'ನನ್ನ ಸ್ವಾತಂತ್ರ್ಯ ದಿನಾಚರಣೆ ಆ. 15': ರಾಷ್ಟ್ರೀಯತೆ ಪ್ರಶ್ನಿಸಿದ ಟ್ರೋಲಿಗರಿಗೆ ಖಡಕ್ ಉತ್ತರ ಕೊಟ್ಟ ಸಾನಿಯಾ

 • News18
 • Last Updated :
 • Share this:
  ನ್ಯೂಸ್ 18 ಕನ್ನಡ

  ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನ ಕ್ರಿಕೆಟಿಗ ಶೊಯಬ್ ಮಲಿಕ್ ಅವರನ್ನು ವಿವಾಹವಾದ ಬಳಿಕ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಸಾನಿಯ ಅವರ ರಾಷ್ಟ್ರೀಯತೆಯ ಬಗ್ಗೆ ಪ್ರಶ್ನಿಸುತ್ತಲೇ ಬಂದಿದ್ದಾರೆ. ಇದಕ್ಕೆ ಸಾನಿಯ ಕೂಡ ತಕ್ಕ ಉತ್ತರವನ್ನು ಈ ಹಿಂದೆ ಅನೇಕ ಬಾರಿ ನೀಡಿದ್ದರು. ಈ ಬಾರಿ ಕೂಡ ಸ್ವಾತಂತ್ರ್ಯ ವಿಚಾರಕ್ಕೆ ಸಂಬಂಧಿಸಿದಂತೆ ಕಾಲೆಳೆದ ಟ್ರೋಲಿಗರಿಗೆ ಸಾನಿಯಾ ಅವರು ಸರಿಯಾಗೇ ಬಾಯಿ ಮುಚ್ಚಿಸಿದ್ದಾರೆ.

  ನಿನ್ನೆ(ಆ. 14) ಪಾಕಿಸ್ತಾನದ ಸ್ವಾತಂತ್ರ್ಯ ದಿನಾಚರಣೆಯಾಗಿದ್ದು, ಟ್ವಿಟರ್​​ನಲ್ಲಿ 'ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ನಿಮ್ಮ ಸ್ವಾತಂತ್ರ್ಯ ದಿನಾಚರಣೆ ಇವತ್ತಲ್ಲವೇ' ಎಂದು ಅಭಿಮಾನಿಯೊಬ್ಬ ಪ್ರಶ್ನೆ ಕೇಳಿ ಕಾಲೆಳೆದಿದ್ದಾನೆ. ಇದಕ್ಕೆ ಪ್ರತ್ಯುತ್ತರವಾಗಿ 31 ವರ್ಷ ಪ್ರಾಯದ ಸಾನಿಯಾ ಅವರು 'ನನಗೆ ಹಾಗೂ ನನ್ನ ದೇಶಕ್ಕೆ ಸ್ವಾತಂತ್ರ್ಯ ದಿನಾಚರಣೆ ಆ. 15ರಂದು. ನನ್ನ ಪತಿ ಹಾಗೂ ಅವರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದು ಆ.14. ಈಗ ನಿಮ್ಮ ಗೊಂದಲ ನಿವಾರಣೆಯಾಗಿದೆ ಎಂದುಕೊಂಡಿರುವೆ. ನಿಮ್ಮ ಸ್ವಾತಂತ್ರ್ಯ ದಿನಾಚರಣೆ ಯಾವಾಗ? ನೀವು ತುಂಬಾ ಗೊಂದಲ್ಲಿ ಇದ್ದಂತಿದೆ' ಎಂದು ಟ್ವೀಟ್ ಮಾಡಿ ಖಡಕ್ ಉತ್ತರವನ್ನೇ ನೀಡಿದ್ದಾರೆ.

         

  First published: