ಕೆಪಿಎಲ್ 2018: ಲಯನ್ಸ್​ಗಳನ್ನು ಕಾಡಿದ ವಾರಿಯರ್ಸ್​; 6 ವಿಕೆಟ್​ಗಳ ಭರ್ಜರಿ ಜಯ

news18
Updated:August 28, 2018, 10:09 PM IST
ಕೆಪಿಎಲ್ 2018: ಲಯನ್ಸ್​ಗಳನ್ನು ಕಾಡಿದ ವಾರಿಯರ್ಸ್​; 6 ವಿಕೆಟ್​ಗಳ ಭರ್ಜರಿ ಜಯ
news18
Updated: August 28, 2018, 10:09 PM IST
ನ್ಯೂಸ್ 18 ಕನ್ನಡ

ಮೈಸೂರು (ಆ. 28): ಇಲ್ಲಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಇಂದಿನ ಕೆಪಿಎಲ್ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್ ವಿರುದ್ಧ ಮೈಸೂರು ವಾರಿಯರ್ಸ್​ ತಂಡ 6 ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಲಯನ್ಸ್​ ತಂಡಕ್ಕೆ ಶರತ್(46), ಆದಿತ್ಯ(39)*, ಜೊನಾಥನ್(29) ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್​ಮನ್​ಗಳ ಸ್ಕೋರ್ ಎರಡಂಕಿ ಗಡಿ ದಾಟಲಿಲ್ಲ. ಪರಿಣಾಮ 20 ಓವರ್​ಗೆ 146 ರನ್​​​ಗಳಿಸಲಷ್ಟೇ ಶಕ್ತವಾಯಿತು. ಮೈಸೂರು ಪರ ವಿಜಯ್ ಕುಮಾರ್ ಹಾಗೂ ಕುಶಾಲ್ ತಲಾ 2 ವಿಕೆಟ್ ಪಡೆದು ಮಿಂಚಿದರು. 147 ರನ್​​ಗಳ ಗುರಿ ಬೆನ್ನಟ್ಟಿದ ಮೈಸೂರು ಲಯನ್ಸ್ ತಂಡ ಭರ್ಜರಿ ಆರಂಭ ಪಡೆದುಕೊಂಡಿತು. ಲಯನ್ಸ್​​ಗಳನ್ನು ಮೈದಾನದ ಮೂಲೆ ಮೂಲೆಗೆ ಅಟ್ಟಿದ ಅರ್ಜುನ್ ಹಾಗೂ ರಾಜು ಮೊದಲನೇ ವಿಕೆಟ್​ಗೆ 99 ರನ್​ಗಳ ಜೊತೆಯಾಟ ನೀಡಿದರು. 40 ರನ್​ ಬಾರಿಸಿ ಅರ್ಜುನ್ ಔಟ್ ಆದರೆ, ಅರ್ಧಶತಕ ಬಾರಿಸಿ ರಾಜು(59) ಔಟ್ ಆದರು. ಬಳಿಕ ಶೋಯಬ್(25)* ಭರ್ಜರಿ ಬ್ಯಾಟಿಂಗ್ ನಡೆಸಿ 17.2 ಓವರ್​​ನಲ್ಲೇ ತಂಡವನ್ನು ಗೆಲುವಿನ ದಡ ಸೇರಿಸಿದರು. ಈ ಮೂಲಕ ಲಯನ್ಸ್ ವಿರುದ್ಧ ವಾರಿಯರ್ಸ್​ ತಂಡ 6 ವಿಕೆಟ್​ಗಳ ಜಯ ಕಂಡಿದೆ.

ಪಂದ್ಯ ಶ್ರೇಷ್ಠ: ರಾಜು ಭಟ್ಕಳ್

ಸಂಕ್ಷಿಪ್ತ ಸ್ಕೋರ್:

ಶಿವಮೊಗ್ಗ ಲಯನ್ಸ್​: 146/10(20 ಓವರ್​)

(ಶರತ್ ಬಿಆರ್​ 46, ಆದಿತ್ಯ 39*, ಕುಶಾಲ್ 15/2)

ಮೈ ಸೂರು ವಾರಿಯರ್ಸ್​: 147/4(17.2 ಓವರ್​)

(ರಾಜು ಭಟ್ಕಳ್ 59, ಅರ್ಜುನ್ 40, ಅನಿರುದ್ಧ್ 8/1)
First published:August 28, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ