Neeraj Chopra: ಸಾಧಿಸುವುದು ಬಹಳಷ್ಟಿದೆ, ನನ್ನ ಜೀವನಾಧರಿತ ಚಿತ್ರ ಈಗಲೇ ಬೇಡ ಎಂದ ಚಿನ್ನದ ಹುಡುಗ ನೀರಜ್​ ಚೋಪ್ರಾ

ಕಳೆದ ವರ್ಷ ಆದ ಮೊಣಕೈ ಗಾಯದ ಬಳಲಿಕೆ, ಸೋಂಕಿನ ಬಿಕ್ಕಟ್ಟಿನಿಂದ ಸಹಿಸಿಕೊಂಡಿದ್ದ ಎಲ್ಲಾ ನೋವುಗಳು ಈ ಪದಕದಿಂದ ದೂರಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದ್ದರು

ನೀರಜ್ ಚೋಪ್ರಾ

ನೀರಜ್ ಚೋಪ್ರಾ

 • Share this:
  ಚಿನ್ನದ ಹುಡುಗ ನೀರಜ್​ ಈಗ ಅನೇಕ ಯುವ ಪೀಳಿಗೆಗೆ ಸ್ಪೂರ್ತಿ. ಇವರ ಈ ಸಾಧನೆಗೆ ಮೆಚ್ಚು ದೇಶದ ಜನರು ಶುಭಾಶಯಗಳ ಮಳೆಗರೆದಿದ್ದಾರೆ. 120 ವರ್ಷಗಳ ಬಳಿಕ ಒಲಂಪಿಕ್ಸ್​​ನಲ್ಲಿ ಚಿನ್ನ ಪಡೆದ ಸಾಧನೆ ಮಾಡಿದ ಇವರ ಯಶೋಗಾಥೆಯನ್ನು ಸಿನಿಮಾ ಮಾಡಲು ಈಗ ಬಾಲಿವುಡ್​ ಮಂದಿ ಹವಣಿಸುತ್ತಿದ್ದಾರೆ. ಅನೇಕ ಕ್ರೀಡಾ ತಾರೆಗಳ ಸಿನಿಮಾ ಮಾಡಿ ಯಶ ಕಂಡಿರುವ ಬಾಲಿವುಡ್​ ಸಿನಿ ನಿರ್ದೇಶಕರು ಬಂಗಾರದ ಹುಡುಗನ ಮೇಲೆ ಕಣ್ಣು ನೆಟ್ಟಿದ್ದು, ಜೀವಾನಾಧರಿತ ಚಿತ್ರ ಮಾಡಲು ತಯಾರಿ ನಡೆಸಿದ್ದಾರೆ. ಈಗಾಗಲೇ ಸಿನಿಮಾಗೆ ಅಕ್ಷಯ್​ ಕುಮಾರ್ ಅವನರನು ನಾಯಕರಾಗಿ ಹಾಕಿಕೊಳ್ಳುವುದು ಅಥವಾ ರಣದೀಪ್​ ಹೂಡಾ ಅವರನ್ನು ಹಾಕಿಕೊಳ್ಳುವುದ ಎಂಬ ಚರ್ಚೆ ಕೂಡ ಆರಂಭವಾಗಿದೆ. ಈ ಎಲ್ಲಾ ಬೆಳವಣಿಗೆ ಹಿನ್ನಲೆ ಈ ಕುರಿತು ಖುದ್ದು ಮಾತನಾಡಿರುವ ಬಂಗಾರದ ಹುಡುಗ ನೀರಜ್​, ಈಗಲೇ ನನ್ನ ಜೀವನಾಧರಿತ ಚಿತ್ರ ಮಾಡಬೇಡಿ ಎಂದು ನಿರ್ದೇಶಕರಿಗೆ ತಿಳಿಸಿದ್ದಾರೆ.

  ಚಿನ್ನದ ಪದಕದೊಂದಿಗೆ ದೇಶಕ್ಕೆ ಮರಳಿದ ಬಳಿಕ ಮಾತನಾಡಿರುವ ನೀರಜ್​, ಚಿನ್ನದ ಪದಕ ಪಡೆದು ಮೈದಿಕೆಯಲ್ಲಿದ್ದಾಗ ರಾಷ್ಟ್ರಗೀತೆ ನುಡಿಸುತ್ತಿದ್ದಂತೆ ನನಗೆ ತುಂಬಾ ಹೆಮ್ಮೆ ಆಯಿತು ಎಂದ ಅವರು, ಅಥ್ಲೆಟಿಕ್ಸ್​ ನಲ್ಲಿ ಭಾರತಕ್ಕೆ ಉತ್ತಮ ಭವಿಷ್ಯ ಇದೆ ಎಂದರು.
  ಇದೇ ವೇಳೆ ನಿಮ್ಮ ಜೀವನಾಧರಿತ ಚಿತ್ರದಲ್ಲಿ ನಿಮ್ಮ ಪಾತ್ರ ಯಾರು ಮಾಡಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈಗಲೇ ನನ್ನ ಜೀವನಾಧರಿತ ಚಿತ್ರ ಮಾಡಬೇಡಿ. ಇನ್ನೂ ನಾನು ಆಡುತ್ತಿದ್ದೇನೆ. ಇದನ್ನು ಮುಂದುವರೆಸುವುದು ನನ್ನ ಇಚ್ಛೆ. ನನ್ನ ಜೀವನ ಪ್ರಯಾಣದಲ್ಲಿ ಅನೇಕ ಕಥೆಗಳನ್ನು ಸೇರಿಸಬೇಕು ಎಂಬುದು ನನ್ನ ಇಚ್ಛೆ . ಇನ್ನು ಅನೇಕ ಪದಕಗಳನ್ನು ಗೆಲ್ಲಬೇಕು ಎಂಬ ಅಭಿಲಾಷೆ ಹೊಂದಿದ್ದೇನೆ. ನನ್ನ ಆಟದ ಕಡೆ ಹೆಚ್ಚಿನ ಗಮನ ನೀಡಬೇಕು. ನಾನು ಆಟದಿಂದ ನಿವೃತ್ತಿ ಆದ ಬಳಿಕ ನನ್ನ ಮೇಲೆ ಚಿತ್ರ ಮಾಡಿ ಎಂದಿದ್ದಾರೆ.

  ಇದನ್ನು ಓದಿ: ದಾಖಲೆ ಬರೆದ ಎಸ್​ಎಸ್​ಎಲ್​ಸಿ ಫಲಿತಾಂಶ; ಒಬ್ಬ ವಿದ್ಯಾರ್ಥಿ ಮಾತ್ರ ಫೇಲ್​​

  ಪದಕ ಗೆಲ್ಲುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿವ್ಯಕ್ತವಾದ ಪ್ರೀತಿಗೆ ಮಾತೇ ಹೊರಡಲಿಲ್ಲ.. ರಾತ್ರೋ ರಾತ್ರಿ ಅನೇಕ ಬೆಂಬಲಿಗರನ್ನು ನಾನು ಪಡೆದೆ. ನಾನು ಸಾಮಾಜಿಕ ಜಾಲತಾಣದಲ್ಲಿ ಆಗಾಗ ನನ್ನ ಆಟದ ವಿಡಿಯೋ ಹಂಚಿಕೊಳ್ಳುತ್ತಿರುತ್ತಾನೆ. ಅದಕ್ಕೆಲ್ಲಾ ಅಭಿನಂದನೆ ವ್ಯಕ್ತವಾಗಿದ್ದು, ಜನರು ನನ್ನ ಆಟ ಮೆಚ್ಚಿ ಹೊಗಳಿಕೆ ಸುರಿಮಳೆ ಸುರಿಸಿದ್ದಾರೆ.

  ಕಳೆದ ವರ್ಷ ಆದ ಮೊಣಕೈ ಗಾಯದ ಬಳಲಿಕೆ, ಸೋಂಕಿನ ಬಿಕ್ಕಟ್ಟಿನಿಂದ ಸಹಿಸಿಕೊಂಡಿದ್ದ ಎಲ್ಲಾ ನೋವುಗಳು ಈ ಪದಕದಿಂದ ದೂರಾಗಿದೆ ಎಂದು ಇದೇ ವೇಳೆ ಅವರು ತಿಳಿಸಿದ್ದರು

  23 ವರ್ಷದ ನೀರಜ್​ ತಮ್ಮ ಪದಕವನ್ನು ಅಥ್ಲೆಟಿಕ್​ಗಳಾದ ಮಿಲ್ಕಾ ಸಿಂಗ್​ ಮತ್ತು ಪಿಟಿ ಉಷಾ ಅವರಿಗೆ ಅರ್ಪಣೆ ಮಾಡಿದ್ದಾರೆ. ನಾನು ಇಲ್ಲಿ ಏನನ್ನು ಸಾಧಿಸಲು ಬಂದಿದ್ದೆನೋ ಅದನ್ನು ಸಾಧಿಸಿದ್ದೇನೆ. ಈಗ, ನಾನು ಮನೆಗೆ ಹೋಗಲು ಬಯಸುತ್ತೇನೆ. ಈಗ ಮನೆಗೆ ಹೋಗಬೇಕಿದೆ. ಅಮ್ಮನ ಕೈ ರುಚಿ ತಿಂದು, ಕುಟುಂಬದ ಜೊತೆ ಸಮಯ ಕಳೆಯಬೇಕಿದೆ. ಬಳಿಕ ನನ್ನ ತರಬೇತಿ ಆರಂಭಿಸುತ್ತೇನೆ ಎಂದಿದ್ದಾರೆ

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
  Published by:Seema R
  First published: