• Home
  • »
  • News
  • »
  • sports
  • »
  • MS Dhoni: ನಾಳೆ ಮಹತ್ವದ ಘೋಷಣೆ ಮಾಡಲಿರುವ ಧೋನಿ, ಕುತೂಹಲ ಹೆಚ್ಚಿಸಿದ MSD ಫೇಸ್​ಬುಕ್ ಪೋಸ್ಟ್!

MS Dhoni: ನಾಳೆ ಮಹತ್ವದ ಘೋಷಣೆ ಮಾಡಲಿರುವ ಧೋನಿ, ಕುತೂಹಲ ಹೆಚ್ಚಿಸಿದ MSD ಫೇಸ್​ಬುಕ್ ಪೋಸ್ಟ್!

ಎಂಎಸ್ ಧೋನಿ

ಎಂಎಸ್ ಧೋನಿ

MS Dhoni: ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಪೋಸ್ಟ್ ಹಾಕುವುದಿಲ್ಲ. ಆದರೆ, ಶನಿವಾರ, ಅವರು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ ಮತ್ತು ವಿಶೇಷ ಸುದ್ದಿಗಾಗಿ ಅಭಿಮಾನಿಗಳೊಂದಿಗೆ ಲೈವ್ ಆಗಿ ಸೇರಲಿದ್ದೇನೆ ಎಂದು ಹೇಳಿದ್ದಾರೆ. ಅಂದಿನಿಂದ, ಐಪಿಎಲ್‌ನಿಂದ ಧೋನಿ ನಿವೃತ್ತಿಯ ಬಗ್ಗೆ ಎಲ್ಲಾ ರೀತಿಯ ಸುದ್ದಿಗಳು ಸಾಮಾಜಿಕ ಮಾಧ್ಯಮದಲ್ಲಿ ಸುತ್ತಲು ಪ್ರಾರಂಭಿಸಿವೆ.

ಮುಂದೆ ಓದಿ ...
  • Share this:

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಅವರ ಜನಪ್ರಿಯತೆ ಎಷ್ಟಿದೆ ಎಂಬುದು ಹೇಳಬೇಕಾದ ವಿಷಯವಲ್ಲ. ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರಬಹುದು. ಆದರೆ, ಅವರು ಇನ್ನೂ ಅಭಿಮಾನಿಗಳ ಹೃದಯದಲ್ಲಿ ಅಜರಾಮರರಾಗಿ ಉಳಿದಿದ್ದಾರೆ. ಆದರೆ ಇತರ ಆಟಗಾರರು ಅಥವಾ ಸೆಲೆಬ್ರಿಟಿಗಳಂತೆ ಧೊನಿ ಹೆಚ್ಚಾಗಿ ಸಾಮಾಜಿಕ ಜಾಲತಾಣವನ್ನು ಬಳಸುವುದಿಲ್ಲ. ಧೋನಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಕಡಿಮೆ ಸಕ್ರಿಯರಾಗಿದ್ದಾರೆ. ಹೀಗಿರುವಾಗ ತಮ್ಮ ಫೇಸ್​ಬುಕ್ ನಲ್ಲಿ (Facebook) ಪೋಸ್ಟ್ ಮಾಡಿ ಲೈವ್ (Live) ಬರುವ ದಿನ, ಸಮಯವನ್ನೂ ತಿಳಿಸಿದ್ದಾರೆ.


ನಾಳೆ ಫೇಸ್​ಬುಕ್​ ಲೈವ್​ ಬರಲಿದ್ದಾರೆ ಧೋನಿ:


ಹೌದು, ಈ ವಿಷಯವನ್ನು ಸ್ವತಃ ಧೋನಿಯೇ ಹಂಚಿಕೊಂಡಿದ್ದಾರೆ. ನಾಳೆ  ಫೇಸ್​ಬುಕ್​ನಲ್ಲಿ ಧೋನಿ ಲೈವ್​ ಬರುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಪೋಸ್ಟ್ ಮಾಡುತ್ತಿದ್ದಂತೆ ಪೋಸ್ಟ್ ಕಾಡ್ಗಿಚ್ಚಿನಂತೆ ವೈರಲ್ ಆಗಿದ್ದು, ಎಲ್ಲರೂ ಸಹ ಧೋನಿ ನಾಳೆ ಐಪಿಎಲ್​ ನಿಂದಲೂ ನಿವೃತ್ತಿ ನೀಡಲಿದ್ದಾರೆಯೇ ಎಂದು ಹೇಳುತ್ತಿದ್ದಾರೆ.  ಧೋನಿ ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದಾರೆ, ಅದರಲ್ಲಿ ಅವರು ಬರೆದಿದ್ದಾರೆ, ನಾನು ಕೆಲವು ರೋಚಕ ಸುದ್ದಿಗಳನ್ನು ಸೆಪ್ಟೆಂಬರ್ 25 ರಂದು ಮಧ್ಯಾಹ್ನ 2 ಗಂಟೆಗೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ನೀವೆಲ್ಲರೂ ಇರುತ್ತೀರಿ ಎಂದು ನಾನು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.




ಈ ಪೋಸ್ಟ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಧೋನಿ ಬಗ್ಗೆ ವಿವಿಧ ಊಹಾಪೋಹಗಳು ಶುರುವಾಗಿವೆ. ಕೆಲವರು ಐಪಿಎಲ್‌ಗೆ ವಿದಾಯ ಹೇಳಲಿದ್ದಾರೆ ಎನ್ನುತ್ತಿದ್ದರೆ ಇನ್ನು ಕೆಲವರು ಧೋನಿ ಟಿ20 ವಿಶ್ವಕಪ್‌ಗೂ ಮೊದಲು ಟೀಮ್ ಇಂಡಿಯಾ ಸೇರುತ್ತಿದ್ದಾರೆ ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಆದರೆ ಇದಕ್ಕೆಲ್ಲಾ ಉತ್ತರ ನಾಳೆ ಮಧ್ಯಾಹ್ನ 2 ಗಂಟೆಗೆ ದೊರಕಲಿದೆ.


ಇದನ್ನೂ ಓದಿ: Jhulan Goswami: ಕ್ರಿಕೆಟ್​ಗೆ ವಿದಾಯ ಘೋಷಿಸಿದ ಚಕ್ಡಾ ಎಕ್ಸ್‌ಪ್ರೆಸ್, ಜೀವನವನ್ನೇ ಬದಲಾಯಿಸಿತ್ತು ಆ ಒಂದು ಪಂದ್ಯ


ಹಠಾತ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ನೀಡಿದ್ದ MSD:


ಧೋನಿ ಅವರ ನಿರ್ಧಾರಗಳಿಂದ ಆಗಾಗ್ಗೆ ಆಶ್ಚರ್ಯ ಪಡಿಸುತ್ತಿರುತ್ತಾರೆ. ಅವರು ಎರಡು ವರ್ಷಗಳ ಹಿಂದೆ ಆಗಸ್ಟ್ 15 ರ ಸಂಜೆ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ವೀಡಿಯೊವನ್ನು ಪೋಸ್ಟ್ ಮಾಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದರು. ಇದಕ್ಕೂ ಮುನ್ನ 2014ರಲ್ಲಿ ಸರಣಿಯ ಮಧ್ಯದಲ್ಲಿ ಟೆಸ್ಟ್ ನಾಯಕತ್ವವನ್ನೂ ತ್ಯಜಿಸಿದ್ದರು.


ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ನಂತರ ಅವರು ಕಳೆದ 2 ವರ್ಷಗಳಿಂದ ಐಪಿಎಲ್ ಆಡುತ್ತಿದ್ದಾರೆ. ಈ ವರ್ಷವೂ ಅವರು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಅವರು ಲೀಗ್ ಆರಂಭಕ್ಕೆ ಎರಡು ದಿನಗಳ ಮೊದಲು CSK ನಾಯಕತ್ವವನ್ನು ತೊರೆದರು. ಅವರ ಸ್ಥಾನದಲ್ಲಿ ರವೀಂದ್ರ ಜಡೇಜಾ ಅವರಿಗೆ ತಂಡದ ನಾಯಕತ್ವ ನೀಡಲಾಗಿತ್ತು. ಆದರೆ ಮದ್ಯಂತರದಲ್ಲಿ ಮತ್ತೆ ಧೋನಿಯೇ ನಾಯಕತ್ವವನ್ನು ವಹಿಸಿಕೊಂಡರು. ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 4 ಬಾರಿ ಐಪಿಎಲ್ ಪ್ರಶಸ್ತಿ ಗೆದ್ದಿದೆ. 2021ರಲ್ಲಿ ಕೊನೆಯ ಬಾರಿಗೆ ತಂಡ ಚಾಂಪಿಯನ್ ಆಗಿತ್ತು.


ಇದನ್ನೂ ಓದಿ: IND vs AUS: ನಾಳೆ ಭಾರತ-ಆಸ್ಟ್ರೇಲಿಯಾ ಅಂತಿಮ ಹಣಾಹಣಿ, ನಿರ್ಣಾಯಕ ಪಂದ್ಯಕ್ಕೆ ಹೇಗಿರಲಿದೆ ಉಭಯ ತಂಡಗಳ ಪ್ಲೇಯಿಂಗ್​ 11


ನಾಳೆ ನಿವೃತ್ತಿ ಘೋಷಿಸಲಿದ್ದಾರಾ ಧೋನಿ?:


ಚೆನ್ನೈನಲ್ಲಿ ಆಡಿದ ನಂತರವೇ ಐಪಿಎಲ್‌ನಿಂದ ನಿವೃತ್ತಿ ಹೊಂದಲು ಬಯಸುವುದಾಗಿ ಕಳೆದ ವರ್ಷ ಹೇಳಿದ್ದರು. ಅಂದಿನಿಂದ ಧೋನಿ 2023 ರ ಐಪಿಎಲ್ ಅನ್ನು ಸಹ ಆಡುತ್ತಾರೆ ಎಂಬುದು ಸ್ಪಷ್ಟವಾಗಿದೆ ಮತ್ತು ಇತ್ತೀಚೆಗೆ ತಂಡದ ಸಿಇಒ ಕಾಶಿ ವಿಶ್ವನಾಥನ್ ಅವರು 2023 ರಲ್ಲಿ ಧೋನಿ ತಂಡದ ನಾಯಕರಾಗುತ್ತಾರೆ ಎಂದು ಹೇಳಿದ್ದರು. ಹೀಗಿರುವಾಗ ಐಪಿಎಲ್‌ನಿಂದ ನಿವೃತ್ತಿ ಘೋಷಿಸಬೇಕು ಎಂದು ಅನಿಸುತ್ತಿಲ್ಲ. ಆದರೆ, ಇದಕ್ಕಾಗಿ ಅಭಿಮಾನಿಗಳ ಜತೆಗೆ ಎಲ್ಲರೂ ಧೋನಿ ಏನು ಘೋಷಣೆ ಮಾಡಲಿದ್ದಾರೆ ಎಂಬುದನ್ನು ನೋಡಲು ಭಾನುವಾರ ಮಧ್ಯಾಹ್ನದವರೆಗೂ ಕಾಯಲೇಬೇಕು.

Published by:shrikrishna bhat
First published: