ನವದೆಹಲಿ, ನ. 10: ಅಂತರರಾಷ್ಟ್ರೀಯ ಕುಸ್ತಿಪಟು ನಿಶಾ ದಾಹಿಯಾ (Nisha Dahiya) ಮತ್ತಾಕೆಯ ಸಹೋದರನನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ ಎಂಬ ಸುದ್ದಿ ಕೆಲ ಹೊತ್ತಿನ ಮೊದಲು ಮಾಧ್ಯಮಗಳಲ್ಲಿ ರಾಚಿತ್ತು. ಆದರೆ ಅದೃಷ್ಟಕ್ಕೆ ನಕಲಿ ಎಂಬುದು ಗೊತ್ತಾಗಿದೆ. ಈ ಸುದ್ದಿಯನ್ನು ಸ್ವತಃ ನಿಶಾ ಅವರೇ ತಳ್ಳಿಹಾಕಿದ್ದಾರೆ. ತಾನಿನ್ನೂ ಜೀವಂತವಾಗಿರುವುದಾಗಿ ಅವರು ಸ್ಪಷ್ಟನೆ ಕೊಟ್ಟಿದ್ದಾರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆಕೆ ಮಾತನಾಡಿರುವ ವಿಡಿಯೋವನ್ನೂ ಎಎನ್ಐ ಪೋಸ್ಟ್ ಮಾಡಿದೆ. ಆದರೆ, ಸೋನೆಪತ್ನಲ್ಲಿ ನಿಶಾ ದಾಹಿಯಾ ಎಂಬ ಇನ್ನೊಬ್ಬ ಮಹಿಳೆಯ ಹತ್ಯೆಯಾಗಿರುವ ಸುದ್ದಿ ನಿಜ ಎನ್ನಲಾಗಿದೆ.
“ನಾನು ಗೋಂಡಾದಲ್ಲಿ ನ್ಯಾಷನಲ್ ಚಾಂಪಿಯನ್ಶಿಪ್ನಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ನನ್ನ ಸಾವಿನ ಸುದ್ದಿ ಸುಳ್ಳು. ನಾನು ಚೆನ್ನಾಗಿದ್ದೇನೆ” ಎಂದು ಮಹಿಳಾ ಕುಸ್ತಿಪಟು ನಿಶಾ ದಾಹಿಯಾ (Wrestler Nisha Dahiya video message) ಈ ವಿಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ.
#WATCH | "I am in Gonda to play senior nationals. I am alright. It's a fake news (reports of her death). I am fine," says wrestler Nisha Dahiya in a video issued by Wrestling Federation of India.
(Source: Wrestling Federation of India) pic.twitter.com/fF3d9hFqxG
— ANI (@ANI) November 10, 2021
ಒಲಿಂಪಿಕ್ ಪದಕ ವಿಜೇತೆ ಕುಸ್ತಿಪಟು ಸಾಕ್ಷಿ ಮಲಿಕ್ (Sakshmi Malik) ಕೂಡ ಟ್ವೀಟ್ ಮಾಡಿದ್ದು, ನಿಶಾ ದಾಹಿಯಾ ಬದುಕಿದ್ದಾರೆ ಎಂದು ತಿಳಿಸಿದ್ಧಾರೆ.
She is alive 🙏🏻 #nishadhaiya #fakenwes pic.twitter.com/6ohMK1bWxG
— Sakshi Malik (@SakshiMalik) November 10, 2021
ಇದನ್ನೂ ಓದಿ: Ravi Shastri- ಗೆಲ್ಲಲು ಯತ್ನಿಸದೆಯೇ ಸೋತೆವು, ಆಟಗಾರರಲ್ಲಿ ಆ ಅಂಶವೇ ಇರಲಿಲ್ಲ: ರವಿಶಾಸ್ತ್ರಿ
ಆದರೆ, ಹತ್ಯೆಯಾದ ನಿಶಾ ದಾಹಿಯಾ ಕುಸ್ತಿಪಟುವಲ್ಲ. ಕುಸ್ತಿಪಟು ನಿಶಾ ಬೇರೆ ಹತ್ಯೆಯಾದ ನಿಶಾ ಬೇರೆ. ಕುಸ್ತಿಪಟು ನಿಶಾ ಅವರು ಪಾನಿಪತ್ನವರು ಎಂದು ಸೋನಿಪತ್ ಎಸ್ಪಿ ರಾಹುಲ್ ಶರ್ಮಾ ಸ್ಪಷ್ಟಪಡಿಸಿದ್ದಾರೆ.
ಕಳೆದ ಶುಕ್ರವಾರವಷ್ಟೇ ನಿಶಾ ದಾಹಿಯಾ ಅವರು ಸರ್ಬಿಯಾ ದೇಶದ ಬೆಲ್ಗ್ರೇಡ್ನಲ್ಲಿ ನಡೆದ ಅಂಡರ್-23 ವರ್ಲ್ಡ್ ಚಾಂಪಿಯನ್ಶಿಪ್ನಲ್ಲಿ 65 ಕಿಲೋ ವಿಭಾಗದಲ್ಲಿ ಕಂಚಿನ ಪದಕ ಜಯಿಸಿದ್ದರು. ಈ ಟೂರ್ನಿಯಲ್ಲಿ ಭಾರತದ ಇತರ ಕೆಲ ಕುಸ್ತಿಪಟುಗಳೂ ಮಿಂಚಿ ಪದಕ ಜಯಿಸಿದ್ದರು. ಪ್ರಧಾನಿ ಮೋದಿ ಅವರು ನಿಶಾ ಸೇರಿದಂತೆ ಎಲ್ಲಾ ಕುಸ್ತಿಪಟುಗಳನ್ನ ಅಭಿನಂದಿಸಿದ್ದರು.
ಇದನ್ನೂ ಓದಿ: NDA ಅಡಿ ಮೊದಲ ಹಂತದಲ್ಲಿ ಸೇನೆಗೆ ಸೇರಲಿದ್ದಾರೆ 20 ಮಹಿಳಾ ಅಧಿಕಾರಿಗಳು
ನಿಶಾ ಸೇರಿದಂತೆ ಭಾರತದ ಹಲವು ಕುಸ್ತಿಪಟುಗಳು ನ್ಯಾಷನಲ್ ಚಾಂಪಿಯನ್ಶಿಪ್ಗೆ ಅಣಿಯಾಗುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ