ರಟ್ಟಾಯ್ತು ಗುಟ್ಟು: ಇತ್ತೀಚೆಗೆ ಧೋನಿ ಭರ್ಜರಿ ಪ್ರದರ್ಶನ ತೋರಲು ಕಾರಣವೇನು ಗೊತ್ತಾ?

ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಧೋನಿ ಭರ್ಜರಿ ಕಮ್​ಬ್ಯಾಕ್ ಮಾಡಿದರು. ಆದರೆ, ಧೋನಿಯ ಈ ಅದ್ಭುತ ಪ್ರದರ್ಶನದ ಹಿಂದಿನ ಕಾರಣ ಏನು ಎಂಬುದು ಯಾರಿಗೂ ತಿಳಿದಿರಲಿಲ್ಲ.

Vinay Bhat | news18
Updated:February 12, 2019, 7:55 PM IST
ರಟ್ಟಾಯ್ತು ಗುಟ್ಟು: ಇತ್ತೀಚೆಗೆ ಧೋನಿ ಭರ್ಜರಿ ಪ್ರದರ್ಶನ ತೋರಲು ಕಾರಣವೇನು ಗೊತ್ತಾ?
ಎಂ ಎಸ್ ಧೋನಿ
  • News18
  • Last Updated: February 12, 2019, 7:55 PM IST
  • Share this:
ಕಳೆದ ಒಂದು ವರ್ಷದಿಂದ ಟೀಂ ಇಂಡಿಯಾ ವಿಕೆಟ್ ಕೀಪರ್-ಬ್ಯಾಟ್ಸ್​ಮನ್​​ ಎಂ ಎಸ್ ಧೋನಿ ಕಳಪೆ ಫಾರ್ಮ್​​ನಿಂದ ಕಂಗೆಟ್ಟೊಗಿದ್ದರು. ಅದು ಎಲ್ಲಿಯವರಗೆಂದರೆ ತಂಡದಿಂದಲೆ ಕೈಬಿಟ್ಟು, ಇನ್ನೇನು ಧೋನಿ ನಿವೃತ್ತಿ ಘೋಷಿಸಬೇಕೆಂದು ಹೇಳಲಾಗುತ್ತಿತ್ತು.

ಆದರೆ, ಈ ವರ್ಷದ ಆರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಧೋನಿ ಭರ್ಜರಿ ಕಮ್​ಬ್ಯಾಕ್ ಮಾಡಿದರು. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಧೋನಿ 51, 55* ಹಾಗೂ 87* ರನ್ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ ನ್ಯೂಜಿಲೆಂಡ್ ಸರಣಿಯಲ್ಲು ಮಿಂಚಿದರು.

ಇಷ್ಟೆಲ್ಲ ಆದರು ಧೋನಿಯ ಈ ಅದ್ಭುತ ಪ್ರದರ್ಶನದ ಹಿಂದಿನ ಕಾರಣ ಏನು ಎಂಬುದು ಯಾರಿಗೂ ತಿಳಿದಿರಲಿಲ್ಲ. ಆದರೆ, ಈಗ ಈ ಗುಟ್ಟಿನ ಹಿಂದಿನ ಸತ್ಯ ಬಯಲಾಗಿದ್ದು, ಧೋನಿ ಫಾರ್ಮ್​​ ಕಂಡುಕೊಳ್ಳಲು ಕಾರಣ ಅವರ ಬ್ಯಾಟ್​​ನ ವಿನ್ಯಾಸ ಎಂದು ಆಡಳಿತ ಮಂಡಳಿಯ ಮೂಲಗಳಿಂದ ತಿಳಿದುಬಂದಿದೆ.

ಇದನ್ನೂ ಓದಿ: ಕೊಹ್ಲಿಯನ್ನು ನನಗೆ ಹೋಲಿಕೆ ಮಾಡಬೇಡಿ ಎಂದ ಪಾಕ್​ನ ಸ್ಟಾರ್ ಬ್ಯಾಟ್ಸ್​ಮನ್​​​​

ಧೋನಿ ಅವರು ಸದ್ಯ ಸ್ಪಾರ್ಟಾನ್​ ಕಂಪೆನಿಯ ಬ್ಯಾಟ್ ಉಪಯೋಗಿಸುತ್ತಿದ್ದು, ಇದನ್ನು ವಿಶೇಷವಾಗಿ ವಿನ್ಯಾಸ ಮಾಡಲಾಗಿದೆಯಂತೆ. ಧೋನಿ ಶೈಲಿಗೆ, ಅವರ ಶಕ್ತಿಗೆ ಸೂಟ್ ಆಗುವ ರೀತಿಯಲ್ಲಿ ಬ್ಯಾಟ್ ತಯಾರಿಸಲಾಗಿದೆ. ಈ ಬ್ಯಾಟ್​​ನ ಹಿಂಭಾಗ ಮತ್ತು ಕೆಳಭಾಗದಲ್ಲಿ ಮರದ ಅಂಶವನ್ನು ಹೆಚ್ಚು ಬಳಸಲಾಗಿದ್ದು, ಇದು ಹೆಚ್ಚಿನ ಶಕ್ತಿ ಉದಗಿಸುತ್ತದೆ ಎಂದಿದ್ದಾರೆ. ಇದುವೆ ಇತ್ತೀಚಿನ ದಿನಗಳಲ್ಲಿ ಧೋನಿ ಯಶಸ್ಸಿಗೆ ಪ್ರಮುಖ ಕಾರಣವಾಗಿದೆಯಂತೆ.

First published:February 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading