ತಾನೂ ತಿನ್ನಲ್ಲ, ಗಂಡನಿಗೂ ತಿನ್ನೋಕೆ ಬಿಡಲ್ಲ ಈ ಟಾಪ್ ಮಾಜಿ ಕ್ರಿಕೆಟರ್ ಪತ್ನಿ..!

ಹುಬ್ಬಳ್ಳಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕಪಿಲ್ ದೇವ್, ತಮ್ಮ ಮಾತಿನ ವೈಖರಿ ಮೂಲಕ ನವೋದ್ಯಮಿಗಳನ್ನು ಉತ್ತೇಜಿಸಿದರು. ತಮ್ಮ ಬದುಕಿನ ಅನುಭವಗಳನ್ನು ಬಿಚ್ಚಿಟ್ಟು, ಎಲ್ಲರನ್ನೂ ಪ್ರೇರೋಪಿಸಿದರು.

ಕಪಿಲ್ ದೇವ್

ಕಪಿಲ್ ದೇವ್

  • Share this:
ಹುಬ್ಬಳ್ಳಿ(ಮಾ.27): ಈ ವಯಸ್ಸಿನಲ್ಲಿಯೂ ನಾನು ಫಿಟ್ ಆಗಿರೋಕ್ಕೆ ನನ್ನ ಹೆಂಡತಿಯೇ ಕಾರಣ. ಹೆಂಡತಿ ತಾನೂ ತಿನ್ನೋಲ್ಲ. ನನಗೂ ತಿನ್ನೋಕೆ ಬಿಡಲ್ಲ. ಹೀಗಿರಬೇಕಾದ್ರೆ ನಾನು ಫಿಟ್ ಆಗಿಯೇ ಇರಬೇಕಲ್ವಾ ಎಂದು ಪ್ರಶ್ನಿಸಿದವರು ಖ್ಯಾತ ಮಾಜಿ ಕ್ರಿಕೆಟ್ ಪಟು ಕಪಿಲ್ ದೇವ್ (Kapil Dev). ಹುಬ್ಬಳ್ಳಿಯ (Hubballi) ಖಾಸಗಿ ಹೋಟೆಲ್ ನಲ್ಲಿ ಆಯೋಜಿಸಿದ್ದ ಟಾಯ್ ಕಾನ್ ಹುಬ್ಬಳ್ಳಿ ಕಾರ್ಯಕ್ರಮದಲ್ಲಿ ಭಾಗಿಯಾದ ವೇಳೆ ಉದ್ಯಮಿಗಳನ್ನು (Businessmen) ಉದ್ದೇಶಿಸಿ ಮಾತನಾಡಿದ ಅವರು, ನೆರೆದವರನ್ನು ನಗೆಗಡಲಲ್ಲಿ ತೇಲಿಸುತ್ತಲೇ ಬದುಕಿನಲ್ಲಿ ಸಕ್ಸಸ್ ಆಗೋದು ಹೇಗೆಂಬುದನ್ನು ತಿಳಿಸಿಕೊಟ್ಟರು.

ಭಾರತಕ್ಕೆ ಪ್ರಥಮ ವಿಶ್ವಕಪ್ ತಂದುಕೊಡುವಲ್ಲಿ ಯಶಸ್ವಿಯಾಗಿದ್ದ ಕಪಿಲ್ ದೇವ್ ಅವರು ಹುಬ್ಬಳ್ಳಿಗೆ ಆಗಮಿಸಿ ತಮ್ಮ ಮಾತಿನ ವೈಖರಿ ಮೂಲಕ ಎಲ್ಲರ ಗಮನ ಸೆಳೆದರು.

ನವೋದ್ಯಮಿಗಳಿಗೆ ಪ್ರಶಸ್ತಿ ವಿತರಣೆಯ ನಂತರ ಮಾತನಾಡಿದ ಅವರು, ತಮ್ಮ ಬದುಕಿನಲ್ಲಿ ನಡೆದ ವಿವಿಧ ಘಟನೆಗಳನ್ನು ವಿವರಿಸಿದರು. ಈ ವಯಸ್ಸಿನಲ್ಲಿಯೂ ಫಿಟ್ ಆಗಿರೋದ್ರ ಪ್ರಶ್ನೆಗೆ ಉತ್ತರಿಸಿದ ಕಪಿಲ್ ದೇವ್, ಫಿಟ್ಟೂ ಇಲ್ಲ, ಸ್ಮಾರ್ಟೂ ಇಲ್ಲ. ಇದೆಲ್ಲವೂ ಹೆಂಡತಿಯ ಕೃಪೆ ಎಂದು ನಗೆ ಚಟಾಕಿ ಹಾರಿಸಿದರು.

ಬ್ಯಾಡಗಿ ಮೆಣಸಿನಕಾಯಿಗೆ ಕಪಿಲ್ ಫಿದಾ

ಈ ಕಡೆ ಬಂದಾಗ ನಾನು ಮೆಣಸಿನಕಾಯಿ ತಗೊಂಡು ಹೋಗೋದನ್ನ ಮರಿಯೋಲ್ಲ. ಒಂದು ಕೆ.ಜಿ. ಮೆಣಸಿನಕಾಯಿಯನ್ನು ತಗೊಂಡೇ ಹೋಗ್ತೇನೆ. ಹೀಗೆಂದು ಹೇಳಿದವರು ಖ್ಯಾತ ಕ್ರಿಕೆಟ್ ಪಟು ಕಪಿಲ್ ದೇವ್. ಬ್ಯಾಡಗಿ ಮೆಣಸಿನಕಾಯಿಗೆ ಫಿದಾ ಆಗಿರೋದಾಗಿ ತಿಳಿಸಿದರು.

ನನ್ನ ಹೆಂಡತಿಗಾಗಿ ಒಂದು ಕೆ.ಜಿ. ಮೆಣಸಿನಕಾಯಿ ತಗೊಂಡು ಹೋಗ್ತೇನೆ. ಮೆಣಸಿನಕಾಯಿ ಯಾವುದೇ ಇರ್ಲಿ, ಅದು ತಿಂದ ಮೇಲೆ ಅಥವಾ ಮರು ದಿನ ಬೆಳಿಗ್ಗೆ ಗೊತ್ತಾಗುತ್ತೆ ಎಂದು ಮೆಣಸಿನಕಾಯಿ ಬಗ್ಗೆ ಕಪಿಲ್ ದೇವ್ ಹಾಸ್ಯ ಚಟಾಕಿ ಹಾರಿಸಿದರು. ನಾನು ಬಂದಾಗಲೆಲ್ಲಾ ಒಳ್ಳೆಯ ಊಟ ಕೊಡಿ ಅಷ್ಟೇ ಸಾಕು ಎಂದಿದ್ದಾರೆ.

ಪಂಕ್ಷರ್ ಹಾಕೋನಿಗೆ ನಾನ್ಯಾರು ಅಂತಾನೆ ಗೊತ್ತಿರಲಿಲ್ಲ

14 ವರ್ಷದವನಿದ್ದಾಗ ಸೈಕಲ್ ಪಂಕ್ಷರ್ ಹಾಕಿಸಿಕೊಳ್ಳೋಕೆ ಸಹೋದರಿ ಜೊತೆ ಹೋಗಿದ್ದೆ. ಮೇಡಂ ನೀವು ಹೋಗಿ, ಈ ಕೆಲಸದ ಆಳು ಇರಲಿ, ಅವ್ನ ಜೊತೆ ಸೈಕಲ್ ಕಳಿಸ್ತೇನೆ ಅಂತ ಪಂಕ್ಷರ್ ಹಾಕುವಾತ ಹೇಳಿದ್ದ. ಪಂಕ್ಷರ್ ಹಾಕೋ ವ್ಯಕ್ತಿಗೆ ನಾನು ಕ್ರಿಕೆಟರ್ ಅಂತಾನೆ ಗೊತ್ತಿರಲಿಲ್ಲ.

ಇದನ್ನೂ ಓದಿ: Kapil XI: ಕಪಿಲ್ ದೇವ್ ಅವರ ಸಾರ್ವಕಾಲಿಕ ಟೀಮ್ ಇಂಡಿಯಾದಲ್ಲಿ ಮೂವರು ಕನ್ನಡಿಗರಿಗೆ ಸ್ಥಾನ

ನಾನು ಕ್ರಿಕೆಟರ್ ಅಂತ ಗೊತ್ತಿರೋದ್ರಿಂದ ನನಗೆ ನೀವು ಗೌರವ ಕೊಡ್ತಿದ್ದೀರಿ ಅಷ್ಟೆ. ನನ್ನ ಜೊತೆ ಪೋಟೋ ತೆಗೆಯಿಸಿಕೊಳ್ಳುತ್ತಿದ್ದೀರಿ. ನನ್ನ ಜೊತೆ ಬರೀ ಫೋಟೋ ತೆಗೆಯಿಸಿಕೊಳ್ಳೋದ್ರಿಂದ ಏನು ಪ್ರಯೋಜನೆ. ನಾಲ್ಕು ವಿಚಾರಧಾರೆಗಳನ್ನು ಹಂಚಿಕೊಂಡರೆ ಒಂದಷ್ಟು ಪ್ರಯೋಜನವಾಗಬಹುದು ಎಂದರು.

ಪ್ಲಾನ್ ಎ, ಬಿ, ಸಿ ಅನ್ನೋನು ಸೋಲೋದು ಖಚಿತ

ಆಟವಿರಲಿ, ಬಿಸಿನೆಸ್ ಇರಲಿ ಪ್ಲಾನ್ ಎ, ಬಿ ಅಥವಾ ಸಿ ಅಂತ ಇರಲೇಬಾರದು. ಪ್ಲಾನ್ ಒಂದೇ ಇದ್ದರೆ ಮಾತ್ರ ಅವನು ಗುರಿ ಸಾಧಿಸೋಕೆ ಸಾಧ್ಯ. ಪ್ಲಾನ್ ಬಿ ಅಥವಾ ಸಿ ಅಂತ ಇಟ್ಟುಕೊಂಡರೆ ನಮ್ಮ ಮೇಲೆ ನಮಗೇ ನಂಬಿಕೆ ಇಲ್ಲ ಅಂತ ಅರ್ಥ. ಕ್ರಿಕೆಟ್ ನಲ್ಲಿ ಗೆಲುವು ಒಂದು ಇರುತ್ತೆ.

ಇದನ್ನೂ ಓದಿ: Kapil Dev: ಭಯವಿಲ್ಲದೆ ಬೌಲಿಂಗ್ ಮಾಡಿ ಎದುರಾಳಿಯ ಮೈಚಳಿ ಬಿಡಿಸಿದ್ದು ಆತ ಮಾತ್ರ ಎಂದ ಕಪಿಲ್ ದೇವ್

ಒಂದು ವೇಳೆ ಪ್ಲಾನ್ ಬಿ ಅಂದ್ರೆ ಸೋಲು ಖಚಿತ. ಹೀಗಾಗಿ ಪ್ಲಾನ್ ಒಂದೇ ಇರಬೇಕು. ಅದೇ ರೀತಿ ಸಕ್ಸಸ್ ಒಂದನ್ನೇ ಗುರಿಯಾಗಿಸಿಕೊಂಡ್ರೆ ಮಾತ್ರ ಬೆಳೆಯೋಕೆ ಸಾಧ್ಯ. ನಾನು ಅನ್ನೋ ಅಹಂ ಇದ್ದರೆ ಆತ ಮೇಲೆ ಬರೋಕೆ ಸಾಧ್ಯವಿಲ್ಲ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟರು.
Published by:Divya D
First published: