Neeraj Chopra Injury: ಕಾಮನ್​ವೆಲ್ತ್ ಗೇಮ್ಸ್​ನಿಂದ ನೀರಜ್ ಚೋಪ್ರಾ ಹೊರಕ್ಕೆ, ಏನು ಕಾರಣ?

ಕಾಮನ್‌ವೆಲ್ತ್ ಗೇಮ್ಸ್‌ ಜುಲೈ 28 ರಂದು ಪ್ರಾರಂಭವಾಗಲಿರುವ ಕಾಮನ್​ವೆಲ್ತ್ ಗೇಮ್ಸ್​ನಿಂದ ನೀರಜ್ ಚೋಪ್ರಾ ಹೊರಗುಳಿಯಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ ಜುಲೈ 28 ರಂದು ಪ್ರಾರಂಭವಾಗಲಿರುವ ಕಾಮನ್​ವೆಲ್ತ್ ಗೇಮ್ಸ್​ನಿಂದ ನೀರಜ್ ಚೋಪ್ರಾ ಹೊರಗುಳಿಯಲಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್‌ ಜುಲೈ 28 ರಂದು ಪ್ರಾರಂಭವಾಗಲಿರುವ ಕಾಮನ್​ವೆಲ್ತ್ ಗೇಮ್ಸ್​ನಿಂದ ನೀರಜ್ ಚೋಪ್ರಾ ಹೊರಗುಳಿಯಲಿದ್ದಾರೆ.

  • Share this:

    ಪ್ರಖ್ಯಾತ ಜಾವೆಲಿನ್ ಎಸೆತಗಾರ ಮತ್ತು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ (Neeraj Chopra Injury) ಗಾಯದಿಂದಾಗಿ ಕಾಮನ್‌ವೆಲ್ತ್ ಗೇಮ್ಸ್‌ನಿಂದ (Commonwealth Games 2022) ಹೊರಗುಳಿಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.  ಕಾಮನ್‌ವೆಲ್ತ್ ಗೇಮ್ಸ್‌ ಜುಲೈ 28 ರಂದು ಪ್ರಾರಂಭವಾಗುತ್ತದೆ.  ಇತ್ತೀಚಿಗಷ್ಟೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಜಾವೆಲಿನ್ ಪಟು ನೀರಜ್ ಚೋಪ್ರಾ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಈ ಪಂದ್ಯದಲ್ಲಿ ನಾಲ್ಕನೇ ಸುತ್ತಿನಲ್ಲಿ ನೀರಜ್ ಚೋಪ್ರಾ 88.13 ಮೀಟರ್ ದೂರ ಎಸೆಯುವ ಮೂಲಕ ರಜತ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದೀಗ ನೀರಜ್ ಚೋಪ್ರಾ ಗಾಯದಿಂದ ಕಾಮನ್​ವೆಲ್ತ್ ಗೇಮ್ಸ್​ನಿಂದ ಹೊರಗುಳಿಯುವ ಸುದ್ದಿ ಹೊರಬಿದ್ದಿದೆ. 


    ನೀರಜ್​ಗೆ ಪ್ರಬಲ ಸ್ಪರ್ಧೆ ನೀಡಿದ ಆ್ಯಂಡರ್ಸನ್ ಪೀಟರ್ ಮೂರು ಬಾರಿ 90 ಮೀಟರ್ ಗಿಂತ ಹೆಚ್ಚು ಎಸೆದು ಬಂಗಾರದ ಪದಕ ಪಡೆದಿದ್ದರು. ಆದರೆ ಇದೀಗ ಭಾರತಕ್ಕೆ ಪದಕ ತಂಡುಕೊಡಬಲ್ಲ ಸಾಮರ್ಥ್ಯ ಹೊಂದಿದ್ದ ನೀರಜ್ ಚೋಪ್ರಾ ಕಾಮನ್​ವೆಲ್ತ್ ಗೇಮ್ಸ್​ನಿಂದ ಹೊರಗುಳಿಯುವ ಸುದ್ದಿ ಹೊರಬಿದ್ದಿದೆ.


    ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಹೇಗಿತ್ತು ಪಂದ್ಯ?
    ಇನ್ನು ನೀರಜ್ ಚೋಪ್ರಾ ತಮ್ಮ ಪಾಲಿನ ಎರಡನೇ ಪ್ರಯತ್ನದಲ್ಲಿ 82.39 ಮೀಟರ್ ದೂರ ಜಾವೆಲಿನ್ ಎಸೆದರು. ಮೂರನೇ ಸುತ್ತಿನಲ್ಲಿ ನೀರಜ್ ಚೋಪ್ರಾ 86.37 ಮೀಟರ್ ದೂರ ಜಾವೆಲಿನ್ ಎಸೆದರು. ಈ ಮೂಲಕ ಮೂರನೇ ಸುತ್ತಿನ ಅಂತ್ಯದ ವೇಳೆಗೆ ನೀರಜ್ ಚೋಪ್ರಾ 4ನೇ ಸ್ಥಾನ ಪಡೆದರು. ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ರಜತ ಪದಕಕ್ಕೆ ತೃಪ್ತಿ ಪಟ್ಟರು.ಯುಜೀನ್‌ನಲ್ಲಿ ನಡೆದ ಜಾವೆಲಿನ್ ಥ್ರೋ ಫೈನಲ್‌ನ ಮೊದಲ ಪ್ರಯತ್ನದಲ್ಲಿ ಪೌಲ್‌ ಮಾಡಿದ್ದರು.


    ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದ ನೀರಜ್ ಚೋಪ್ರಾ
    ಆದರೆ ನಾಲ್ಕನೇ ಸುತ್ತಿನಲ್ಲಿ ನೀರಜ್ ಚೋಪ್ರಾ 88.13 ಮೀಟರ್ ದೂರ ಎಸೆಯುವ ಮೂಲಕ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನೀರಜ್ ಚೋಪ್ರಾ ಅವರ ಚೊಚ್ಚಲ ಪಂದ್ಯ ಉತ್ತಮವಾಗಿರಲಿಲ್ಲ.


    ಎರಡನೇ ಸುತ್ತಿನಲ್ಲಿ ಜಾವೆಲಿನ್ ಅನ್ನು 82.39 ಮೀಟರ್ ದೂರಕ್ಕೆ ಎಸೆದರು. ಇನ್ನು ಮೂರನೇ ಸುತ್ತಿನಲ್ಲಿ ತಮ್ಮ ಪ್ರದರ್ಶನವನ್ನು ಸುಧಾರಿಸಿದ್ದರು. ಈ ಸುತ್ತಿನಲ್ಲಿ 86.37 ಮೀಟರ್ ದೂರಕ್ಕೆ ಜಾವೆಲಿನ್‌ ಎಸೆದು ಪದಕ ಗೆಲ್ಲುವ ಭರವಸೆ ಮೂಡಿಸಿದರು.


    ಇದನ್ನೂ ಓದಿ: Neeraj Chopra: ಮತ್ತೊಂದು ಇತಿಹಾಸ ಬರೆದ ಚಿನ್ನದ ಹುಡುಗ! ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್​ಶಿಪ್​ನಲ್ಲಿ ಬೆಳ್ಳಿ ಗೆದ್ದ ನೀರಜ್ ಚೋಪ್ರಾ


    ಇನ್ನು ನಾಲ್ಕನೇ ಪ್ರಯತ್ನದಲ್ಲಿ, ನೀರಜ್ ಶ್ರಮವನ್ನೆಲ್ಲಾ ಒಗ್ಗೂಡಿಸಿ ಬರೋಬ್ಬರಿ 88.13 ಮೀ ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ಪದಕ ಗೆಲ್ಲುವ ರೇಸ್‌ಗೆ ಪ್ರವೇಶಿಸಿದರು. ಆ ಬಳಿಕ ನಡೆದ ಐದು ಮತ್ತು ಆರನೇ ಸುತ್ತಿನಲ್ಲಿ ಚೋಪ್ರಾ ಎಸೆದ ಜಾವೆಲಿನ್‌ ಫೌಲ್‌ ಆಗಿತ್ತು. ಹೀಗಾಗಿ ಬೆಳ್ಳಿ ಪದಕಕ್ಕೆ ಸಂತೃಪ್ತಿ ಪಡೆಯುವಂತಾಯಿತು.


    ಅಂಜು ಬಾಬಿ ಜಾರ್ಜ್ ಸಾಧನೆ ನೆನಪಿಸಿದ್ದರು
    18 ವರ್ಷಗಳ ಹಿಂದೆ ಭಾರತ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದಿತ್ತು. 2003ರಲ್ಲಿ ಅನುಭವಿ ಅಥ್ಲೀಟ್ ಅಂಜು ಬಾಬಿ ಜಾರ್ಜ್ ಲಾಂಗ್ ಜಂಪ್ ನಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದರು.


    ಇದನ್ನೂ ಓದಿ: Neeraj Chopra: ಹಿರಿಯ ಅಭಿಮಾನಿಯ ಕಾಲುಮುಟ್ಟಿ ನಮಸ್ಕರಿಸಿದ ನೀರಜ್! ಚಿನ್ನದ ಹುಡುಗನ ಚಿನ್ನದಂಥಾ ಗುಣಕ್ಕೆ ನೆಟ್ಟಿಗರು ಫಿದಾ


    ಇನ್ನು ನಾಲ್ಕನೇ ಪ್ರಯತ್ನದಲ್ಲಿ, ನೀರಜ್ ಶ್ರಮವನ್ನೆಲ್ಲಾ ಒಗ್ಗೂಡಿಸಿ ಬರೋಬ್ಬರಿ 88.13 ಮೀ ದೂರಕ್ಕೆ ಜಾವೆಲಿನ್‌ ಎಸೆಯುವ ಮೂಲಕ ಪದಕ ಗೆಲ್ಲುವ ರೇಸ್‌ಗೆ ಪ್ರವೇಶಿಸಿದರು. ಆ ಬಳಿಕ ನಡೆದ ಐದು ಮತ್ತು ಆರನೇ ಸುತ್ತಿನಲ್ಲಿ ಚೋಪ್ರಾ ಎಸೆದ ಜಾವೆಲಿನ್‌ ಫೌಲ್‌ ಆಗಿತ್ತು. ಹೀಗಾಗಿ ಬೆಳ್ಳಿ ಪದಕಕ್ಕೆ ಸಂತೃಪ್ತಿ ಪಡೆಯುವಂತಾಯಿತು.

    Published by:guruganesh bhat
    First published: