Neeraj Chopra- ಶಾಲಾ ಮಕ್ಕಳೊಂದಿಗೆ ನೀರಜ್ ಜೋಪ್ರಾ ಆಟ; ಸರಣಿ ಟ್ವೀಟ್ ಮೂಲಕ ಪ್ರಧಾನಿ ಮೋದಿ ಅಭಿನಂದನೆ

PM Narendra Modi Appreciates Neeraj Chopra- ಅಹ್ಮದಾಬಾದ್​ನ ಶಾಲಾ ಮಕ್ಕಳ ಜೊತೆ ವಿವಿಧ ಕ್ರೀಡೆಗಳಲ್ಲಿ ಸ್ವತಃ ಆಡಿದ ಒಲಿಂಪಿಕ್ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರನ್ನ ಪ್ರಧಾನಿ ಮೋದಿ ಶ್ಲಾಘಿಸಿ ಸರಣಿ ಟ್ವೀಟ್ ಮಾಡಿದ್ಧಾರೆ.

ಪುಟ್ಟ ಹುಡುಗನಿಗೆ ಜಾವೆಲಿನ್ ತರಬೇತಿ ಕೊಟ್ಟ ನೀರಜ್ ಚೋಪ್ರಾ

ಪುಟ್ಟ ಹುಡುಗನಿಗೆ ಜಾವೆಲಿನ್ ತರಬೇತಿ ಕೊಟ್ಟ ನೀರಜ್ ಚೋಪ್ರಾ

  • Share this:
ನವದೆಹಲಿ: ಗುಜರಾತ್ ರಾಜ್ಯದ ನಗರಿ ಅಹಮದಾಬಾದ್‌ನ ಸಂಸ್ಕಾರಧಾಮ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಕೆಲವೊಂದು ಕ್ರೀಡೆಗಳನ್ನು ಆಡುವ ಮೂಲಕ ಮಕ್ಕಳೊಂದಿಗೆ ಸಮಯ ಕಳೆಯುತ್ತಿರುವ ಭಾರತದ ಚಿನ್ನದ ಹುಡುಗ ನೀರಜ್ ಚೋಪ್ರಾ ಅವರ ವಿಡಿಯೋವನ್ನು ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್ ಮಾಡಿದ್ದಾರೆ. ಮೋದಿಯವರು ಸರಣಿ ಟ್ವೀಟ್‌ಗಳನ್ನು ಮಾಡುವ ಮೂಲಕ ನೀರಜ್ ಚೋಪ್ರಾ ಅವರ ಕ್ರೀಡಾ ಸ್ಫೂರ್ತಿಯನ್ನು ಮೆಚ್ಚಿಕೊಂಡಿದ್ದಾರೆ.

ಈ ಸರಣಿ ಟ್ವೀಟ್‌ಗಳು ನಿಮಗೆ ಸಂತೋಷ ನೀಡುವುದು ಖಂಡಿತ. ಈ ಸಂತಸದ ಸಮಯವನ್ನು ಮುಂದುವರಿಸೋಣ ಹಾಗೂ ನಮ್ಮ ಯುವಕರನ್ನು ಕ್ರೀಡಾಂಗಣದಲ್ಲಿ ಮಿಂಚುವಂತೆ ಪ್ರೇರೇಪಿಸೋಣ ಎಂದು ತಿಳಿಸಿ ಟ್ವೀಟ್ ಮಾಡಿದ್ದಾರೆ. ಯುವಕರನ್ನು ಕ್ರೀಡಾ ರಂಗದತ್ತ ಕರೆತರುವ ಹಾಗೂ ಫಿಟ್‌ನೆಸ್‌ನಲ್ಲಿ ಅವರನ್ನು ಪ್ರೇರೇಪಿಸಲು @Neeraj_chopra1 ಅವರಿಂದ ಇದು ಉತ್ತಮ ಉಪಕ್ರಮವಾಗಿದೆ ಎಂದು ಎರಡನೆಯ ಟ್ವೀಟ್ ಬಣ್ಣಿಸಿದ್ದಾರೆ. ಇಂತಹ ಪ್ರಯತ್ನಗಳು ಕ್ರೀಡೆ ಹಾಗೂ ವ್ಯಾಯಾಮದ ಕಡೆಗೆ ಕುತೂಹಲ ಹೆಚ್ಚಿಸುತ್ತದೆ ಎಂದು ಮತ್ತೊಂದು ಟ್ವೀಟ್‌ನಲ್ಲಿ ಮೋದಿಯವರು ನೀರಜ್ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.






ಮಕ್ಕಳೊಂದಿಗೆ ಸಂವಾದ ನಡೆಸಿದ ನೀರಜ್ ಚೋಪ್ರಾ:

ಒಲಿಂಪಿಕ್ ಸ್ವರ್ಣ ಪದಕ ವಿಜೇತ ನೀರಜ್ ಚೋಪ್ರಾ ಅವರು ಅವರು ಸಂಸ್ಕಾರಧಾಮ್ ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಜಾವೆಲಿನ್ ಸೇರಿದಂತೆ ಕೆಲವು ಕ್ರೀಡೆಗಳನ್ನು ಅವರೊಂದಿಗೆ ಆಡಿ ಕ್ರೀಡಾ ಸ್ಫೂರ್ತಿ ಮೆರೆದರು. ಇದೇ ಸಮಯದಲ್ಲಿ ಶಾಲಾ ಮಕ್ಕಳೊಂದಿಗೆ ವ್ಯಾಯಾಮ ಸೆಶನ್‌ಗಳನ್ನು ನಡೆಸಿದ ನೀರಜ್ ಚೋಪ್ರಾ ಅವರು ಕ್ರೀಡೆಗೆ ಸಂಬಂಧಿಸಿದ ಹಲವಾರು ಅಮೂಲ್ಯ ಸಲಹೆಗಳನ್ನು ಹಂಚಿಕೊಂಡರು.

ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಿದ ನೀರಜ್ ಚೋಪ್ರಾ, ನೆಚ್ಚಿನ ಖಾದ್ಯ ಯಾವುದು ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದಾಗ ನೆರೆದ ಪ್ರೇಕ್ಷಕರಿಂದ ಚಪ್ಪಾಟೆ ಗಿಟ್ಟಿಸಿಕೊಂಡರು. ವಿವಿಧ ರೀತಿಯ ಹಣ್ಣುಗಳನ್ನು ಇಷ್ಟಪಡುವ ಚೋಪ್ರಾ ತರಕಾರಿ ಹಾಕಿ ಮಾಡಿದ ಬಿರಿಯಾನಿ ಖಾದ್ಯವನ್ನು ಹೆಚ್ಚು ಮಸಾಲೆ ಹಾಕದೆ ಮಾಡುವುದು ಹೇಗೆ ಮತ್ತು ಅದನ್ನು ಮೊಸರಿನೊಂದಿಗೆ ಸೇವಿಸುವುದು ಹೇಗೆ ಎಂಬುದನ್ನು ತಿಳಿಸಿಕೊಟ್ಟರು. ಜಾವೆಲಿನ್ ಎಸೆತ ತನ್ನ ಮೇಲೆ ಅತ್ಯದ್ಭುತವಾಗಿ ಪರಿಣಾಮ ಬೀರಿರುವುದರಿಂದ ತನ್ನೊಳಗಿನ ಆಹಾರ ಪ್ರೇಮಿಯನ್ನು ನಿಯಂತ್ರಿಸುವುದೂ ಸವಾಲಿನ ಸಂಗಾತಿಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Neeraj Chopra Girlfriend: ಯುವತಿಯರ ಹಾರ್ಟ್​​ಗೆ ಕೊಳ್ಳಿ: ಗರ್ಲ್​​​ಫ್ರೆಂಡ್​​ ಬಗ್ಗೆ ಬಾಯ್ಬಿಟ್ಟ ನ್ಯಾಷನಲ್ ಕ್ರಷ್ ನೀರಜ್

ಟ್ವಿಟ್ಟರ್‌ನಲ್ಲಿ ಫೋಟೋ ಹಂಚಿಕೊಂಡ ನೀರಜ್:

ವಿದ್ಯಾರ್ಥಿಗಳೊಂದಿಗೆ ನಡೆಸಿದ ಸಂವಾದ ಹಾಗೂ ವಿವಿಧ ಕ್ರೀಡೆಗಳನ್ನು ಆಡಿದ ಕ್ಷಣಗಳನ್ನು ಹಂಚಿಕೊಂಡ ನೀರಜ್ ಚೋಪ್ರಾ ಟ್ವಿಟ್ಟರ್‌ನಲ್ಲಿ ಈ ಸಂಬಂಧಿತವಾಗಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸಂಸ್ಕಾರಧಾಮ್‌ನಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸುವುದು, ಅವರೊಂದಿಗೆ ಕ್ರೀಡೆಗಳನ್ನು ಆಡುವುದು ಮತ್ತು ಫಿಟ್‌ನೆಸ್‌ನಲ್ಲಿ ವ್ಯಾಯಾಮ ಮತ್ತು ಆಹಾರದ ಮಹತ್ವದ ಕುರಿತು ಅವರೊಂದಿಗೆ ಸಂವಾದ ನಡೆಸಿರುವುದು ಅದ್ಭುತ ಕ್ಷಣವಾಗಿದೆ. ಕ್ರೀಡೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಿಗೆ ಸಮತೋಲನವನ್ನು ಒದಗಿಸಿರುವ ಈ ಶಾಲೆಯನ್ನು ನೋಡಿ ಎಂದು ಟ್ವೀಟ್ ಮಾಡಿ ಶಾಲೆಯನ್ನು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ: Neeraj Chopra ಡ್ಯಾನ್ಸಿಂಗ್ ಮೂವ್ಸ್ ಗೆ ಫ್ಯಾನ್ಸ್ ಫುಲ್ ಖುಷ್ - ಮದುವೆ ಮೆರವಣಿಗೆಯಿಂದ ಪಾರ್ಟಿ ಡ್ಯಾನ್ಸ್ ವಿಡಿಯೋ ವೈರಲ್

ಕಾರ್ಯಕ್ರಮದ ಭಾಗವಾಗಿ, ಮುಂಬರುವ ದಿನಗಳಲ್ಲಿ ಇತರ ಪ್ರಮುಖ ಭಾರತೀಯ ಕ್ರೀಡಾಪಟುಗಳಿಂದ ಇಂತಹ ಹೆಚ್ಚಿನ ಉಪಕ್ರಮಗಳನ್ನು ನಿರೀಕ್ಷಿಸಲಾಗಿದೆ. ಹಲವಾರು ಕ್ರೀಡಾಪಟುಗಳಾದ ತರುಣ್‌ದೀಪ್ ರೈ (ಆರ್ಚರಿ), ಸಾರ್ಥಕ್ ಭಾಂಬ್ರಿ (ಅಥ್ಲೆಟಿಕ್ಸ್), ಸುಶೀಲಾ ದೇವಿ (ಜೂಡೋ), ಕೆಸಿ ಗಣಪತಿ ಮತ್ತು ವರುಣ್ ಠಕ್ಕರ್ (ಸೈಲಿಂಗ್) ದೇಶಾದ್ಯಂತ ವಿವಿಧ ಶಾಲೆಗಳಿಗೆ ಭೇಟಿ ನೀಡಿ ಶಾಲಾ ಮಕ್ಕಳಿಗೆ ತರಬೇತಿ ನೀಡಲಿದ್ದಾರೆ ಎಂಬುದಾಗಿ ಮಾಹಿತಿ ದೊರಕಿದೆ.

ಭಾಷಾಂತರ ನೆರವು: ಏಜೆನ್ಸಿ
Published by:Vijayasarthy SN
First published: