IPL 2023: ಕುಂಟುತ್ತಾ ಓಡ್ತಿರೋ ಮಾಹಿ, ವಿಡಿಯೋ ನೋಡಿ ಕಣ್ಣೀರಿಟ್ಟ ಧೋನಿ ಫ್ಯಾನ್ಸ್​!

ಎಂಎಸ್​ ಧೋನಿ

ಎಂಎಸ್​ ಧೋನಿ

MS Dhoni: ಎಂಎಸ್ ಧೋನಿ ಒಂದು ವೈರಲ್ ವೀಡಿಯೊದಲ್ಲಿ ಕುಂಟುತ್ತಿರುವಂತೆ ಕಂಡುಬಂದಿದೆ. ಇದರಿಂದ ಅಭಿಮಾನಿಗಳು ಬೇಸರಗೊಂಡಿದ್ದಾರೆ.

  • Share this:

ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ (MS Dhoni) 3 ವರ್ಷಗಳ ಹಿಂದೆ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ. 41ರ ಹರೆಯದ ಮಹಿ ಈಗಲೂ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಐಪಿಎಲ್ 2023ರ ಕುರಿತು ನೋಡುವುದಾದರೆ ಅವರು ಭರ್ಜರಿ ಬ್ಯಾಟಿಂಗ್​ ಮೂಲಕ ಅಬ್ಬರಿಸುತ್ತಿದ್ದಾರೆ. ಅವರ ನಾಯಕತ್ವದಲ್ಲಿ, 4 ಬಾರಿಯ ಚಾಂಪಿಯನ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್‌ನಿಂದ ಕೇವಲ ಒಂದು ಗೆಲುವಿನ ಅಂತರದಲ್ಲಿದೆ. ಚೆನ್ನೈ ಸೂಪರ್​ ಕಿಂಗ್ಸ್ (CSK) ಇಂದು ತನ್ನ ತವರು ನೆಲ ಚೆಪಾಕ್‌ನಲ್ಲಿ (Chepauk) 2 ಬಾರಿಯ ಚಾಂಪಿಯನ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಅನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಧೋನಿ ಪಡೆ ಗೆದ್ದರೆ 16ನೇ ಟಿ20 ಲೀಗ್‌ನಲ್ಲಿ ಪ್ಲೇಆಫ್ ತಲುಪಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.


ಧೋನಿ ನೋಡಿ ಭಾವುಕರಾದ ಫ್ಯಾನ್ಸ್:


ಏತನ್ಮಧ್ಯೆ, ಎಂಎಸ್ ಧೋನಿ ಒಂದು ವೈರಲ್ ವೀಡಿಯೊದಲ್ಲಿ ಕುಂಟುತ್ತಿರುವಂತೆ ಕಂಡುಬಂದಿದೆ. ಇದರಿಂದ ಅಭಿಮಾನಿಗಳು ನಿರಾಸೆಗೊಂಡಿದ್ದು, ಒಂದು ಪಂದ್ಯವನ್ನಾದರೂ ರೆಸ್ಟ್​ ಮಾಡಿ ಎನ್ನುತ್ತಿದ್ದಾರೆ. ಶಾಟ್ ಆಡಿದ ನಂತರ ಧೋನಿ ಓಡಿಹೋಗಿದ್ದು, ಸರಿಯಾಗಿ ಓಡಲು ಸಾಧ್ಯವಾಗುತ್ತಿಲ್ಲ ಎಂಬುದು ವಿಡಿಯೋದಲ್ಲಿ ಕಂಡುಬಂದಿದೆ. ಧೋನಿ ನಿಧಾನವಾಗಿ ಓಡಲು ಪ್ರಯತ್ನಿಸಿದ್ದಾರೆ. ಮೊಣಕಾಲು ನೋವು ಕಾಣಿಸಿಕೊಂಡಿದ್ದು, ಸಂಪೂರ್ಣ ಫಿಟ್ ಆಗದ ಬಳಿಕವೂ ಅಭ್ಯಾಸ ನಡೆಸುತ್ತಿದ್ದಾರೆ. ಐಪಿಎಲ್ 2023 ಧೋನಿಯ ಕೊನೆಯ ಸೀಸನ್ ಎಂದು ನಂಬಲಾಗಿದೆ, ಆದರೆ ಇಲ್ಲಿಯವರೆಗೆ ಅವರು ಅದರ ಬಗ್ಗೆ ಏನನ್ನೂ ಹೇಳಿಲ್ಲ.ಇತ್ತೀಚೆಗಷ್ಟೇ ಸಿಎಸ್‌ಕೆ ಕೋಚ್ ಸ್ಟೀಫನ್ ಫ್ಲೆಮಿಂಗ್ ಕೂಡ ಎಂಎಸ್ ಧೋನಿ ಮೊಣಕಾಲು ಸಂಪೂರ್ಣವಾಗಿ ಗುಣಮುಖರಾಗಿಲ್ಲ ಎಂದು ಹೇಳಿದ್ದರು. ಇದಾದ ನಂತರವೂ ಆಡುತ್ತಿದ್ದಾರೆ. ಅದೇ ಸಮಯದಲ್ಲಿ, ಗಾಯದಿಂದಾಗಿ ನಾನು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಯುತ್ತಿದ್ದೇನೆ, ಆದರೆ ನನ್ನ ಕೆಲಸ ನನಗೆ ತಿಳಿದಿದೆ ಮತ್ತು ನಾನು ಅದನ್ನು ಮಾಡುತ್ತೇನೆ ಎಂದು ಧೋನಿ ಹೇಳಿದರು. ಐಪಿಎಲ್ 2023 ರಲ್ಲಿ ಧೋನಿ ಇಲ್ಲಿಯವರೆಗೆ ಬಿರುಸಿನ ಬ್ಯಾಟಿಂಗ್ ಮಾಡಿದ್ದಾರೆ.


ಇದನ್ನೂ ಓದಿ: IPL 2023: ರಾಜಸ್ಥಾನ್​ ವಿರುದ್ಧ ಆರ್​ಸಿಬಿ ಸೋತ್ರೆ ಪ್ಲೇಆಫ್​ ಪ್ರವೇಶಿಸಬಹುದಾ? ಇಲ್ಲಿದೆ ಹೊಸ ಲೆಕ್ಕಾಚಾರ


ಮಹೇಂದ್ರ ಸಿಂಗ್ ಧೋನಿ ಇದುವರೆಗೆ 47 ಎಸೆತಗಳನ್ನು ಎದುರಿಸಿದ್ದು, 204 ಸ್ಟ್ರೈಕ್ ರೇಟ್‌ನಲ್ಲಿ 96 ರನ್ ಗಳಿಸಿದ್ದಾರೆ. 3 ಬೌಂಡರಿ ಹಾಗೂ 10 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಅಂದರೆ, ಬೌಂಡರಿಯಿಂದ 72 ರನ್ ಗಳಿಸಿದ್ದಾರೆ. ಅಜೇಯ 32 ರನ್ ಅವರ ಅತ್ಯುತ್ತಮ ಪ್ರದರ್ಶನವಾಗಿದೆ.


ಚೆನ್ನೈ ಸೂಪರ್​ ಕಿಂಗ್ಸ್ ಪ್ಲೇಯಿಂಗ್​ 11:


ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(w/c), ದೀಪಕ್ ಚಾಹರ್, ಮಥೀಶ ಪತಿರಣ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ.
ಮೂರು ಐಸಿಸಿ ಟ್ರೋಫಿಗಳನ್ನು ಗೆದ್ದ ಏಕೈಕ ನಾಯಕ ಧೋನಿ:


ಎಂಎಸ್ ಧೋನಿ ಕೋಟ್ಯಂತರ ಭಾರತೀಯರ ಮನಸ್ಸಿನಲ್ಲಿ ನೆಲೆಯೂರಿರುವ ಆಟಗಾರ. ಭಾರತಕ್ಕೆ ಹಲವು ವಿಜಯಗಳನ್ನು ನೀಡುವ ಮೂಲಕ ಧೋನಿ ಅನೇಕ ಅಭಿಮಾನಿಗಳನ್ನು ಗಳಿಸಿದ್ದಾರೆ. ನಮ್ಮ ದೇಶದ ದಿಗ್ಗಜರಲ್ಲದೆ ವಿಶ್ವದ ಸ್ಟಾರ್ ಆಟಗಾರರೂ ಮಹೇಂದ್ರ ಅವರ ನಾಯಕತ್ವದ ಅಭಿಮಾನಿಗಳು. ಇಷ್ಟೊಂದು ಅಭಿಮಾನಿ ಬಳಗವನ್ನು ಗಳಿಸಿರುವ ಕ್ರಿಕೆಟಿಗ ಧೋನಿ ಅವರು ಯಾರನ್ನು ಮೆಚ್ಚುತ್ತಾರೆ ಗೊತ್ತಾ..? ತಮ್ಮ ರೋಲ್ ಮಾಡೆಲ್ ಯಾರು ಎಂಬ ಬಗ್ಗೆ ಧೋನಿ ಮಾಹಿತಿ ನೀಡಿದ್ದಾರೆ.

First published: