Neeraj Chopra: ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ, ಗೋಲ್ಡನ್ ಬಾಯ್ ಐತಿಹಾಸಿಕ ದಾಖಲೆ

ನೀರಜ್ ಚೋಪ್ರಾ

ನೀರಜ್ ಚೋಪ್ರಾ

Neeraj Chopra: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ನೀರಜ್ ಚೋಪ್ರಾ ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ನೀರಜ್ ಡೈಮಂಡ್ ಲೀಗ್ ಫೈನಲ್ ಗೆದ್ದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.

  • Share this:

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ನೀರಜ್ ಚೋಪ್ರಾ (Neeraj Chopra) ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಜಾವೆಲಿನ್ ಸ್ಪರ್ಧೆಯಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡುವ ಮೂಲಕ  ಜ್ಯೂರಿಚ್​ನಲ್ಲಿ ನಡೆದ  ಡೈಮಂಡ್ ಲೀಗ್  (Diamond League)  ಕೂಟದಲ್ಲಿ ಚಿನ್ನದ ಪದಕ ಗೆದ್ದರು. ಈ ಮೂಲಕ ಡೈಮಂಡ್ ಲೀಗ್ ಪ್ರಶಸ್ತಿಯನ್ನು  ಗೆದ್ದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದರು. ಡೈಮಂಡ್ ಲೀಗ್ ಫೈನಲ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಗೆದ್ದಿದ್ದಾರೆ. ಜ್ಯೂರಿಚ್‌ನಲ್ಲಿ ನಡೆದ ಫೈನಲ್‌ನಲ್ಲಿ ನೀರಜ್ 88.44 ಮೀಟರ್‌ ದೂರ ಎಸೆದು ಪದಕಕ್ಕೆ ಮುತ್ತಿಕ್ಕಿದರು.


ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ:


ನೀರಜ್ ಚೋಪ್ರಾ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. ಡೈಮಂಡ್ ಲೀಗ್ ಫೈನಲ್‌ನಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ 88.44 ಮೀಟರ್‌ ದೂರ ಎಸೆದು ಪದಕವನ್ನು ಗೆದ್ದು ಬೀಗಿದರು. 24 ವರ್ಷದ ನೀರಜ್ ಡೈಮಂಡ್ ಲೀಗ್ ಫೈನಲ್ ಗೆದ್ದ ಮೊದಲ ಭಾರತೀಯ ಎನಿಸಿಕೊಂಡರು. ಫೈನಲ್‌ನಲ್ಲಿ ಭಾರತದ ಆಟಗಾರ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಯಾಕುಬ್ ವಾಡ್ಲೆಡ್ಜ್ ಮತ್ತು ಜರ್ಮನಿಯ ಜೂಲಿಯನ್ ವೆಬರ್ ಅವರನ್ನು ಚೋಪ್ರಾ ಸೋಲಿಸಿದರು.ನೀರಜ್ ಹರಿಯಾಣದ ಪಾಣಿಪತ್ ಸಮೀಪದ ಖಂಡಾರಾ ಗ್ರಾಮದ ನಿವಾಸಿ. ಅವರು ಆಗಸ್ಟ್ 27 ರಂದು ಡೈಮಂಡ್ ಲೀಗ್‌ನಲ್ಲಿ ಲುಸೇನ್ ಲೀಗ್‌ನಲ್ಲಿ ಪದಕವನ್ನು ಗೆದ್ದರು. ಆ ಬಳಿಕ ಎಲ್ಲರ ಕಣ್ಣು ಡೈಮಂಡ್ ಲೀಗ್‌ನತ್ತ ನೆಟ್ಟಿತ್ತು. ಅವರು ಈ ಹಿಂದೆ 2017 ಮತ್ತು 2018 ರಲ್ಲಿ ಫೈನಲ್‌ಗೆ ಆಡಿದ್ದರು. ಆದರೆ ಅವರು ಯಶಸ್ವಿಯಾಗಿರಲಿಲ್ಲ.


ಇದನ್ನೂ ಓದಿ: Asia Cup 2022: ಮೈದಾನದಲ್ಲಿ ಅಫ್ಘಾನ್​ ಬೌಲರ್​ಗೆ ಬ್ಯಾಟ್​ ಬೀಸಿದ ಪಾಕ್​ ಆಟಗಾರ, ಸ್ಟೇಡಿಯಂನಲ್ಲಿ ಬಡಿದಾಡಿಕೊಂಡ ಫ್ಯಾನ್ಸ್


ಜ್ಯೂರಿಚ್‌ನಲ್ಲಿ ನೀರಜ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಮೊದಲ ಥ್ರೋ ಫೌಲ್ ಪಡೆಯಿತು. ಗಾಯದಿಂದ ಬಳಲುತ್ತಿದ್ದ ನೀರಜ್ ಛಲ ಬಿಡಲಿಲ್ಲ. ಅವರು ಮತ್ತೊಂದು ಪ್ರಯತ್ನ ಮಾಡಿದರು. ಎರಡನೆ ಯತ್ನ ಯಶಸ್ವಿಯಾದ ಅವರು ಎದುರಾಳಿ ಆಟಗಾರರನ್ನು ಧೂಳಿಪಟ ಮಾಡಿದರು. ಮೂರನೇ ಪ್ರಯತ್ನ ಇನ್ನೂ ಉತ್ತಮವಾಗಿತ್ತು. ಎರಡನೇ ಪ್ರಯತ್ನದಲ್ಲಿ ಅವರು ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಜಿ 88.44 ಮೀ ದಾಖಲೆಯ ಎಸೆತವನ್ನು ಎಸೆದಿದ್ದರು. ಮುಂದಿನ 4ಎಸೆತಗಳಲ್ಲಿ 88.00ಮೀ, 86.11ಮೀ, 87.00ಮೀ ಮತ್ತು 83.60ಮೀ ಎಸೆಯುವ ಮೂಲಕ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.


ಒಲಿಂಪಿಕ್ಸ್‌ನಲ್ಲಿ ಸಾಧನೆ ಮಾಡಿದ್ದ ನೀರಜ್​:ಕಳೆದ ವರ್ಷ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ನಂತರ ನೀರಜ್ ಚೋಪ್ರಾ ಪ್ರಪಂಚದಾದ್ಯಂತ ಚರ್ಚೆಯಾದರು. ಅಭಿನವ್ ವೃಂದಾ ನಂತರ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಲ್ಲದೆ, ನೀರಜ್ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು. ಈ ವರ್ಷ ನೀರಜ್ ಮೂರು ದೊಡ್ಡ ದಾಖಲೆಗಳನ್ನು ಮುರಿದರು. ಜುಲೈ 24 ರಂದು ಯುಎಸ್‌ಎಯ ಯುಜೀನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಅವರು ಬೆಳ್ಳಿ ಪದಕವನ್ನು ಗೆದ್ದರು. ಈ ಮಧ್ಯೆ, ನೀರಜ್ ಗಾಯಗೊಂಡ ಕಾರಣದಿಂದ  ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾಗವಹಿಸಲಿಲ್ಲ.


Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು