VIDEO: ಕಿವೀಸ್​ ತಂಡದ ಕಿವಿ ಹಿಂಡಿದ ಮಹೇಂದ್ರ ಸಿಂಗ್ ಧೋನಿ: ವಿಡಿಯೋ ಭಾರೀ ವೈರಲ್

253 ರನ್ ಟಾರ್ಗೆಟ್​ ಅನ್ನು ಬೆನ್ನತ್ತಿದ್ದ ಕಿವೀಸ್ ಆಟಗಾರರು ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. 150 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡರೂ, ನಂತರ ತಂಡಕ್ಕೆ ಆಲ್​ರೌಂಡರ್​ ಜೇಮ್ಸ್ ನೀಶಮ್ ಆಸರೆಯಾಗಿದ್ದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • News18
  • Last Updated :
  • Share this:
ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಏಕದಿನ ಸರಣಿ ಟೀಂ ಇಂಡಿಯಾದ ಕೈವಶವಾಗುವುದರೊಂದಿಗೆ ಮುಕ್ತಾಯ ಕಂಡಿದೆ. ಐದು ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾ 4-1 ಅಂತರದಿಂದ ಗೆದ್ದು ಬೀಗಿ ಇತಿಹಾಸ ನಿರ್ಮಿಸಿತು. ಮೊದಲ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಭಾರತದ ಆಟಗಾರರು ನಾಲ್ಕನೇ ಪಂದ್ಯದಲ್ಲಿ ಮಕಾಡೆ ಮುಗ್ಗರಿಸಿ ಅಚ್ಚರಿ ಮೂಡಿಸಿದ್ದರು.

4ನೇ ಏಕದಿನ ಪಂದ್ಯದಲ್ಲಿ ಟ್ರೆಂಟ್​ ಬೌಲ್ಟ್​​ ದಾಳಿಗೆ ತತ್ತರಿಸದ್ದ ಭಾರತೀಯರು​ ಕೇವಲ 92ರನ್​​ಗೆ ಆಲೌಟ್​​ ಆಗಿ ಹೀನಾಯ ಸೋಲು ಕಂಡಿದ್ದರು. ಈ ಪಂದ್ಯದಿಂದ ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್​ ಧೋನಿ ಹೊರಗುಳಿದಿದ್ದರು. ಈ ಸೋಲಿನ ಬಳಿಕ ಇಬ್ಬರು ಲೆಜೆಂಡ್​ ಆಟಗಾರರ ಅನಿವಾರ್ಯತೆ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

ಭಾನುವಾರ ನಡೆದ ಐದನೇ ಏಕದಿನ ಪಂದ್ಯದಲ್ಲಿ ವಿಕೆಟ್​ ಕೀಪರ್​ ಧೋನಿ ಮತ್ತೊಮ್ಮೆ ತಂಡಕ್ಕೆ ತನ್ನ ಕೊಡುಗೆಯನ್ನು ಸಾಬೀತು ಪಡಿಸಿದ್ದಾರೆ. ಅತ್ಯುತ್ತಮವಾಗಿ ಆಡುತ್ತಿದ್ದ ನ್ಯೂಜಿಲ್ಯಾಂಡ್​ ತಂಡವನ್ನು ಸೋಲಿಗೆ ಸಿಲುಕಿಸಿದ್ದೇ ಧೋನಿಯ ರನೌಟ್​ ಎಂದು ವಿಶ್ಲೇಷಿಸಲಾಗುತ್ತಿದೆ.

253 ರನ್ ಟಾರ್ಗೆಟ್​ ಅನ್ನು ಬೆನ್ನತ್ತಿದ್ದ ಕಿವೀಸ್ ಆಟಗಾರರು ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿತ್ತು. 150 ರನ್​ಗಳಿಗೆ 6 ವಿಕೆಟ್​ ಕಳೆದುಕೊಂಡರೂ, ನಂತರ ತಂಡಕ್ಕೆ ಆಲ್​ರೌಂಡರ್​ ಜೇಮ್ಸ್ ನೀಶಮ್ ಆಸರೆಯಾಗಿದ್ದರು. ಹೊಡಿ ಬಡಿ ಆಟದ ಮೂಲಕ ತಂಡಕ್ಕೆ ರನ್​​ಗಳ ಸುರಿಮಳೆ ಸುರಿಸಿದ್ದರು. 32 ಎಸೆತಗಳಲ್ಲಿ 44 ರನ್​ಗಳನ್ನು ನೀಶಮ್ ಸಿಡಿಸಿದ್ದರು. ಇದರಲ್ಲಿ ನಾಲ್ಕು ಬೌಂಡರಿ ಎರಡು ಸಿಕ್ಸರ್ ಒಳಗೊಂಡಿತ್ತು. ಇನ್ನೇನು ಪಂದ್ಯವನ್ನು ನ್ಯೂಜಿಲ್ಯಾಂಡ್​ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎನ್ನುವಷ್ಟರಲ್ಲಿ ಧೋನಿ ತಮ್ಮ ಕೈ ಚಳಕ ತೋರಿಸಿದ್ದರು.


ಕೇದರ್​ ಜಾಧವ್​ ಎಸೆತದಲ್ಲಿ ಎಲ್​ಬಿಡಬ್ಲ್ಯೂ ಮನವಿ ಭಾರತದ ಆಟಗಾರರು ಮನವಿ ಸಲ್ಲಿಸಿದ್ದರು. ಇದೇ ವೇಳೆ ನೀಶಮ್ ಚಲನವಲನಗಳನ್ನು ಗಮನಿಸುತ್ತಾ ಅಪೀಲ್ ಮಾಡಿದ್ದ ಧೋನಿ, ನೀಶಮ್​ ಕ್ರೀಸ್​ನಿಂದ ರನ್​ಗಾಗಿ ಇಳಿಯುತ್ತಿದ್ದಂತೆ ಚೆಂಡನ್ನು ವಿಕೆಟ್​ ಎಸೆದು ರನೌಟ್ ಮಾಡಿದ್ದರು.

ಧೋನಿಯ ಈ ಚಾಣಾಕ್ಷ ನಡೆಯಿಂದ ನೀಶಮ್​ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದರು. ಈ ಒಂದು ಥ್ರೋ ಪಂದ್ಯದ ಐದನೇ ಏಕದಿನದ ಗತಿಯನ್ನೇ ಬದಲಿಸುವಂತೆ ಮಾಡಿತು ಎಂದು ಕ್ರಿಕೆಟ್ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಧೋನಿಯ ಚುರುಕುತನಕ್ಕೆ ಮತ್ತೊಮ್ಮೆ ಕ್ರಿಕೆಟ್​ ಜಗತ್ತು ತಲೆ ಬಾಗಿದೆ.

ಇದನ್ನೂ ಓದಿ: VIDEO: ಸಿಡಿಲಬ್ಬರದ ಬ್ಯಾಟಿಂಗ್​ ಮೂಲಕ ಎಬಿಡಿ ದಾಖಲೆ ಸರಿಗಟ್ಟಿದ ಹಾರ್ದಿಕ್ ಪಾಂಡ್ಯ!
First published: