ಚಂಡೀಗಢ: ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿ (PPCC) ಮಾಜಿ ಅಧ್ಯಕ್ಷ ಮತ್ತು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು (Navjot Singh Sidhu) ಅವರು ಪಟಿಯಾಲ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಹೀಗಾಗಿ ಅವರು 6 ತಿಂಗಳಲ್ಲಿ ಕಟ್ಟುನಿಟ್ಟಾದ ಆಹಾರ ಮತ್ತು ಎರಡು ಗಂಟೆಗಳ ಯೋಗ, ವ್ಯಾಯಾಮದಿಂದಾಗಿ 34 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ. 1980 ಮತ್ತು 1990ರ ದಶಕದ ಲೆಜೆಂಡರಿ ಕ್ರಿಕೆಟಿಗರಾಗಿದ್ದ 6 ಅಡಿ 2 ಇಂಚು ಎತ್ತರದ ಸಿಧು ಅವರ ತೂಕ ಈಗ 99KG ಆಗಿದೆಯಂತೆ. 1988ರ ರಸ್ತೆ ರೇಜ್ ಪ್ರಕರಣದಲ್ಲಿ ಸಿಧು ಒಂದು ವರ್ಷ ಶಿಕ್ಷೆ ಅನುಭವಿಸುತ್ತಿದ್ದಾರೆ. ಸಿಧು ಅವರ ಸಹೋದ್ಯೋಗಿ ಹಾಗೂ ಮಾಜಿ ಶಾಸಕ ನವತೇಜ್ ಸಿಂಗ್ ಚೀಮಾ ಅವರ ಪ್ರಕಾರ, ಸಿದ್ದು ಕನಿಷ್ಠ ನಾಲ್ಕು ಗಂಟೆಗಳ ಕಾಲ ಧ್ಯಾನ ಮಾಡುತ್ತಾರೆ, ಎರಡು ಗಂಟೆಗಳ ಕಾಲ ಯೋಗ ಮತ್ತು ವ್ಯಾಯಾಮ ಮಾಡುತ್ತಾರೆ. ಜೊತೆಗೆ ಎರಡರಿಂದ ನಾಲ್ಕು ಗಂಟೆಗಳ ಕಾಲ ಓದುತ್ತಾರೆ ಮತ್ತು ನಾಲ್ಕು ಗಂಟೆಗಳ ಕಾಲ ಮಾತ್ರ ಮಲಗುತ್ತಾರಂತೆ.
ಸಿಧು ಅವರನ್ನು ನೋಡಿದರೆ ಆಶ್ಚರ್ಯಚಕಿತರಾಗುತ್ತೀರಿ:
ಇಂಡಿಯನ್ ಎಕ್ಸ್ಪ್ರೆಸ್ನ ಸುದ್ದಿ ಪ್ರಕಾರ, ಚೀಮಾ ಶುಕ್ರವಾರ ನವಜೋತ್ ಸಿಂಗ್ ಸಿಧು ಅವರನ್ನು ಪಟಿಯಾಲಾ ಜೈಲಿನಲ್ಲಿ 45 ನಿಮಿಷಗಳ ಕಾಲ ಭೇಟಿಯಾದರು. ಸಿದ್ದು ಶಿಕ್ಷೆ ಮುಗಿಸಿ ಹೊರಬರುವಾಗ, ನೀವು ಅವರನ್ನು ನೋಡಿ ಆಶ್ಚರ್ಯಚಕಿತರಾಗುತ್ತೀರಿ ಎಂದು ಅವರು ಹೇಳಿದರು. ಅವರು ಕ್ರಿಕೆಟಿಗರಾಗಿದ್ದ ವೇಳೆ ಯಾವ ರೀತಿ ಫಿಟ್ ಆಗಿ ಕಾಣುತ್ತಾರೆ. ಅವರು 34 ಕಿಲೋಗಳನ್ನು ಕಳೆದುಕೊಂಡಿದ್ದಾರೆ ಮತ್ತು ಇನ್ನಷ್ಟು ತೂಕ ಇಳಿಸುವ ಸಾಧ್ಯತೆ ಇದೆ. ಸದ್ಯ ಅವರ ತೂಕ 99 ಕೆ.ಜಿ ಆಗಿದ್ದು, ಅವರು 6 ಅಡಿ 2 ಇಂಚು ಎತ್ತರ, ಆದ್ದರಿಂದ ಅವರು ತಮ್ಮ ಪ್ರಸ್ತುತ ತೂಕದಲ್ಲಿ ತುಂಬಾ ಸುಂದರವಾಗಿ ಕಾಣುತ್ತಾರಂತೆ. ಅವರು ಧ್ಯಾನದಲ್ಲಿ ಹೆಚ್ಚು ಸಮಯವನ್ನು ಕಳೆಯುವುದರಿಂದ ಅವರು ಶಾಂತವಾಗಿ ಕಾಣುತ್ತಿದ್ದಾರಂತೆ.
ಗುಮಾಸ್ತರಾಗಿ ಕೆಲಸ ಮಾಡುತ್ತಿರುವ ಸಿಧು:
ಮಾಜಿ ಶಾಸಕ ಚೀಮಾ ಅವರು ಸಿಧು ಕುರಿತು ಮಾತನಾಡಿದ್ದು, ‘ನಿಜವಾಗಿಯೂ ಸಿಧು ಅವರು ಚೆನ್ನಾಗಿದ್ದಾರೆ’ ಎಂದು ಹೇಳಿದ್ದಾರೆ. ಈ ಹಿಂದೆ ಅನಾರೋಗ್ಯಕ್ಕೆ ಒಳಗಾಗಿದ್ದ ಅವರ ಲಿವರ್ ಈಗ ತುಂಬಾ ಸುಧಾರಿಸಿದೆ ಎಂದು ಸಿಧು ಹೇಳಿದ್ದಾರೆ. ಸಿಧು ಆಲ್ಕೋಹಾಲ್ ರಹಿತ ಫ್ಯಾಟಿ ಲಿವರ್ ಮತ್ತು ಎಂಬಾಲಿಸಮ್ ನಿಂದ ಬಳಲುತ್ತಿದ್ದಾರೆ. ತೆಂಗಿನ ನೀರು, ಕ್ಯಾಮೊಮೈಲ್ ಚಹಾ, ಬಾದಾಮಿ ಹಾಲು ಮತ್ತು ರೋಸ್ಮರಿ ಚಹಾ ಸೇರಿದಂತೆ ವಿಶೇಷ ಆಹಾರವನ್ನು ವೈದ್ಯರು ಅವರಿಗೆ ಸಲಹೆ ನೀಡಿದ್ದರು. ಅವರು ಸಕ್ಕರೆ ಮತ್ತು ಗೋಧಿಯಿಂದ ದೂರವಿದ್ದಾರೆ. ಅಲ್ಲದೇ ದಿನಕ್ಕೆ ಎರಡು ಬಾರಿ ಮಾತ್ರ ಆಹಾರ ಸೇವಿಸುತ್ತಿದ್ದಾರೆ. ಸಂಜೆ 6 ಗಂಟೆಯ ನಂತರ ಅವರು ಏನನ್ನೂ ತಿನ್ನುವುದಿಲ್ಲ. ಇದರೊಂದಿಗೆ ಸಿಧು ಅವರು 'ದಿನಕ್ಕೆ ಕೆಲವು ಗಂಟೆಗಳ ಕಾಲ ಗುಮಾಸ್ತರಾಗಿ ತಮ್ಮ ಕೆಲಸವನ್ನು ಮಾಡುತ್ತಾರಂತೆ.
ಇದನ್ನೂ ಓದಿ: Virat Kohli: ಮುಂಬೈನ ಬೀದಿಗಳಲ್ಲಿ ಕೊಹ್ಲಿ ಏನೆಲ್ಲಾ ಮಾರಾಟ ಮಾಡ್ತಿದ್ದಾರೆ ನೋಡಿ! ಇಲ್ಲಿದೆ ವೈರಲ್ ಫೋಟೋ
ಜೈಲು ಕೈಪಿಡಿಯ ಪ್ರಕಾರ, ಕೈದಿಗಳನ್ನು ಕೌಶಲ್ಯರಹಿತ, ಅರೆ ಕೌಶಲ್ಯ ಮತ್ತು ಕೌಶಲ್ಯ ಎಂದು ವಿಂಗಡಿಸಲಾಗಿದೆ. ಕೌಶಲ್ಯರಹಿತ ಮತ್ತು ಅರೆ ಕುಶಲ ಕೈದಿಗಳಿಗೆ ದಿನಕ್ಕೆ 40 ಮತ್ತು 50 ರೂ. ನುರಿತ ಕೈದಿಗಳಿಗೆ ದಿನಕ್ಕೆ 60 ರೂ. ನೀಡಲಾಗುತ್ತದೆ. ಸೆಪ್ಟೆಂಬರ್ ವರೆಗೆ, ಸಿಧು ಅವರೊಂದಿಗೆ ಪಂಜಾಬಿ ಗಾಯಕ ದಲೇರ್ ಮೆಹಂದಿ ಇದ್ದರು, ಅವರನ್ನು ಬ್ಯಾರಕ್ ಸಂಖ್ಯೆ 10 ರಲ್ಲಿ ಇರಿಸಲಾಗಿತ್ತು. ನಂತರ ಅವರನ್ನು ಬಿಡುಗಡೆ ಮಾಡಲಾಯಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ