ಸೊಟೆವಿಲೆ ಅಥ್ಲೆಟಿಕ್ಸ್: ಚಿನ್ನದ ಪದಕ ಗೆದ್ದ ಭಾರತದ ನೀರಜ್ ಚೋಪ್ರಾ

 • News18
 • 5-MIN READ
 • Last Updated :
 • Share this:

  ನ್ಯೂಸ್ 18 ಕನ್ನಡ

   ಸೊಟೆವಿಲೆ (ಜುಲೈ. 18): ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಫ್ರಾನ್ಸ್​​ನಲ್ಲಿ ನಡೆಯುತ್ತಿರುವ ಸೊಟೆವಿಲೆ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.

  85.17 ಮೀಟರ್ ದೂರಕ್ಕೆ ಜಾವೆಲಿನ್ ಎಸೆತದ ಚೋಪ್ರಾ, ಟ್ರಿನಿಡಾಡ್​ನ ಕೇಶೋರ್ನ್ ವಾಲ್​ಕೊಟ್ ಅವರನ್ನು ಹಿಂದಿಕ್ಕಿ ಈ ಸಾಧನೆ ಮಾಡಿದ್ದಾರೆ. ಅಂತೆಯೆ ಮೊಲ್ಡೊವಾದ ಆಂಡ್ರಿಯಾನ್ ಮಾರ್ಡೆರೆ 81.48 ಮೀಟರ್​ನೊಂದಿಗೆ ಬೆಳ್ಳಿ ಪದಕ ಸ್ವೀಕರಿಸಿದರೆ, ಲಿಥುವೇನಿಯದ ಎಡಿಸ್ ಮ್ಯಾಟುಸೆವಿಶಿಯಸ್ 79.31 ಮೀ ನೊಂದಿಗೆ ಕಂಚು ಪದಕ ತಮ್ಮದಾಗಿಸಿದ್ದಾರೆ. ಇನ್ನು ಟ್ರಿನಿಡಾಡ್​ನ ವಾಲ್​ಕೊಟ್ 5ನೇ ಸ್ಥಾನ ಅಲಂಕರಿಸಿದ್ದಾರೆ. ಈ ಬಾರಿಯ ಕಾಮನ್ವೆಲ್ತ್‌ ಗೇಮ್ಸ್ ನಲ್ಲಿ ಚಿನ್ನ ಗೆದ್ದಿದ್ದ ಚೋಪ್ರಾ ಫ್ರಾನ್ಸ್ ಕ್ರೀಡಾಕೂಟದಲ್ಲೂ 85.17 ಮೀಟರ್ ಈಟಿ ಎಸೆದು ಚಿನ್ನ ಕೊರಳಿಗೇರಿಸಿಕೊಂಡರು. ವಿಶ್ವ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾರತ ಪರ ಗಮನ ಸೆಳೆಯುತ್ತಿರುವ ದೇಶದ ಟಾಪ್ ಜಾವೆಲಿನ್ ಥ್ರೋವರ್ ನೀರಜ್, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಸಾಧನೆಯೊಂದಿಗೆ ಚಿನ್ನ ಗೆದ್ದು, ಮತ್ತೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

  ನೀರಜ್ ಗೆಲುವಿಗೆ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಎಎಫ್​ಐ ಮುಖ್ಯಸ್ಥ ಆದಿಲ್ ಸುಮರಿವಾಲಾ ಸೇರಿದಂತೆ ಅನೇಕರು ಟ್ವೀಟ್ ಮಾಡಿ ಶುಭಕೋರಿದ್ದಾರೆ.

      

  First published: