ಮೆಕಲಮ್ ಸಾವಿನ ಸುದ್ದಿಗೆ ಟ್ವಿಸ್ಟ್​​: ನಾನು ಜೀವಂತವಾಗಿದ್ದೇನೆ ಎಂದ ನ್ಯೂಜಿಲೆಂಡ್ ಕ್ರಿಕೆಟರ್

ನ್ಯೂಜಿಲೆಂಡ್ ಕ್ರಿಕೆಟರ್ ನಾಥನ್ ಮೆಕಲಮ್ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ಸದ್ಯ ಈ ಬಗ್ಗೆ ಸ್ವತಃ ನಾಥನ್ ಮೆಕಲಮ್ ಅವರೆ ಟ್ವೀಟ್ ಮಾಡಿ ಜೀವಂತವಾಗಿದ್ದೇನೆ ಎಂದಿದ್ಧಾರೆ.

Vinay Bhat | news18
Updated:December 2, 2018, 11:35 AM IST
ಮೆಕಲಮ್ ಸಾವಿನ ಸುದ್ದಿಗೆ ಟ್ವಿಸ್ಟ್​​: ನಾನು ಜೀವಂತವಾಗಿದ್ದೇನೆ ಎಂದ ನ್ಯೂಜಿಲೆಂಡ್ ಕ್ರಿಕೆಟರ್
ಸಹೋದರ ಬ್ರೆಂಡನ್ ಮೆಕಲಮ್ ಜೊತೆ ನಾಥನ್ ಮೆಕಲಮ್
  • News18
  • Last Updated: December 2, 2018, 11:35 AM IST
  • Share this:
ನ್ಯೂಜಿಲೆಂಡ್: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ ನಾಥನ್ ಮೆಕಲಮ್ ಅವರು ಮೃತಪಟ್ಟಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಸುದ್ದಿ ಹೊರಬಿದ್ದಿದೆ.

ಇದನ್ನೂ ಓದಿಡಿಸೆಂಬರ್​ನಲ್ಲಿ ಹಸೆಮಣೆ ಏರಲಿದ್ದಾರೆ ಈ ಕ್ರೀಡಾ ಜೋಡಿ

ನ್ಯೂಜಿಲೆಂಡ್ ಕ್ರಿಕೆಟರ್ ನಾಥನ್ ಮೆಕಲಮ್ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಆದರೆ, ಸದ್ಯ ಈ ಬಗ್ಗೆ ಸ್ವತಃ ನಾಥನ್ ಮೆಕಲಮ್ ಅವರೆ ಟ್ವೀಟ್ ಮಾಡಿ ನಾನಿನ್ನು ಜೀವಂತವಾಗುದ್ದೇನು ಎಂದು ತಿಳಿಸಿದ್ದಾರೆ. ಜೊತೆಗೆ ಮತ್ತಷ್ಟು ಬಲಿಷ್ಠನಾಗಿದ್ದೇನೆ ಎಂದು ಬರೆದು ಸಹೋದರ ಬ್ರೆಂಡನ್ ಮೆಕಲಮ್ ಜೊತೆಗಿರುವ ಫೋಟೋ ಹಾಕಿ ಟ್ವಟ್ಟರ್​​ನಲ್ಲಿ ಪೋಸ್ಟ್​ ಮಾಡಿದ್ದಾರೆ.

 


ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ನಾಥನ್ ಸಹೋದರ ಬ್ರೆಂಡನ್ ಮೆಕಲಮ್ ಅವರು ಟ್ವೀಟ್ ಮಾಡಿದ್ದು, ನನ್ನ ಸಹೋದರ ಮೃತ ಪಟ್ಟಿದ್ದಾರೆಂದು ಯಾರೊ ಕಿಡಿಗೇಡಿಗಳು ಸಾಮಾಜಿಕ ತಾಣಗಳಲ್ಲಿ ಸುಳ್ಳು ಸುದ್ದಿ ಹರಡಿಸಿದ್ದಾರೆ. ಈ ಪೋಸ್ಟ್​ ಹಾಕಿದವರನ್ನು ಹುಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

 ನಾಥನ್ ಅವರು ನ್ಯೂಜಿಲೆಂಡ್ ಪರ 2007 ರಿಂದ 2016ರ ವರೆಗೆ 84 ಏಕದಿನ ಪಂದ್ಯಗಳನ್ನು ಆಡಿದ್ದು, 63 ಟಿ-20 ಪಂದ್ಯ ಆಡಿದ್ದಾರೆ.

First published:December 2, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading