TOKYO OLYMPICS : ಜಪಾನ್‌ನ ಟೋಕಿಯೋ ಒಲಿಂಪಿಕ್ಸ್ 2020ಯಲ್ಲಿ ಪುರುಷರ ಜಾವೆಲಿನ್ ಸ್ಪರ್ಧೆಯಲ್ಲಿ ಭಾರತದ ನೀರಜ್ ಚೋಪ್ರಾ ಜಾವೆಲಿನ್ ಅನ್ನು 87.58 ಮೀಟರ್ ದೂರ ಎಸೆದು ಚಿನ್ನದ ಪದಕ ಗೆದ್ದರು. ಈ ಮೂಲಕ ಟ್ರ್ಯಾಕ್ ಮತ್ತು ಫೀಲ್ಡ್ ಈವೆಂಟ್‌ಗಳಲ್ಲಿ ಭಾರತದ 100 ವರ್ಷಗಳ ಪದಕದ ಕಾಯುವಿಕೆಯನ್ನು ಕೊನೆಗೊಳಿಸಿದರು. 23 ವರ್ಷದ ನೀರಜ್ ಚೋಪ್ರಾ ತನ್ನ ಮೊದಲ ಎಸೆತದಲ್ಲೇ 87.03 ಮೀಟರ್ ದೂರ ಎಸೆದರು ಮತ್ತು ಅವರ ಚಿನ್ನದ ಪದಕ ಗೆದ್ದ ಥ್ರೋ ಅಥವಾ ಎಸೆತ 2ನೇ ಪ್ರಯತ್ನದಲ್ಲಿ ಬಂದಿತು. ವಾಸ್ತವವಾಗಿ, ನೀರಜ್‌ರ ಮೊದಲ ಎಸೆತವು ಅವರಿಗೆ ಚಿನ್ನದ ಪದಕ ಗೆಲ್ಲಲು ಸಾಕಾಗುತ್ತಿತ್ತು. ಏಕೆಂದರೆ ಪದಕ ಗೆದ್ದ ಇತರ ಸ್ಪರ್ಧಿಗಳು ಹಾಗೂ ಫೈನಲ್‌ನಲ್ಲಿ ಆಡಿದ ಎಲ್ಲ ಸ್ಪರ್ಧಿಗಳು, ನೀರಜ್ ಚೋಪ್ರಾ ಎಸೆದ ಮೊದಲ ಪ್ರಯತ್ನದಷ್ಟು ದೂರವನ್ನು ಮೀರಿಸಲು ಯಾರ ಕೈಯಲ್ಲೂ ಆಗಲಿಲ್ಲ. ಹೀಗ್ಯಾಕೆ ಈ ಹಳೆಯ ವಿಚಾರ ಅಂತೀರಾ.. ಮುಂದಿದೆ ನೋಡಿ ಹೊಸ ವಿಷ್ಯ..
ಇತ್ತೀಚಿನ ಸಂದರ್ಶನವೊಂದರಲ್ಲಿ, ನೀರಜ್ ಚೋಪ್ರಾ, ತಾವು ಫೈನಲ್ಸ್‌ನಲ್ಲಿ ತಮ್ಮ ಮೊದಲ ಎಸೆತ ಅಥವಾ ಪ್ರಯತ್ನವನ್ನು ತರಾತುರಿಯಲ್ಲಿ ಮಾಡಿದ್ದಾಗಿ ಹೇಳಿದರು. ಅಲ್ಲದೆ, ಪಾಕಿಸ್ತಾನದ ಅರ್ಷದ್ ನದೀಮ್ ತಮ್ಮ ಜಾವೆಲಿನ್ ಅನ್ನು ಹೊತ್ತುಕೊಂಡಿದ್ದರು ಎಂದೂ ಚಿನ್ನದ ಪದಕ ವಿಜೇತ ಬಹಿರಂಗಪಡಿಸಿದ್ದಾರೆ.
"ನಾನು ಒಲಿಂಪಿಕ್ಸ್‌ನಲ್ಲಿ ಫೈನಲ್‌ನಲ್ಲಿ ನನ್ನ ಜಾವೆಲಿನ್ ಅನ್ನು ಹುಡುಕುತ್ತಿದ್ದೆ. ನನಗೆ ಅದನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಇದ್ದಕ್ಕಿದ್ದಂತೆ, ಅರ್ಷದ್ ನದೀಮ್ ನನ್ನ ಜಾವೆಲಿನ್ ಜೊತೆ ತಿರುಗುತ್ತಿರುವುದನ್ನು ನಾನು ನೋಡಿದೆ. ಆಗ ನಾನು ಅವನಿಗೆ ‘ಭಾಯ್ ಈ ಜಾವೆಲಿನ್ ನನಗೆ ಕೊಡು, ಅದು ನನ್ನ ಜಾವೆಲಿನ್! ನಾನು ಅದರೊಂದಿಗೆ ಸ್ಪರ್ಧೆಯಲ್ಲಿ ಆಡಬೇಕು'' ಎಂದು ಹೇಳಿದೆ. ನಂತರ, ಅದನ್ನು ನನಗೆ ಮರಳಿ ಕೊಟ್ಟರು. ಅದಕ್ಕಾಗಿಯೇ ನೀವು ನನ್ನ ಮೊದಲ ಥ್ರೋ ಅನ್ನು ಆತುರದಿಂದ ತೆಗೆದುಕೊಂಡಿದ್ದನ್ನು ನೀವು ನೋಡಿರಬೇಕು" ಎಂದು ನೀರಜ್ ಚೋಪ್ರಾ ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದ್ದರು.
ನೀರಜ್ ಚೋಪ್ರಾರ ಈ ಹೇಳಿಕೆಯ ನಂತರ, ಘಟನೆಗೆ ಸಂಬಂಧಪಟ್ಟ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಆ ವಿಡಿಯೋವನ್ನು ನೀವೇ ಒಮ್ಮೆ ನೋಡಿ..
Arshad Nadeem caught tampering with @Neeraj_chopra1 Javelin in the @Olympics final. pic.twitter.com/8isNbGQw6Z
— Jangra_jee (@jangra_jee) August 25, 2021
ಇನ್ನು, ಪಾಕ್ ಆಟಗಾರ ಅರ್ಷದ್ ನದೀಮ್, ಫೈನಲ್ಸ್‌ನಲ್ಲಿ 85.16 ಮೀ ಎಸೆದು ಅತ್ಯುತ್ತಮ ಪ್ರಯತ್ನ ಮಾಡಿದರು. ಜರ್ಮನಿಯ ಜೋಹಾನ್ಸ್ ವೆಟ್ಟರ್ 85.64 ಮೀಟರ್ ಅತ್ಯುತ್ತಮ ಎಸೆತವನ್ನು ದಾಖಲಿಸಿದ್ದಾರೆ. ಆದರೆ ಜೆಕ್ ಗಣರಾಜ್ಯದ ಜಾಕೋಬ್ ವಾಡ್ಜೆಜ್ಚ್ (86.67 ಮೀ) ಮತ್ತು ವಿಟೆಜ್ಸ್ಲಾವ್ ವೆಸೆಲಿ (85.44 ಮೀ) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು.
ರವಿ ದಹಿಯಾ ಹಾಗೂ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದರು. ಇನ್ನು, ಲವ್ಲಿನಾ ಬೊರ್ಗೊಹೈನ್, ಪಿವಿ ಸಿಂಧು, ಭಜರಂಗ್ ಪುನಿಯಾ ಮತ್ತು ಭಾರತೀಯ ಪುರುಷರ ಹಾಕಿ ತಂಡ ಕಂಚಿನ ಪದಕಗಳನ್ನು ಗಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ