‘ನಾವು ಇಂದಿನ ಪಂದ್ಯ ಗೆದ್ದಿದ್ದರೆ ಉತ್ತಮವಾಗಿರುತ್ತಿತ್ತು’: ವಿರಾಟ್ ಕೊಹ್ಲಿ

news18
Updated:August 4, 2018, 6:45 PM IST
‘ನಾವು ಇಂದಿನ ಪಂದ್ಯ ಗೆದ್ದಿದ್ದರೆ ಉತ್ತಮವಾಗಿರುತ್ತಿತ್ತು’: ವಿರಾಟ್ ಕೊಹ್ಲಿ
news18
Updated: August 4, 2018, 6:45 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್ ವಿರುದ್ಧದ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸೋಲು ಕಂಡಿದ್ದು, ಆಂಗ್ಲರು ಸಾವಿರನೇ ಟೆಸ್ಟ್​​ನಲ್ಲಿ ಗೆದ್ದು ಬೀಗಿದ್ದಾರೆ. ಈ ಮಧ್ಯೆ ಪಂದ್ಯ ಮುಗಿದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಆಡುವ 11ರಲ್ಲಿ ತಂಡದ ಆಯ್ಕೆಯನ್ನು ಇನ್ನೂ ಉತ್ತಮ ಗೊಳಿಸಬಹುದಿತ್ತು ಎಂದಿದ್ದಾರೆ. ಬ್ಯಾಟಿಂಗ್​​ ವಿಭಾಗದಲ್ಲಿ ನಮ್ಮ ಪ್ರಯತ್ನ ವಿಫಲವಾಯಿತು. ಇಂಗ್ಲೆಂಡ್ ಬೌಲರ್​ಗಳು ಅದ್ಭುತ ಪ್ರದರ್ಶನ ತೋರಿದರು. ಈ ಪಂದ್ಯದಲ್ಲಿ ಮಾಡಿದ ತಪ್ಪನ್ನು ತಿದ್ದುಕೊಂಡು ಮುಂದಿನ ಪಂದ್ಯಕ್ಕೆ ಸಜ್ಜಾಗುತ್ತೇವೆ. ಮೊದಲ ಇನ್ನಿಂಗ್ಸ್​​ನ ಆರಂಭದಲ್ಲೇ ನಾವು ಎಡವಿದ್ದೆವು ಬ್ಯಾಟಿಂಗ್​ನಲ್ಲಿ ಸಂಫೂರ್ಣ ವೈಫಲ್ಯ ಅನುಭವಿಸಿದ್ದೆವು ಎಂದು ಹೇಳಿದರು.

ಇನ್ನು ತಮ್ಮ ಆಟದ ಬಗ್ಗೆ ಮಾತನಾಡಿದ ಕೊಹ್ಲಿ, ಮೊದಲ ಇನ್ನಿಂಗ್ಸ್​ನಲಲಿ ನನ್ನ ಆಟ ತಂಡಕ್ಕೆ ಕೊಂಚ ಬಲ ನೀಡಿತು. ಆದರೆ ಎರಡನೇ ಇನ್ನಿಂಗ್ಸ್​ನಲ್ಲಿ ಇಂಗ್ಲೆಂಡ್ ಬೌಲರ್​ಗಳ ಪ್ರದರ್ಶನ ನಿಜಕ್ಕೂ ಉತ್ತಮವಾಗಿತ್ತು. ನಾವು ಈ ಪಂದ್ಯ ಗೆದ್ದಿದ್ದರೆ ಉತ್ತಮವಾಗಿರುತ್ತಿತ್ತು. ಆದರೆ ಮುಂದಿನ ಟೆಸ್ಟ್​ ಪಂದ್ಯದಲ್ಲಿ ಯಾವರೀತಿ ಆಡಬೇಕೆಂದು ಯೋಚಿಸಿ ಕಣಕ್ಕಿಳಿಯುತ್ತೇವೆ ಎಂದಿದ್ದಾರೆ. ಟೆಸ್ಟ್​ ಪಂದ್ಯ ನನ್ನ ನೆಚ್ಚಿನ ಆಟ. 5 ದಿನಗಳಲ್ಲಿ ನಿಮ್ಮನ್ನ ನೀವು ಪರೀಕ್ಷಿಸಲು ಇದೊಂದು ಉತ್ತಮ ಅವಕಾಶ ಎಂದು ಹೇಳದರು.

ಇನ್ನು ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಮಾತನಾಡಿದ್ದು, ನಮ್ಮ ತಂಡದ ಬೌಲರ್​ಗಳು ಅದ್ಭುತ ಪ್ರದರ್ಶನ ನೀಡಿದರು. ಈ ಪಂದ್ಯ ಗೆಲ್ಲಲು ಬೌಲರ್​​ಗಳೇ ಪ್ರಮುಖ ಕಾರಣ. ಈ ಪಿಚ್​​ನಲ್ಲಿ 20 ವಿಕೆಟ್ ಪಡೆಯುವುದು ಸುಲಭದ ಮಾತಲ್ಲ. ಸ್ಯಾಮ್ ಕುರ್ರನ್ ಆಲ್ರೌಂಡರ್ ಪದರ್ಶನ ತಂಡಕ್ಕೆ ನೆರವಾಯಿತು. ಈ ನಾಲ್ಕು ದಿನಗಳ ಕ್ರಿಕೆಟ್​​ನಿಂದ ಎರಡೂ ತಂಡಕ್ಕೆ ಮುಂದಿನ ಟೆಸ್ಟ್​ ಬಗ್ಗೆ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಹೇಳಿದ್ದಾರೆ.
First published:August 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ