ನ್ಯೂಸ್ 18 ಕನ್ನಡ
2019ರ
ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನೇನು ಕೆಲವೆ ತಿಂಗಳುಗಳು ಬಾಕಿ ಉಳಿದಿವೆಯಷ್ಟೆ. ಫ್ರಾಂಚೈಸಿಗಳು ಈಗಾಗಲೇ ಆಟಗಾರರ ಆಯ್ಕೆಯಲ್ಲಿ ತೊಡಗಿದ್ದು, ಸಾಮಾಜಿಕ ಜಾಲತಾಣಗಳಲ್ಲು ಸಕ್ರಿಯರಾಗಿದ್ದಾರೆ. ಈ ಮಧ್ಯೆ ಮುಂಬೈ ಇಂಡಿಯನ್ಸ್ ತಂಡದ ಅಧಿಕೃತ ಟ್ವಿಟರ್ ಖಾತೆಯಿಂದ ಕೇಳಿದ ಪ್ರಶ್ನೆಯೊಂದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ವಿಟರ್ ಖಾತೆ ನೀಡಿರುವ ಉತ್ತರ ಸಖತ್ ವೈರಲ್ ಆಗುತ್ತಿದೆ.
ಮುಂಬೈ ಇಂಡಿಯನ್ಸ್ ತಂಡವು ಹಾರ್ದಿಕ್ ಪಾಂಡ್ಯ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಫೋಟೋಕ್ಕೆ ‘ಇವರಿಗಿಂತ ಉತ್ತಮ ಆಲ್ರೌಂಡರ್ ಆಟಗಾರರು ಯಾರಿದ್ದಾರೆ..? ಮರು ಉತ್ತರಕ್ಕಾಗಿ ಕಾಯುತ್ತಿದ್ದೇವೆ’ ಎಂದು ಬರೆದು ಟ್ವೀಟ್ ಮಾಡಿದೆ. ಈ ಫೋಟೋದಲ್ಲಿ ಮುಂಬೈ ಇಂಡಿಯನ್ಸ್ ತಂಡದ ಆಲ್ರೌಂಡರ್ ಆಟಗಾರರಾದ ಹಾರ್ದಿಕ್ ಪಾಂಡ್ಯ, ಕ್ರುನಾಲ್ ಪಾಂಡ್ಯ ಹಾಗೂ ವೆಸ್ಟ್ ಇಂಡೀಸ್ ತಂಡದ ಕೀರೊನ್ ಪೊಲ್ಲಾರ್ಡ್ ಇದ್ದಾರೆ.
ಇದನ್ನೂ ಓದಿ:
ರೊನಾಲ್ಡೊ ಮನೆಯ ಕೆಲಸಗಾರ ಆಗಬೇಕಾ..? ಹಾಗಾದ್ರೆ ಮೊದಲು ನೀವು ಇದಕ್ಕೆ ಒಪ್ಪಬೇಕು
ಮುಂಬೈ ಇಂಡಿಯನ್ಸ್ ಕೇಳಿದ ಪ್ರಶ್ನೆಗೆ ಸನ್ರೈಸರ್ಸ್ ಹೈದರಾಬಾದ್ ತಂಡ 'ಕಾಯುವ ಅಗತ್ಯವಿಲ್ಲ, ಅದು ಇವರೇ' ಎಂದು ತಮ್ಮ ತಂಡದ ಮೊಹಮ್ಮದ್ ನಬಿ, ರಶೀದ್ ಖಾನ್ ಹಾಗೂ ಶಕೀಬ್ ಅಲ್ ಹಸನ್ ಅವರ ಫೋಟೋ ಶೇರ್ ಮಾಡಿದೆ. ಇದಕ್ಕೆ ಮುಂಬೈ ಮತ್ತೆ ತಾನು ಗೆದ್ದಿರುವ ಮೂರು ಐಪಿಎಲ್ ಟ್ರೋಫಿಯ ಫೋಟೋ ಹಂಚಿಕೊಂಡು ಮತ್ತೊಮ್ಮೆ ಪ್ರಶಸ್ತಿ ಮುಡಿಗೇರಿಸಿಕೊಳ್ಳಲಿದ್ದೇವೆ ಎಂದು ಪರೋಕ್ಷವಾಗಿ ಸೂಚಿಸಿದ್ದಾರೆ.
ಆದರೆ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ವಿಟರ್ ಖಾತೆ ಇದಕ್ಕೆಲ್ಲಾ ವಿಭಿನ್ನವಾಗಿ ಟಾಂಗ್ ಕೊಟ್ಟು ಉತ್ತರ ನೀಡಿದೆ. ‘ಮೂನ್ಡ್ರು ಮುಗಮ್‘(ಮೂರು ಅವತಾರ) ಎಂದು ಅಡಿಬರಹ ನೀಡಿ ಸಿಎಸ್ಕೆ ತನ್ನ ತಂಡದ ನಾಯಕ
ಎಂ. ಎಸ್ ಧೋನಿ ಅವರ ಮೂರು ಫೋಟೋವನ್ನು ಹಂಚಿಕೊಂಡಿದೆ. ಈ ಮೂಲಕ ಐಪಿಎಲ್ ಆರಂಭಕ್ಕೂ ಮುನ್ನವೆ ಅಭಿಮಾನಿಗಳಿಂದ ತಮ್ಮ ನೆಚ್ಚಿನ ತಂಡದ ಮೇಲಿನ ಕ್ರೇಜ್ ಜೋರಾಗ ತೊಡಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ