ಬೆಂಗಳೂರಿನ 'ಎನ್​ಸಿಎ'ನಲ್ಲಿ ಕಠಿಣ ಅಭ್ಯಾಸ ಆರಂಭಿಸಿದ ಎಂ. ಎಸ್. ಧೋನಿ

news18
Updated:June 19, 2018, 4:52 PM IST
ಬೆಂಗಳೂರಿನ 'ಎನ್​ಸಿಎ'ನಲ್ಲಿ ಕಠಿಣ ಅಭ್ಯಾಸ ಆರಂಭಿಸಿದ ಎಂ. ಎಸ್. ಧೋನಿ
news18
Updated: June 19, 2018, 4:52 PM IST
ನ್ಯೂಸ್​ 18 ಕನ್ನಡ

ಬೆಂಗಳೂರು (ಜೂ. 19): ಇತ್ತೀಚೆಗಷ್ಟೆ ಯೋ ಯೋ ಟೆಸ್ಟ್​ನಲ್ಲಿ ಪಾಲ್ಗೊಂಡಿದ್ದ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರು ಫಿಟ್ನೆಸ್​ ಟೆಸ್ಟ್​ನಲ್ಲಿ ಪಾಸಾಗಿದ್ದರು. ಸದ್ಯ ಮುಂಭರುವ ಪ್ರವಾಸಕ್ಕೆಂದೇ ಎಲ್ಲರಿಗಿಂತ ಮೊದಲು ಧೋನಿ ಅವರು ಗೌಪ್ಯ ಸ್ಥಳದಲ್ಲಿ ಕಠಿಣ ಅಭ್ಯಾಸ ಪ್ರಾರಂಭಿಸಿದ್ದಾರೆ.

ವಿಶ್ವದ ಅತ್ಯುತ್ತಮ ಆಟಗಾರರು ಸವಾಲುಗಳನ್ನು ಎದುರಿಸಲು ಏಕಾಂತದಲ್ಲಿ ಅಭ್ಯಾಸ ಮಾಡುವುದನ್ನು ನೋಡಿದ್ದೇವೆ. ಇದಕ್ಕೆ ಧೋನಿ ಕೂಡ ಹೊರತಾಗಿಲ್ಲ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಧೋನಿ ಅವರು ಬೆಂಗಳೂರಿಗೆ ಬಂದಿಳಿದಿದ್ದು ಎನ್​​​ಸಿಎ ನೆಟ್​ನಲ್ಲಿ ಬೆವರಿಳಿಸುತ್ತಿದ್ದಾರೆ. ವಿಶ್ವದ ಕಠಿಣ ಪಿಚ್​ಗಳನ್ನು ಹೊಂದಿರುವ ಇಂಗ್ಲೆಂಡ್​ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾನೇ ಕಷ್ಟಸಾಧ್ಯ. ಹೀಗಾಗಿ ಇದನ್ನು ಅರಿತಿರುವ ಮಾಹಿ ಕ್ರಿಕೆಟ್​ ದೇವರು ಸಚಿನ್​ ತೆಂಡೂಲ್ಕರ್​ ಹಾದಿ ತುಳಿದಿದ್ದಾರೆ. ಸಚಿನ್ ಅವರು ಕೂಡ ಅಂತರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳುವ ಮೊದಲು ಕೆಲ ವರ್ಷಗಳ ಕಾಲ ಬಾಂದ್ರಾದ ಕುರ್ಲಾ ಪ್ರದೇಶದಲ್ಲಿ ಅಭ್ಯಾಸ ಮಾಡುತ್ತಿದ್ದರು. ಧೋನಿ ಕೂಡ  ಇದೀಗ ಸಚಿನ್​​ರಂತೆ ಬೆಂಗಳೂರಿನಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಭಾರತವು ಜೂನ್ 23ಕ್ಕೆ ಐರ್ಲೆಂಡ್‌ಗೆ ತೆರಳಲಿದ್ದು, ಎರಡು ಟಿ-20 ಪಂದ್ಯಗಳನ್ನು ಆಡಲಿದೆ. ಬಳಿಕ ಅಲ್ಲಿಂದ ಇಂಗ್ಲೆಂಡ್‌ಗೆ ತೆರಳಿ ಜುಲೈ 3ರಿಂದ ಮೂರು ಟಿ-20 ಹಾಗೂ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ.
First published:June 19, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ