• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • MS Dhoni: 2 ವರ್ಷಗಳ ನಂತ್ರ ಇನ್ಸ್ಟಾಗ್ರಾಂನಲ್ಲಿ ಫೋಸ್ಟ್​ ಮಾಡಿದ ಧೋನಿ! ಕ್ಯಾಪ್ಟನ್​ ಕೂಲ್​ ವಿಡಿಯೋಗೆ ಫ್ಯಾನ್ಸ್ ಫಿದಾ

MS Dhoni: 2 ವರ್ಷಗಳ ನಂತ್ರ ಇನ್ಸ್ಟಾಗ್ರಾಂನಲ್ಲಿ ಫೋಸ್ಟ್​ ಮಾಡಿದ ಧೋನಿ! ಕ್ಯಾಪ್ಟನ್​ ಕೂಲ್​ ವಿಡಿಯೋಗೆ ಫ್ಯಾನ್ಸ್ ಫಿದಾ

ಧೋನಿ

ಧೋನಿ

MS Dhoni: ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ ಸಾಮಾಜಿಕ ಜಾಲತಾಣ ಬಳಸುವುದು ತೀರಾ ಕಡಿಮೆ. ಅಲ್ಲದೇ ಇದೀಗ ಅವರು ಬರೋಬ್ಬರಿ 2 ವರ್ಷಗಳ ನಂತರ ಇನ್ಸ್ಟಾಗ್ರಾಂನಲ್ಲಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

  • Share this:

ಒಂದೆಡೆ ಬಾರ್ಡರ್ ಗವಾಸ್ಕರ್ ಟ್ರೋಫಿ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದ್ದು, ಸರಣಿ ಮೊದಲ ಪಂದ್ಯವೂ ಆರಂಭವಾಗಿದೆ. ಆದರೆ ಇದರ ನಡುವೆ, ಟೀಂ ಇಂಡಿಯಾದ ಮಾಜಿ ನಾಯಕ ಎಂಎಸ್ ಧೋನಿ (MS Dhoni) ಈ ಚರ್ಚೆಯಿಂದ ದೂರ ಉಳಿದಿದ್ದಾರೆ. ಧೋನಿ ಅವರನ್ನು ವಿಶ್ವದ ಶ್ರೇಷ್ಠ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರು ಟೀಂ ಇಂಡಿಯಾವನ್ನು (Team India) ಮೂರು ICC ಟ್ರೋಫಿ ಗೆದ್ದ ವಿಶ್ವದ ಏಕೈಕ ನಾಯಕ. ಆದರೆ ಈಗ ನಿವೃತ್ತಿಯ ನಂತರ, ಮಹಿ ತಮ್ಮ ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ಅಲ್ಲದೇ ಇದೀಗ ಅವರು ಬರೋಬ್ಬರಿ 2 ವರ್ಷಗಳ ನಂತರ ಇನ್ಸ್ಟಾಗ್ರಾಂನಲ್ಲಿ (Instagram) ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಅಭಿಮಾನಿಗಳು ಧೋನಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.


ಟ್ರ್ಯಾಕ್ಟರ್ ಓಡಿಸಿದ ಧೋನಿ:


ಧೋನಿ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಕಡಿಮೆ ಸಕ್ರಿಯರಾಗಿದ್ದಾರೆ. ಆದಾಗ್ಯೂ, ಅವರ ಪತ್ನಿ ಸಾಕ್ಷಿ ಆಗಾಗ್ಗೆ ಅವರ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಅದೇ ಸಮಯದಲ್ಲಿ, 2 ವರ್ಷಗಳ ನಂತರ, ಧೋನಿ ತಮ್ಮ ಅಧಿಕೃತ Instagram ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಹಿ ತಮ್ಮ ಮತ್ತೊಂದು ಹೊಸ ಅವತಾರದೊಂದಿಗೆ ಕಾಣಿಸಿಕೊಂಡಿದ್ದಾರೆ.









View this post on Instagram






A post shared by M S Dhoni (@mahi7781)





ಮಾಜಿ ನಾಯಕ ಧೋನಿ ತಮ್ಮ ಹೊಲವನ್ನು ಉಳುಮೆ ಮಾಡುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಧೋನಿ ಈ ಹಿಂದೆ 2021ರಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದರು, ಅದರಲ್ಲಿ ಅವರು ತಮ್ಮ ಬೆಳೆಯನ್ನು ತೋರಿಸುತ್ತಿದ್ದರು. ಕ್ರಿಕೆಟ್ ನಂತರ ಮಾಹಿಯ ಹೆಚ್ಚು ಕೃಷಿಯತ್ತ ಒಲವನ್ನು ತೋರಿದ್ದಾರೆ. ಕೆಲವೊಮ್ಮೆ ಅವರು ಐಷಾರಾಮಿ ವಾಹನಗಳೊಂದಿಗೆ ಮತ್ತು ಕೆಲವೊಮ್ಮೆ ಸೈನ್ಯದ ಸಮವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ.


ಇದನ್ನೂ ಓದಿ: KL Rahul Athiya Wedding: ರಾಹುಲ್ ಮದ್ವೆಗೆ ಧೋನಿ ನೀಡಿದ ಬೈಕ್ ಬೆಲೆ ಎಷ್ಟು ಗೊತ್ತಾ? ಇದರ ಸ್ಪೀಡ್ ನೋಡಿದ್ರೆ ತಲೆ ತಿರುಗುತ್ತೆ!


2020ರಲ್ಲಿ ನಿವೃತ್ತಿ:


ಇನ್ನು, ಮಹಿ 15 ಆಗಸ್ಟ್ 2020 ರಂದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಅವರು ಟೀಂ ಇಂಡಿಯಾ ಮಾತ್ರವಲ್ಲದೆ ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 4 ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಈ ಬಾರಿ ಈ ಸೀಸನ್ ಮಾಹಿಯ ಕೊನೆಯ ಸೀಸನ್ ಆಗಬಹುದು ಎಂದು ಹೇಳಲಾಗುತ್ತಿದೆ. ಇದಾದ ನಂತರ ಅವರು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುವುದು ಅನುಮಾನವಾಗಿದೆ .ಇದಕ್ಕಾಗಿ ಮುಂಬರುವ ಐಪಿಎಲ್ ಋತುವಿನಲ್ಲಿ ಧೋನಿಯನ್ನು ಮೈದಾನದಲ್ಲಿ ನೋಡಲು ಅಭಿಮಾನಿಗಳು ತುಂಬಾ ಉತ್ಸುಕರಾಗಿದ್ದಾರೆ. 2023ರ ಐಪಿಎಲ್‌ನಲ್ಲಿ ಮಹಿ ಮತ್ತೊಮ್ಮೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.




ಐಪಿಎಲ್​ 2023ಗಾಗಿ ಅಭ್ಯಾಸ ಆರಂಭಿಸಿರುವ ಧೋನಿ:


ಮಹೇಂದ್ರ ಸಿಂಗ್ ಧೋನಿ ಐಪಿಎಲ್​ 2023ಗಾಗಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ. ಧೋನಿ ಜಾರ್ಖಂಡ್ ರಾಜ್ಯ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಧೋನಿ ಅಭ್ಯಾಸದ ವಿಡಿಯೋಗಳು ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಅದರಲ್ಲಿಯೂ ಧೋನಿ ಅಭಿಮಾನಿಗಳು ಮತ್ತೆ ಅವರನ್ನು ಮೈದಾನದಲ್ಲಿ ನೋಡಲು ಕಾತುರರಾಗಿದ್ದಾರೆ.


ಐಪಿಎಲ್ ಬಗ್ಗೆ ಮಾತನಾಡುತ್ತಾ, ಅವರು ತಮ್ಮ ಐಪಿಎಲ್ ತಂಡ ಚೆನ್ನೈ ಸೂಪರ್ ಕಿಂಗ್ಸ್‌ಗೆ 4 ಬಾರಿ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು 2022ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವವನ್ನು ತೊರೆದರು. ಅವರ ಸ್ಥಾನಕ್ಕೆ ಫ್ರಾಂಚೈಸಿ ಅನುಭವಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅವರನ್ನು ನಾಯಕನನ್ನಾಗಿ ಮಾಡಿತ್ತು. ಆದರೆ 8 ಪಂದ್ಯಗಳ ನಂತರ ಜಡೇಜಾ ನಾಯಕತ್ವದಲ್ಲಿ ತಂಡ ಕಳಪೆ ಪ್ರದರ್ಶನ ನೀಡಿತು. ಇದರಿಂದಾಗಿ ಮತ್ತೊಮ್ಮೆ ಮಹೇಂದ್ರ ಸಿಂಗ್ ಧೋನಿಗೆ ನಾಯಕತ್ವ ನೀಡಲಾಗಿತ್ತು.

Published by:shrikrishna bhat
First published: