಂದ್ಯದಲ್ಲಿ ನೇಪಾಳ ಸೇಡಿ ತೀರಿಸಿಕೊಂಡಿದ್ದು, ಒಂದು ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ ತಂಡಕ್ಕೆ ನಾಯಕ ಪರಾಸ್ ಅವರ ಅರ್ಧಶತಕ ಹಾಗೂ ಸೊಂಪಾಲ್ ಅವರ ಸ್ಪೋಟಕ 61 ರನ್​​ನ ನೆರವಿನಿಂದ 48.5 ಓವರ್​​ಗೆ 216ಕ್ಕೆ ಆಲೌಟ್ ಆಯಿತು. 217 ರನ್​​ಗಳ ಗುರಿ ಬೆನ್ನಟ್ಟಿದ ನೆದರ್​​ಲೆಂಡ್​ ಆರಂಭದಿಂದಲೇ ವಿಕೆಟ್ ಕಳೆದುಕೊಂಡೆ ಸಾಗಿತು. ಆದರೆ ಕೊನೆ ಹಂತದಲ್ಲಿ 9 ವಿಕೆಟ್ ಕಳೆದುಕೊಂಡಿದ್ದರು ಕ್ಲಾಸೆನ್ ಹಾಗೂ ವಾನ್ ಉತ್ತಮ ಜೊತೆಯಾಟವಾಡಿ ತಂಡಕ್ಕೆ ಗೆಲುವಿನ ರುಚಿ ನೀಡಿದರು. ಕೊನೆಯ ಎಸೆತದಲ್ಲಿ ನೆದರ್​​ಲೆಂಡ್​ಗೆ ಗೆಲ್ಲಲು 2 ರನ್​​ಗಳು ಬೇಕಾಗಿತ್ತು. ಆದರೆ ಕ್ಲಾಸೆನ್ ಅವರನ್ನು ರನೌಟ್ ಮಾಡುವ ಮೂಲಕ ನೆಪಾಳ ತಂಡ ಒಂದು ರನ್​​ನ ಜಯ ದೊಂದಿಗೆ ಮೊದಲ ಅಂತರಾಷ್ಟ್ರೀಯಾ ಏಕದಿನ ಪಂದ್ಯವನ್ನು ಗೆದ್ದು ಕೊಂಡಿದೆ.
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...