ಕೆಪಿಎಲ್ 2018: ಬೆಳಗಾವಿ ವಿರುದ್ಧ ಮೈಸೂರು ಪ್ಯಾಂಥರ್ಸ್​ಗೆ 1 ರನ್​ಗಳ ರೋಚಕ ಜಯ

news18
Updated:August 31, 2018, 10:55 PM IST
ಕೆಪಿಎಲ್ 2018: ಬೆಳಗಾವಿ ವಿರುದ್ಧ ಮೈಸೂರು ಪ್ಯಾಂಥರ್ಸ್​ಗೆ 1 ರನ್​ಗಳ ರೋಚಕ ಜಯ
news18
Updated: August 31, 2018, 10:55 PM IST
ನ್ಯೂಸ್ 18 ಕನ್ನಡ

ಕೆಪಿಎಲ್​ನಲ್ಲಿ ಇಂದು ನಡೆದ ಪಂದ್ಯದಲ್ಲಿ ಬೆಳಗಾವಿ ಪ್ಯಾಂಥರ್ಸ್​ ವಿರುದ್ಧ ಮೈಸೂರು 1 ರನ್​ಗಳ ರೋಚಕ ಜಯ ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಮೈಸೂರು ಆರಂಭಿಕರ ಉತ್ತಮ ಪ್ರದರ್ಶನ, ಶೊಯಬ್ ಅವರ 56 ರನ್ ಹಾಗೂ ಅಮಿತ್ ವರ್ಮಾ ಅವರ ಅಜೇಯ 43 ರನ್​ಗಳ ನೆರವಿನಿಂದ 20 ಓವರ್​​ನಲ್ಲಿ 4 ವಿಕೆಟ್ ಕಳೆದುಕೊಂಡು 201 ರನ್ ಬಾರಿಸಿತು. 202 ರನ್​ಗಳ ಗುರಿ ಬೆನ್ನಟ್ಟಿದ ಬೆಳಗಾವಿ 20 ಓವರ್​​ನಲ್ಲಿ 8 ವಿಕೆಟ್ ಕಲೆದುಕೊಂಡು 200 ರನ್ ಗಳಿಸಲಷ್ಟೇ ಶಕತ್ವಾಯಿತು. ದಿಕ್ಷನ್ಶು ನೇಗಿ ಭರ್ಜರಿ 60 ರನ್ ಹಾಗೂ ನಿಧೀಶ್ ಅಜೇಯ 44 ರನ್ ಬಾರಿಸಿದರಾದರು ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲವಾಗಿ ಕೇವಲ 1 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಇಂದು ನಡೆದ ಮತ್ತೊಂದು ಪಂದ್ಯದಲ್ಲಿ ಹುಬ್ಳಿ ಟೈಗರ್ಸ್​ ವಿರುದ್ಧದ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್​ ತಂಡ 5 ವಿಕೆಟ್​ಗಳ ಜಯ ಕಂಡಿದೆ. ಮಳೆ ಬಂದ ಕಾರಣ ಉಭಯ ತಂಡಗಳಿಗೆ 2 ಓವರ್​ ಕಡಿತಗೊಳಿಸಿ 18 ಓವರ್​ಗೆ ಇಳಿಸಲಾಯಿತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಹುಬ್ಳಿ ನಿಗದಿತ 20 ಓವರ್​​ನಲ್ಲಿ 9 ವಿಕೆಟ್ ನಷ್ಟಕ್ಕೆ 117 ರನ್ ಬಾರಿಸಿತು. ಹುಬ್ಳಿ ಪರ ಪ್ರವೀಟ್ 48 ರನ್ ಹಾಗೂ ನಾಯಕ ವಿನಯ್ ಕುಮಾರ್ 20 ರನ್ ಬಾರಿಸಿದ್ದು ತಂಡದಲ್ಲಿನ ಆಟಗಾರರ ಗರಿಷ್ಠ ಸ್ಕೋರ್ ಆಗಿತ್ತಷ್ಟೆ. 118 ರನ್​ಗಳ ಗುರಿ ಬೆನ್ನಟ್ಟಿದ ಬೆಂಗಳೂರು ಉತ್ತಮ ಆರಂಭ ಸಿಕ್ಕಿಲ್ಲವಾದರು ನಾಯಕ ಉತ್ತಪ್ಪ ಬಾರಿಸಿದ 31 ರನ್ ಹಾಗೂ ಕೊನೆಯಲ್ಲಿ ಪವನ್ ಬಾರಿಸಿದ 28 ರನ್​ಗಳ ನೆರವಿನಬಿಂದ 17.4 ಓವರ್​​ನಲ್ಲಿ 4 ವಿಕೆಟ್ ಕಳೆದುಕೊಂಡು 119 ರನ್ ಬಾರಿಸುವ ಮೂಲಕ ಗೆಲುವಿನ ನಗೆ ಬೀರಿತು.
First published:August 31, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...