• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • MS Dhoni: ಧೋನಿ ವಿದಾಯ ಪಂದ್ಯ ಯಾವಾಗ? ಯಾವ ತಂಡದ ವಿರುದ್ಧ ಕೊನೆ ಬಾರಿ ಕಣಕ್ಕಿಳಿಯಲಿದ್ದಾರೆ ಕ್ಯಾಪ್ಟನ್​ ಕೂಲ್​?

MS Dhoni: ಧೋನಿ ವಿದಾಯ ಪಂದ್ಯ ಯಾವಾಗ? ಯಾವ ತಂಡದ ವಿರುದ್ಧ ಕೊನೆ ಬಾರಿ ಕಣಕ್ಕಿಳಿಯಲಿದ್ದಾರೆ ಕ್ಯಾಪ್ಟನ್​ ಕೂಲ್​?

ಧೋನಿ

ಧೋನಿ

IPL 2023: ಬಿಸಿಸಿಐ ಈಗಾಗಲೇ ಐಪಿಎಲ್​ 2023 ವೇಳಾಪಟ್ಟಿ ಬಿಡುಗಡೆ ಆಗಿದೆ. ಈ ಬಾರಿ ಐಪಿಎಲ್​ ಕೋಟ್ಯಾಂತರ ಧೋನಿ ಅಭಿಮಾನಿಗಳ ಪಾಲಿಗೆ ಅವಿಸ್ಮರಣೀಯವಾಗಿರಲಿದೆ. ಐಪಿಎಲ್‌ನಿಂದ ಹಿರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ನಿರ್ಗಮನಕ್ಕೆ ವೇದಿಕೆ ಸಿದ್ಧವಾಗಿದೆ.

  • News18
  • 2-MIN READ
  • Last Updated :
  • Share this:

ಐಪಿಎಲ್‌ನಿಂದ ಹಿರಿಯ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ (MS Dhoni) ಅಂತಿಮ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ತಮಿಳುನಾಡಿನ ಥಾಲಾ ಖ್ಯಾತಿಯ ಮಹಿ ಮೇ 14ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ (MA Chidambaram Stadium) ತಮ್ಮ ಕೊನೆಯ ಪಂದ್ಯವನ್ನು ಆಡಬಹುದು ಎಂದು ವರದಿಯಾಗಿದೆ. ಐಪಿಎಲ್ 16ನೇ (IPL 2023) ಆವೃತ್ತಿಯ ವೇಳಾಪಟ್ಟಿ ಪ್ರಕಟವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್​ (CSK) ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾದರೆ, ಧೋನಿಯ ವಿದಾಯ ಪಂದ್ಯವು ಕೋಲ್ಕತ್ತಾ ನೈಟ್ ರೈಡರ್ಸ್ (CSK vs KKR) ವಿರುದ್ಧವಾಗಲಿದೆ. ಐಪಿಎಲ್‌ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ವಿರುದ್ಧ ಸಿಎಸ್‌ಕೆ ಅಭಿಯಾನ ಆರಂಭಿಸಲಿದೆ.


ಧೋನಿ ನಿವೃತ್ತಿ ಯಾವಾಗ?:


ಐಪಿಎಲ್​ ಮೂಲಗಳ ಪ್ರಕಾರ, ಸಿಎಸ್‌ಕೆ ಅಧಿಕಾರಿಯೊಬ್ಬರು ಮಾತನಾಡಿದ್ದು, 'ಹೌದು, ಧೋನಿ ಅವರಿಗೆ ಇದು ಕೊನೆಯ ಋತುವಾಗಿರುತ್ತದೆ ಎನ್ನುವ ಅಂಶ ನಮಗೆ ಇಲ್ಲಿಯವರೆಗೆ ತಿಳಿದಿರುವುದಾಗಿದೆ. ನಿಸ್ಸಂಶಯವಾಗಿ ಈ ವಿಚಾರ ಧೋನಿ ಅವರ ನಿರ್ಧಾರವಾಗಿರುತ್ತದೆ. ಅವರು ನಿವೃತ್ತಿಯಾಗುವುದಾಗಿ ಅಧಿಕೃತವಾಗಿ ತಂಡದ ಆಡಳಿತಕ್ಕೆ ತಿಳಿಸಿಲ್ಲ. ಚೆನ್ನೈಗೆ ಐಪಿಎಲ್ ವಾಪಸಾಗುತ್ತಿರುವುದು ಸಿಎಸ್​ಕೆ ಅಭಿಮಾನಿಗಳಿಗೆ ಸಂತಸದ ಸುದ್ದಿ. ಆದರೆ ಧೋನಿ ಕೊನೆಯ ಋತುವಿನಲ್ಲಿ ಆಡುವುದು ನಮಗೂ ಬೇಸರದ ಸಂಗತಿಯಾಗಿದೆ‘ ಎಂದು ಹೇಳಿದ್ದಾರೆ.


2010, 2011, 2018 ಮತ್ತು 2021 ರಲ್ಲಿ ನಾಲ್ಕು ಬಾರಿ ಪ್ರಶಸ್ತಿಯನ್ನು ಗೆದ್ದಿರುವ CSK ಐಪಿಎಲ್‌ನಲ್ಲಿ 2ನೇ ಅತ್ಯಂತ ಯಶಸ್ವಿ ಫ್ರಾಂಚೈಸ್ ಆಗಿದೆ. ತಂಡವನ್ನು ಮಹೇಂದ್ರ ಸಿಂಗ್ ಧೋನಿ ಮುನ್ನಡೆಸಲಿದ್ದಾರೆ. ಆಟಗಾರನಾಗಿ ಇದು ಧೋನಿಯ ಕೊನೆಯ ಟೂರ್ನಿಯಾಗಿರಬಹುದು ಎಂದು ಹೇಳಲಾಗುತ್ತಿದೆ.


ಮಾಹಿ ವಿದಾಯ ಪಂದ್ಯ ಯಾವಾಗ?:


41 ವರ್ಷದ ಧೋನಿ ತಮ್ಮ ಕೊನೆಯ ಐಪಿಎಲ್ ಋತುವನ್ನು ಆಡಲಿದ್ದಾರೆ ಎನ್ನಲಾಗುತ್ತಿದೆ. ಧೋನಿ ನಾಯಕತ್ವದಲ್ಲಿ ಸಿಎಸ್​ಕೆ 5ನೇ ಬಾರಿ ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಮೈದಾನಕ್ಕಿಳಿಯಲಿದೆ. CSK ಪ್ಲೇಆಫ್‌ಗೆ ಅರ್ಹತೆ ಪಡೆಯಲು ವಿಫಲವಾದರೆ, ಧೋನಿ ಮೇ 14 ರಂದು ಚೆನ್ನೈನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನು ಆಡಲಿದ್ದಾರೆ. ತಮ್ಮ ತವರಿನ ಪ್ರೇಕ್ಷಕರ ಮುಂದೆ ಕೊನೆಯ ಪಂದ್ಯವನ್ನು ಆಡಲು ಬಯಸುತ್ತೇನೆ ಎಂದು ಧೋನಿ ಈಗಾಗಲೇ ಹೇಳಿದ್ದರು.


ಇದನ್ನೂ ಓದಿ: IPL 2023 Schedule: ಉದ್ಘಾಟನಾ ಪಂದ್ಯದಲ್ಲೇ CSK ರೇಸ್​ ಸ್ಟಾರ್ಟ್​, ಚೆನ್ನೈ ಸೂಪರ್ ಕಿಂಗ್ಸ್​ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ


ಧೋನಿ ನಾಯಕತ್ವದಲ್ಲಿ ಚೆನ್ನೈ:


ಮಹೇಂದ್ರ ಸಿಂಗ್ ಧೋನಿ ಮೊದಲ ಸೀಸನ್ ಅಂದರೆ 2008 ರಿಂದ CSK ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಚೆನ್ನೈ 2 ವರ್ಷಗಳ ನಿಷೇಧದ ನಂತರ ಧೋನಿ ನಾಯಕನಾಗಿ ಮರಳಿದರು. ಕಳೆದ ಋತುವಿನಲ್ಲಿ ಧೋನಿ ನಾಯಕತ್ವದ ಜವಾಬ್ದಾರಿಯನ್ನು ರವೀಂದ್ರ ಜಡೇಜಾಗೆ ವಹಿಸಿದ್ದರು ಆದರೆ ಜಡೇಜಾ ತಂಡವನ್ನು ಗೆಲ್ಲುವಲ್ಲಿ ವಿಫಲರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಜಡೇಜಾ ಅವರಿಂದ ಧೋನಿಗೆ ನಾಯಕತ್ವ ವಾಪಸ್ಸ್​ ನೀಡಲಾಗಿದೆ. ಐಪಿಎಲ್ 15ನೇ ಸೀಸನ್ ನಲ್ಲಿ 8 ಪಂದ್ಯಗಳ ನಂತರ ಧೋನಿಗೆ ಎರಡು ಬಾರಿ ನಾಯಕತ್ವ ನೀಡಲಾಗಿದೆ.




ಐಪಿಎಲ್ 2023 ರ ಸಂಪೂರ್ಣ ಚೆನ್ನೈ ಸೂಪರ್ ಕಿಂಗ್ಸ್ ತಂಡ:


ಮಹೇಂದ್ರ ಸಿಂಗ್ ಧೋನಿ (ನಾಯಕ), ಡೆವೊನ್ ಕಾನ್ವೇ, ರಿತುರಾಜ್ ಗಾಯಕ್ವಾಡ್, ಅಂಬಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹ್ಯಾಂಗರ್‌ಗೆಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಹರ್ಡೇಜಾ, ರವೀಂದ್ರ ಜಹರ್ಡೇಜಾ ದೇಶಪಾಂಡೆ, ಮುಖೇಶ್ ಚೌಧರಿ, ಮತಿಶಾ ಪತಿರಾನ, ಸಿಮರ್‌ಜಿತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತಿಕಷ್ಣ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಖ್ ರಶೀದ್, ನಿಶಾಂತ್ ಸಿಂಧು, ಕೈಲ್ ಜೇಮಿಸನ್, ಅಜಯ್ ಮಂಡಲ್, ಭಗತ್ ವರ್ಮಾ.

Published by:shrikrishna bhat
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು