ಏಷ್ಯಾ ಕಪ್​​​ನಲ್ಲಿ ರೋಹಿತ್ ಬದಲು ಧೋನಿ ನಾಯಕನಾಗಿದ್ದಕ್ಕೆ ಬಿಸಿಸಿಐ ಗರಂ

ಸೂಪರ್ ಫೋರ್ ಹಂತದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆದು, ಮಾಜಿ ನಾಯಕ ಎಂ. ಎಸ್ ಧೋನಿ ಮತ್ತೆ ಕ್ಯಾಪ್ಟನ್ ಪಟ್ಟ ತೊಟ್ಟಿದ್ದರು.

Vinay Bhat | news18
Updated:November 29, 2018, 4:29 PM IST
ಏಷ್ಯಾ ಕಪ್​​​ನಲ್ಲಿ ರೋಹಿತ್ ಬದಲು ಧೋನಿ ನಾಯಕನಾಗಿದ್ದಕ್ಕೆ ಬಿಸಿಸಿಐ ಗರಂ
ಎಂ. ಎಸ್ ಧೋನಿ
Vinay Bhat | news18
Updated: November 29, 2018, 4:29 PM IST
ಕಳೆದ ಸಪ್ಟೆಂಬರ್​ನಲ್ಲಿ ದುಬೈನಲ್ಲಿ ಮುಕ್ತಾಯಗೊಂಡ ಏಷ್ಯಾ ಕಪ್​ ಟೂರ್ನಿಯಲ್ಲಿ ಭಾರತ ಗೆದ್ದು ಏಳನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಟೀಂ ಇಂಡಿಯಾ ಖಾಯಂ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿ ಈ ಟೂರ್ನಿಯಲ್ಲಿ ರೋಹಿತ್ ಶರ್ಮಾಗೆ ತಂಡವನ್ನು ಮುನ್ನಡೆಸುವ ಜವಾಬ್ದಾರಿ ನೀಡಲಾಗಿತ್ತು.

ಆದರೆ ಸೂಪರ್ ಫೋರ್ ಹಂತದ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆದು, ಮಾಜಿ ನಾಯಕ ಎಂ. ಎಸ್ ಧೋನಿ ಮತ್ತೆ ಕ್ಯಾಪ್ಟನ್ ಪಟ್ಟ ತೊಟ್ಟಿದ್ದರು. ಜೊತೆಗೆ ಧೋನಿ ಅವರು ನಾಯಕನಾಗಿ ಆಡಿದ 200ನೇ ಪಂದ್ಯ ಅದಾಗಿತ್ತು. ಆದರೆ, ಧೋನಿ ಕ್ಯಾಪ್ಟೆನೆನ್ಸಿ ಪಟ್ಟದಿಂದ ಕೆಳಗಿಳಿದು ಮತ್ತೆ ನಾಯಕತ್ವ ವಹಿಸಿಕೊಂಡಿದ್ದು ಬಿಸಿಸಿಐಗೆ ಇಷ್ಟವಿರಲಿಲ್ಲವಂತೆ.

ಇದನ್ನೂ ಓದಿ14 ಆಟಗಾರರನ್ನು ತನ್ನಲ್ಲೇ ಉಳಿಸಿಕೊಂಡ ಆರ್​ಸಿಬಿ: ಒಬ್ಬೊಬ್ಬರ ಸಂಭಾವನೆ ಎಷ್ಟು ಗೊತ್ತಾ..?

ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದ್ದು, ಏಷ್ಯಾ ಕಪ್​​ನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ವಿಶ್ರಾಂತಿ ಪಡೆದು ನಾಯಕ ಸ್ಥಾನವನ್ನು ಧೋನಿಗೆ ನೀಡಿದ್ದು ಸರಿಯಲ್ಲ. ಬದಲಾಗಿ ತಂಡದಲ್ಲಿದ್ದ ಬೇರೆ ಹಿರಿಯ ಆಟಗಾರರಿಗೆ ನಾಯಕತ್ವ ಪಟ್ಟ ನೀಡಬೇಕಿತ್ತು ಎಂಬ ಅಭಿಪ್ರಾಯ ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರಂತೆ.

ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ ಅಫ್ಘಾನಿಸ್ತಾನ ನಿಗದಿತ 50 ಓವರ್​ನಲ್ಲಿ 8 ವಿಕೆಟ್ ನಷ್ಟಕ್ಕೆ 252 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ಭಾರತ 49.5 ಓವರ್​ನಲ್ಲಿ 252 ರನ್​​ಗೆವೆ ಆಲೌಟ್ ಆಗುವ ಮೂಲಕ ಪಂದ್ಯ ಟೈನಲ್ಲಿ ಅಂತ್ಯಕಂಡಿತ್ತು. ಈ ಮೂಲಕ ಧೋನಿ ನಾಯಕನಾಗಿ ಆಡಿದ 200ನೇ ಪಂದ್ಯ ಟೈ ಆಗಿ ಹೊರ ಹೊಮ್ಮತ್ತು.

First published:November 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...