Neeraj Chopra: ಒಲಿಪಿಂಕ್ಸ್​​ನಲ್ಲಿ ಭಾರತಕ್ಕೆ ಐತಿಹಾಸಿಕ ದಿನ: ಚಿನ್ನದ ಪದಕ ಗೆದ್ದ ನೀರಜ್ ಚೋಪ್ರಾ

Neeraj Chopra won gold medal : ಜಾವಲಿನ್​ ಥ್ರೋನಲ್ಲಿ ಭಾರತದ ನೀರಜ್​​ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.

ನೀರಜ್​ ಚೋಪ್ರಾ

ನೀರಜ್​ ಚೋಪ್ರಾ

 • Share this:
  ಒಲಿಂಪಿಕ್ಸ್​ನಲ್ಲಿ ಭಾರತದ 120 ವರ್ಷಗಳ ಕಾಯುವಿಕೆ ಕೊನೆಗೂ ಅಂತ್ಯವಾಗಿದೆ. ಶತಮಾನದ ಬಳಿಕ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಚಿನ್ನದ ಪದಕ ದಕ್ಕಿದೆ. ಜಾವಲಿನ್​ ಥ್ರೋನಲ್ಲಿ ಭಾರತದ ನೀರಜ್​​ ಚೋಪ್ರಾ ಚಿನ್ನದ ಪದಕ ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. 120 ವರ್ಷಗಳ ಬಳಿಕ ಚಿನ್ನದ ಪದಕ ಗೆದ್ದ ಹೆಗ್ಗಳಿಕೆಗೆ ನೀರಜ್​ ಪಾತ್ರರಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್​ನಲ್ಲಿ ಭಾರತಕ್ಕೆ ಇದು 7ನೇ ಪದಕವಾಗಿದೆ.

  23 ವರ್ಷದ ನೀರಜ್ ಮೊದಲ ಪ್ರಯತ್ನದಲ್ಲಿ 87.03 ಮೀಟರ್ ಹಾಗೂ ಎರಡನೇ ಪ್ರಯತ್ನದಲ್ಲಿ 87.58 ಮೀಟರ್ ಎಸೆದರು. ಆದರೆ ಮೂರನೇ ಪ್ರಯತ್ನ 76.79 ಮೀ.ಗಿಂತ ಕಡಿಮೆ ಎಸೆದಿದ್ದರು. ಇನ್ನು ಎರಡನೇ ಪ್ರಯತ್ನದಲ್ಲಿ ಎಲ್ಲರಿಗಿಂತಲೂ ಹೆಚ್ಚು ದೂರ  ಎಸೆದಿದ್ದರಿಂದ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಅಥ್ಲೆಟಿಕ್ಸ್​ ವಿಭಾಗದಲ್ಲಿ 120 ವರ್ಷಗಳಲ್ಲೇ ಇದೇ ಮೊದಲ ಬಾರಿಗೆ ಭಾರತ ಚಿನ್ನದ ಪದಕ ಗೆದ್ದಿದೆ.

  ನೀರಜ್​​ ಚೋಪ್ರಾ ಚಿನ್ನದ ಪದಕಕ್ಕೆ ಮುತ್ತಿಕ್ಕುತ್ತಲೇ ಪ್ರಧಾನಿ ಮೋದಿ ಟ್ವೀಟ್​ ಮೂಲಕ ಅಭಿನಂದಿಸಿದ್ದಾರೆ. ನೀರಜ್​ ಇಂದು ಸಾಧಿಸಿರುವುದನ್ನು ಭಾರತ ಎಂದಿಗೂ ಮರೆಯಲು ಸಾಧ್ಯವಿಲ್ಲ. ಇದೊಂದು  ಐತಿಹಾಸಿಕ ಗೆಲುವು ಎಂದು ಬಣ್ಣಿಸಿದ್ದಾರೆ.

  ಇನ್ನು ಸಿಎಂ ಬಸವರಾಜ್​ ಬೊಮ್ಮಾಯಿ ಅವರು ಸಹ ಬಂಗಾರದ ಹುಡುಗನಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ನೀರಜ್ ದೇಶದ ಕೀರ್ತಿಯನ್ನು ವಿಶ್ವ ಮಟ್ಟದಲ್ಲಿ ಬೆಳಗಿದ್ದಾರೆ, ಇದು ನಿಜಕ್ಕೂ ದೇಶಕ್ಕೆ ಹೆಮ್ಮೆ ತರುವ ವಿಚಾರ ಎಂದು ಟ್ವೀಟ್​ ಮಾಡಿದ್ದಾರೆ.

  ಯುವ ಪ್ರತಿಭೆ ನೀರಜ್ ಚೋಪ್ರಾ
  ಭಾರತದ ಏಕೈಕ ವಿಶ್ವದಾಖಲೆ ಹೊಂದಿರುವ ಜಾವೆಲಿನ್ ಕ್ರೀಡಾಪಟು ನೀರಜ್ ಚೋಪ್ರಾ 2016ರಲ್ಲಿ ಏಕಾಏಕಿ ಪ್ರಸಿದ್ಧರಾದರು. 2016ರಲ್ಲಿ ಪೋಲ್ಯಾಂಡ್‍ನಲ್ಲಿ ನಡೆದ ಐಎಎಎಫ್ ವಿಶ್ವ ಯು20 ಚಾಂಪಿಯನ್‍ಶಿಪ್‍ನಲ್ಲಿ 18 ವರ್ಷದ ನೀರಜ್ ತಮ್ಮ ಜೀವನದ ದಿಕ್ಕನ್ನೇ ಬದಲಾಯಿಸಿದರು. 86.48 ಮೀ ಈಟಿಯನ್ನು ಎಸೆದು ಹೊಸ ಜೂನಿಯರ್ ವಿಶ್ವ ದಾಖಲೆಯನ್ನು ಸ್ಥಾಪಿಸಿ, ಚಿನ್ನದ ಪದಕವನ್ನು ಪಡೆದರು. ಆ ಎಸೆತ, ಅವರು ಕಿರಿಯ ಕ್ರೀಡಾಪಟು ಆಗಿದ್ದರೂ, ಅವರನ್ನು ಹಿರಿಯರ ಶ್ರೇಯಾಂಕದಲ್ಲಿ 11ನೇ ಸ್ಥಾನದಲ್ಲಿ ಇರಿಸಿದೆ.

  ಅತ್ಯುತ್ತಮ ವೈಯುಕ್ತಿಕ ಸಾಧನೆ
  ಜಕಾರ್ತದಲ್ಲಿ 2018ರಲ್ಲಿ ನಡೆದ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಅವರು ಚಿನ್ನದ ಪದಕ ಗೆದ್ದು, 88.06ಮೀ ಭಾರತೀಯ ಹೊಸ ದಾಖಲೆ ಸೃಷ್ಟಿಸಿದ್ದರು. 2021ರಲ್ಲಿ ಇಂಡಿಯನ್ ಗ್ರಾಂಡ್ ಪ್ರಿಕ್ಸ್‍ನಲ್ಲಿ 88.07ಮೀ ಎಸೆತದ ಮೂಲಕ ತಾವೇ ತಮ್ಮ ದಾಖಲೆಯನ್ನು ಮುರಿದಿದ್ದರು. ಗೋಲ್ಡ್ ಕೋಸ್ಟ್ 2018 ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರು 2016ರ ಐಎಎಎಫ್ ವಿಶ್ವ ಯು20ನಲ್ಲಿ 86.48ಮೀ ಎಸೆತದ ಮೂಲಕ ವಿಶ್ವ ಜೂನಿಯರ್ ದಾಖಲೆ ನಿರ್ಮಿಸಿದ ವಿಶ್ವ ಚಾಂಪಿಯನ್ ಕೂಡ.

  ಭಾರತೀಯ ಸೇನೆಯ ನಿಯೋಜಿತ ಅಧಿಕಾರಿ
  ನೀರಜ್ ಚೋಪ್ರಾ ಭಾರತೀಯ ಸೇನೆಗೆ ಸೇರಿದ್ದಾರೆ, ಅವರನ್ನು ಭಾರತೀಯ ಸೇನೆಯು ಕಿರಿಯ ನಿಯೋಜಿತ ಅಧಿಕಾರಿಯಾಗಿ ನೇಮಿಸಿದೆ. ವಿಶ್ವದ ಅತ್ಯಂತ ಪ್ರಸಿದ್ಧ ತರಬೇತುದಾರಾದ ಯುವೆ ಹೋನ್ ಅವರೊಂದಿಗೆ ತರಬೇತಿ ಪಡೆಯುತ್ತಿದ್ದಾರೆ.
  Published by:Kavya V
  First published: