ತಮ್ಮ ನಿವೃತ್ತಿ ಬಗೆಗಿನ ಊಹಾ ಪೋಹಗಳಿಗೆ ತೆರೆ ಎಳೆದ ಎಂ.ಎಸ್. ಧೋನಿ..!

news18
Updated:August 7, 2018, 7:31 PM IST
ತಮ್ಮ ನಿವೃತ್ತಿ ಬಗೆಗಿನ ಊಹಾ ಪೋಹಗಳಿಗೆ ತೆರೆ ಎಳೆದ ಎಂ.ಎಸ್. ಧೋನಿ..!
news18
Updated: August 7, 2018, 7:31 PM IST
ನ್ಯೂಸ್ 18 ಕನ್ನಡ

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಎಂ. ಎಸ್ ಧೋನಿ ಅವರು ತಮ್ಮ ನಿವೃತ್ತಿಗೆ ಬಗ್ಗೆ ಕೇಳಿ ಬರುತ್ತಿರುವ ಊಹಾ ಪೋಹಗಳಿಗೆ ತೆರೆ ಎಳೆದಿದ್ದಾರೆ. ಅಷ್ಟೇ ಅಲ್ಲದೆ ನಾಯಕ ವಿರಾಟ್ ಕೊಹ್ಲಿ ಬಗ್ಗೆಯೂ ಸಾಕಷ್ಟು ಮೆಚ್ಚುಗೆಯ ಮಾತನ್ನಾಡಿದ್ದಾರೆ.

ಪ್ರಸ್ತುತ ಭಾರತ ಕ್ರಿಕೆಟ್ ತಂಡದ ನಾಯಕನಾಗಿರುವ ವಿರಾಟ್ ಕೊಹ್ಲಿ ಅವರು ಕಳೆದ ಕೆಲ ವರ್ಷಗಳಿಂದ ಅದ್ಭುತ ಪ್ರದರ್ಶನ ತೋರುತ್ತಿದ್ದು, ಅವರು ಆದಷ್ಟು ಬೇಗ ಲೆಜೆಂಡ್​ಗಳ ಸಾಲಿನಲ್ಲಿ ನಿಲ್ಲುತ್ತಾರೆ ಎಂದು ಹೇಳಿದ್ದಾರೆ. ಕೊಹ್ಲಿ ಒಬ್ಬ ಅದ್ಭುತ ಆಟಗಾರ. ಅವರು ಈಗಾಗಲೇ ದಾಖಲೆಗಳ ಶಿಖರವನ್ನು ಏರುತ್ತಿದ್ದಾರೆ. ಅದಕ್ಕಾಗಿ ನನಗೆ ಖುಷಿ ಇದೆ. ಇದೇ ಪ್ರದರ್ಶನ ಮುಂದುವರಿದರೆ ಆದಷ್ಟು ಬೇಗ ಲೆಜೆಂಡ್​ಗಳ ಸಾಲಿನಲ್ಲಿ ಕೊಹ್ಲಿ ನಿಲ್ಲುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ ನಾಯಕನಾಗಿ ಭಾರತ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ ಎಂದಿದ್ದಾರೆ.

ಇನ್ನು ತಮ್ಮ ನಿವೃತ್ತಿ ಕುರಿತು ಕೇಳಿ ಬರುತ್ತಿರುವ ಊಹಾ-ಪೋಹಗಳಿಗೆ ತೆರೆ ಎಳೆದಿರುವ ಧೊನಿ, ಇಂಗ್ಲೆಂಡ್​ನಲ್ಲಿ ನಡೆಯಲಿರುವ 2019ರ ವಿಶ್ವಕಪ್ ವರೆಗೆ ನಾನು ಎಲ್ಲಿಯೂ ಹೋಗುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಸದ್ಯಕ್ಕೆ ನಿವೃತ್ತಿಯ ಯೋಚನೆ ಇಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇನ್ನು ಇಂಗ್ಲೆಂಡ್ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ಧೊನಿ ಅವರು ಅಂಪೈರ್ ಕೈಯಿಂದ ಚೆಂಡು ಪಡೆದುಕೊಂಡಿದ್ದರು. ಇಲ್ಲಿಂದ ಧೋನಿ ನಿವೃತ್ತಿ ಬಗ್ಗೆ ಹಲವು ಮಾತುಗಳು ಹರಿದಾಡುತ್ತಿದ್ದವು. ಸದ್ಯ ಈ ಪ್ರಶ್ನೆಗೂ ಉತ್ತರ ನೀಡಿರುವ ಧೋನಿ, ಆ ಸಂದರ್ಭ ಬಾಲ್ ರಿವರ್ಸ್​ ಸ್ವಿಂಗ್ ಆಗುತ್ತಿರಲಿಲ್ಲ. ಹಾಗಾಗಿ ಚೆಂಡು ಪರೀಕ್ಷೆ ಮಾಡಲು ಅಂಪೈರ್ ಕೈಯಿಂದ ಚೆಂಡನ್ನು ತೆಗೆದುಕೊಂಡಿದ್ದೆ ಎಂದು ಹೇಳಿದ್ದಾರೆ.
First published:August 7, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ