ರಜಾ ಮಜಾದಲ್ಲಿ ಕ್ಯಾಪ್ಟನ್ ಕೂಲ್ ಧೋನಿ

news18
Updated:July 26, 2018, 4:15 PM IST
ರಜಾ ಮಜಾದಲ್ಲಿ ಕ್ಯಾಪ್ಟನ್ ಕೂಲ್ ಧೋನಿ
news18
Updated: July 26, 2018, 4:15 PM IST
ನ್ಯೂಸ್ 18 ಕನ್ನಡ

ಮುಂಬೈ (ಜುಲೈ. 26): ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ. ಎಸ್. ಧೊನಿ ಕೇವಲ ಕ್ರಿಕೆಟ್​​ನಲ್ಲಷ್ಟೇ ಅಲ್ಲದೆ ಫುಟ್ಬಾಲ್ ಆಟದಲ್ಲೂ ಆಸಕ್ತಿ ಹೊಂದಿರುವವರು. ಅನೇಕ ಬಾರಿ ಫುಟ್ಬಾಲ್ ಆಡಿ ತಾನು ಫುಟ್ಬಾಲ್ ಆಟಗಾರ ಎಂದು ಸಾಬೀತು ಕೂಡ ಮಾಡಿದ್ದಾರೆ. ಅದರಂತೆ ಸದ್ಯ ಇಂಗ್ಲೆಂಡ್​​ನಲ್ಲಿ ಟಿ-20 ಹಾಗೂ ಏಕದಿನ ಸರಣಿ ಮುಗಿಸಿ ಭಾರತಕ್ಕೆ ಹಿಂತಿರುಗಿರುವ ಧೋನಿ ರಜಾದಲ್ಲಿ ಫುಲ್ ಎಂಜಾಯ್ ಮಾಡುತ್ತಿದ್ದಾರೆ.


ಮುಂಬೈನಲ್ಲಿ ಬಾಲಿವುಡ್​ ನಟ ಇಶಾನ್ ಕತ್ತಾರ್ ಜೊತೆ ಫುಟ್ಬಾಲ್ ಆಡಿರುವ ಧೋನಿ ಅವರು ಇಶಾನ್​​ಗೆ ಕೆಲ ಫುಟ್ಬಾಲ್ ಟಿಪ್ಸ್ ಕೂಡ ನೀಡಿದ್ದಾರೆ. ಈ ಹಿಂದೆ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟ ರಣಬಿರ್ ಕಪೂರ್ ಜೊತೆಗೂ ಧೊನಿ ಫುಟ್ಬಾಲ್ ಆಡಿದ್ದರು. ಸದ್ಯ ಧೋನಿ ಅವರು ಇಶಾನ್ ಜೊತೆ ಫುಟ್ಬಾಲ್ ಆಡುತ್ತಿರುವ ಫೋಟೋವನ್ನು ಧೋನಿ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದು ವೈರಲ್ ಆಗುತ್ತಿದೆ.


 


Loading... 


ಇಂಗ್ಲೆಂಡ್ ಪ್ರವಾಸ ಮುಗಿಸಿರುವ ಧೋನಿ ಕೊನೆಯ ಏಕದಿನ ಪಂದ್ಯದಲ್ಲಿ ಅಂಪೈರ್ ಬಳಿ ತೆರಳಿ ಬಾಲ್ ಅನ್ನು ಕೇಳಿ ಪಡೆದಿದ್ದರು. ಅಲ್ಲದೆ 10 ಸಾವಿರ ರನ್ ಪೂರೈಸಿದ ಭಾರತದ 4ನೇ ಹಾಗೂ ವಿಶ್ವದ 12ನೇ ಕ್ರಿಕೆಟಿಗ ಎಂಬ ಸಾಧನೆ ಕೂಡ ಮಾಡಿದ್ದಾರೆ.

First published:July 26, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ