ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ನಂತರ ನೀರಜ್ ಚೋಪ್ರಾ (Neeraj Chopra) ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ್ದಾರೆ. ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ಜಾವೆಲಿನ್ ಸ್ಪರ್ಧೆಯಲ್ಲಿ ಮತ್ತೊಮ್ಮೆ ಅದ್ಭುತ ಪ್ರದರ್ಶನ ನೀಡುವ ಮೂಲಕ ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿ ನಡೆದ ಡೈಮಂಡ್ ಲೀಗ್ (Diamond League) ಕೂಟದಲ್ಲಿ ಚಿನ್ನದ ಪದಕ ಗೆದ್ದರು. ಈ ಮೂಲಕ ಡೈಮಂಡ್ ಲೀಗ್ ಪ್ರಶಸ್ತಿಯನ್ನು (ಲೌಸನ್ನೆ ಡೈಮಂಡ್ ಲೀಗ್) ಗೆದ್ದ ಮೊದಲ ಭಾರತೀಯ ಎಂಬ ಸಾಧನೆ ಮಾಡಿದರು. ನೀರಜ್ ಚೋಪ್ರಾ ಮೊದಲ ಪ್ರಯತ್ನದಲ್ಲಿಯೇ 89.08 ಮೀಟರ್ ದೂರ ಜಾವೆಲಿನ್ ಎಸೆದು ಚಿನ್ನದ ಪದಕ ಗೆದ್ದರು. ಇದು ಅವರ ವೃತ್ತಿಜೀವನದ ಮೂರನೇ ಅತ್ಯುತ್ತಮ ಎಸೆತವಾಗಿದೆ
ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ:
ನೀರಜ್ ಚೋಪ್ರಾ ಮತ್ತೊಮ್ಮೆ ಇತಿಹಾಸ ನಿರ್ಮಿಸಿದ್ದಾರೆ. ಸ್ವಿಟ್ಜರ್ಲೆಂಡ್‌ನ ಲೌಸನ್ನೆಯಲ್ಲಿ ನಡೆದ ಡೈಮಂಡ್ ಲೀಗ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. 24 ವರ್ಷದ ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲಿ 89.08 ಮೀಟರ್‌ಗಳಷ್ಟು ಜಾವೆಲಿನ್ ಎಸೆದರು. ಇದು ಅವರ ವೃತ್ತಿ ಜೀವನದಲ್ಲಿ ಮೂರನೇ ಅತ್ಯುತ್ತಮ ಎಸೆತವಾಗಿದೆ. ಈ ಮೂಲಕ ಡೈಮಂಡ್ ಲೀಗ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಚೋಪ್ರಾ ಮೊದಲು, ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ ಡೈಮಂಡ್ ಲೀಗ್‌ನ ಮೊದಲ ಮೂರರಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ಅಥ್ಲೀಟ್ ಆಗಿದ್ದರು.
Tokyo Olympics gold medallist Neeraj Chopra becomes the first Indian to clinch the Lausanne Diamond League with a best throw of 89.08m.
(File photo) pic.twitter.com/tNX3HA1Zvk
— ANI (@ANI) August 27, 2022
ಇದನ್ನೂ ಓದಿ: Asia Cup 2022: ದಿನಕ್ಕೆ 150 ಸಿಕ್ಸರ್, ಟೀಂ ಇಂಡಿಯಾಗೆ ಎಚ್ಚರಿಕೆ ನೀಡಿದ ಪಾಕ್ ಆಟಗಾರ!
ಡೈಮಂಡ್ ಲೀಗ್ ಫೈನಲ್ಗೆ ಆಯ್ಕೆ:
ಇದಕ್ಕೂ ಮುನ್ನ ಇದೇ ಋತುವಿನಲ್ಲಿ ಅವರು ಜಾವೆಲಿನ್ ಅನ್ನು 89.30 ಮೀಟರ್ ಮತ್ತು 89.98 ಮೀಟರ್ ದೂರಕ್ಕೆ ಎಸೆದು ವೃತ್ತಿಜೀವನದ ಅತ್ಯುತ್ತಮ ದಾಖಲೆ ಮಾಡಿದ್ದರು. ಮತ್ತು ನೀರಜ್ ಚೋಪ್ರಾ ಮುಂದಿನ ತಿಂಗಳು 7 ಮತ್ತು 8 ರಂದು ಸ್ವಿಟ್ಜರ್ಲೆಂಡ್‌ನಲ್ಲಿ ಡೈಮಂಡ್ ಲೀಗ್ ಫೈನಲ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದನ್ನೂ ಓದಿ: Asia Cup 2022: ಕ್ರಿಕೆಟ್ ಪ್ರಿಯರಿಗೆ ಈ ಸಂಡೇ ಸೂಪರ್ ಧಮಾಕಾ! ಭಾರತ-ಪಾಕ್ ಹಣಾಹಣಿಯ ಪಿನ್ ಟು ಪಿನ್ ಡೀಟೇಲ್ಸ್ ಇಲ್ಲಿದೆ
ಪ್ರಶಸ್ತಿ ಗೆದ್ದ ನಂತರ ಮಾತನಾಡಿದ ನೀರಜ್ ಚೋಪ್ರಾ, ‘ಈ ಫಲಿತಾಂಶದಿಂದ ಖುಷಿಯಾಗಿದೆ. ಗಾಯದಿಂದಾಗಿ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿಯಬೇಕಾಯಿತು. ಇದು ನನ್ನನ್ನು ಸ್ವಲ್ಪ ಆತಂಕಕ್ಕೀಡು ಮಾಡಿತ್ತು. ಇದೀಗ ನಾನು ವಾಪಸ್ ಆಗಿದ್ದೇನೆ. ಗಾಯದಿಂದ ಚೇತರಿಸಿಕೊಂಡು 89 ಮೀಟರ್ ದೂರ ಜಾವೆಲಿನ್ ಎಸೆದಿರುವುದು ಸಂತಸ ತಂದಿದೆ‘ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ