ಅಂತರಾಷ್ಟ್ರೀಯ ಕ್ರಿಕೆಟ್ನಿಂದ ದೂರ ಉಳಿದಿರುವ ಮಹೇಂದ್ರ ಸಿಂಗ್ ಧೋನಿ ಮತ್ತೊಮ್ಮೆ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವುದು ಕಂಡುಬಂದಿದೆ. ಮಹೇಂದ್ರ ಸಿಂಗ್ ಧೋನಿ (MS Dhoni) 2019ರಲ್ಲಿ ಭಾರತಕ್ಕಾಗಿ ಕೊನೆಯ ಪಂದ್ಯವನ್ನು ಆಡಿದ್ದರು. ಆದಾಗ್ಯೂ, ಅವರು ಇನ್ನೂ ಐಪಿಎಲ್ (IPL) ಆಡುತ್ತಿದ್ದಾರೆ. 2023ರಲ್ಲಿ ಅವರು ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡಲಿದ್ದಾರೆ. ಮುಂಬರಲಿರುವ ಐಪಿಎಲ್ಗಾಗಿ ಧೋನಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಇದರ ವಿಡಿಯೋಗಳನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಎಂಎಸ್ ಧೋನಿ ಐಪಿಎಲ್ 2023ಕ್ಕೆ ತಯಾರಿ ನಡೆಸುತ್ತಿದ್ದಾರೆ.
ಅಭ್ಯಾಸ ಆರಂಭಿಸಿದ ಧೋನಿ:
ಮಹೇಂದ್ರ ಸಿಂಗ್ ಧೋನಿ ನೆಟ್ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಅವರು ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅದರಲ್ಲಿಯೂ ಧೋನಿ ಅಭಿಮಾನಿಗಳು ಮತ್ತೆ ಅವರನ್ನು ಮೈದಾನದಲ್ಲಿ ನೋಡಲು ಕಾತುರರಾಗಿದ್ದಾರೆ.
The preparation has started for MS Dhoni ahead of IPL 2023. pic.twitter.com/FUapARmL4P
— Mufaddal Vohra (@mufaddal_vohra) January 19, 2023
ಇದನ್ನೂ ಓದಿ: IPL 2023: ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ಫೈನಲ್ಗೆ ಹೋಗುವುದು ಪಕ್ಕಾ, ಇಲ್ಲಿದೆ ಕಾರಣ
4 ಬಾರಿ ಚಾಂಪಿಯನ್ ಆಗಿದ್ದ ಸಿಎಸ್ಕೆ:
2019 ರಿಂದ ಧೋನಿ ತನ್ನ ತವರು ಮೈದಾನದಲ್ಲಿ ಆಡಿಲ್ಲ. ಏಕೆಂದರೆ 2 ವರ್ಷಗಳ ಸಾಂಕ್ರಾಮಿಕ ಸಮಯದಲ್ಲಿ ಐಪಿಎಲ್ ಅನ್ನು ಭಾರತದ ಹೊರಗೆ ಆಯೋಜಿಸಲಾಗಿತ್ತು. ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2023ರಲ್ಲಿ ಸಿಎಸ್ಕೆ ನಾಯಕರಾಗಿರುತ್ತಾರೆ. ಸಿಎಸ್ಕೆ ಈ ವರ್ಷ ಇಂಗ್ಲೆಂಡ್ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ತನ್ನ ತಂಡಕ್ಕೆ ಸೇರಿಸಿಕೊಂಡಿದ್ದು, ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ತವಕದಲ್ಲಿದೆ.
ಈ ಬಾರಿ ನಂತ್ರ ಧೋನಿ ನಿವೃತ್ತಿ:
ಇನ್ನು, ಧೋನಿ ತವರಿನಲ್ಲಿಯೇ ತನ್ನ ಕೊನೆಯ ಐಪಿಎಲ್ ಪಂದ್ಯವನ್ನು ಆಡುವುದಾಗಿ ಹೇಳಿಕೊಂಡಿದ್ದರು. ಹೀಗಾಗಿ ಈ ಬಾರಿ ಐಪಿಎಲ್ 2023 ಭಾರತದಲ್ಲಿಯೇ ನಡೆಯುತ್ತಿರುವುದರಿಂದ ಈ ಐಪಿಎಲ್ ಬಳಿಕ ಧೋನಿ ನಿವೃತ್ತಿ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಧೋನಿಯನ್ನು ಕೊನೆಯ ಬಾರಿಗೆ ಮೈದಾನದಲ್ಲಿ ನೋಡಬಹುದಾಗಿದೆ. ಹೀಗಾಗಿ ಈ ಬಾರಿ ಐಪಿಎಲ್ ಅನ್ನು ಗೆದ್ದು ಧೋನಿಗೆ ಅದ್ಧೂರಿಯಾಗಿ ಬಿಳ್ಕೊಡಲು ಸಿಎಸ್ಕೆ ಭರ್ಜರಿಯಾಗಿ ಸಿದ್ಧವಾಗಿದೆ.
ಐಪಿಎಲ್ 2023ಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ:
ಮಹೇಂದ್ರ ಸಿಂಗ್ ಧೋನಿ (c), ಡೆವೊನ್ ಕಾನ್ವೇ, ರುತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಭ್ರಾಂಶು ಸೇನಾಪತಿ, ಮೊಯಿನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೈನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ರವೀಂದ್ರ ಜಡೇಜಾ, ತುಷಾರ್ ದೇಶಪಾಂಡೆ, ಪತಿರ್ನಾ ಜಡೇಜಾ, ಮುಖೇಶ್ ದೇಶಪಾಂಡೆ, , ಸಿಮರ್ಜೀತ್ ಸಿಂಗ್, ದೀಪಕ್ ಚಾಹರ್, ಪ್ರಶಾಂತ್ ಸೋಲಂಕಿ, ಮಹೇಶ್ ತೀಕ್ಷಣ, ಭಗತ್ ವರ್ಮಾ, ಅಜಯ್ ಮಂಡಲ್, ಕೈಲ್ ಜೇಮಿಸನ್, ನಿಶಾಂತ್ ಸಿಂಧು, ಶೇಕ್ ರಶೀದ್, ಬೆನ್ ಸ್ಟೋಕ್ಸ್ , ಅಜಿಂಕ್ಯ ರಹಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ