ವಿಶ್ವಕಪ್​ 2019ಕ್ಕೆ ಧೋನಿ ಮಾಡಿದ್ರು ಈ ಅಪಾಯಕಾರಿ ಪ್ಲಾನ್​: ನಿವೃತ್ತಿ ಕುರಿತಾದ ಗುಟ್ಟು ರಟ್ಟು


Updated:August 9, 2018, 9:24 PM IST
ವಿಶ್ವಕಪ್​ 2019ಕ್ಕೆ ಧೋನಿ ಮಾಡಿದ್ರು ಈ ಅಪಾಯಕಾರಿ ಪ್ಲಾನ್​: ನಿವೃತ್ತಿ ಕುರಿತಾದ ಗುಟ್ಟು ರಟ್ಟು

Updated: August 9, 2018, 9:24 PM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.09): ಸದ್ಯ ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್​ ನಡುವೆ ಟೆಸ್ಟ್​ ಸೀರೀಸ್​ ನಡೆಯುತ್ತಿದೆ. ಹೀಗಿರುವಾಗ ಎರಡು ವರ್ಷಗಳ ಹಿಂದೆಯೇ ಟೆಸ್ಟ್​ ಪಂದ್ಯಕ್ಕೆ ಗುಡ್​ ಬೈ ಹೇಳಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಇಂಗ್ಲೆಂಡ್​ ಹಾಗೂ ಟೀಂ ಇಂಡಿಯಾ ನಡುವೆ ನಡೆದ ಟಿ 20 ಹಾಗೂ ಏಕದಿನ ಪಂದ್ಯಗ:ಳ ಸೀರೀಸ್​ನಲ್ಲಿ ಪಾಲ್ಗೊಂಡಿದ್ದ ಧೋನಿ, ಭಾರತಕ್ಕೆ ಹಿಂತಿರುಗಿ ಹೆಚ್ಚು ದಿನಗಳಾಗಿಲ್ಲ. ಆದರೆ ಏಕದಿನ ಸೀರೀಸ್​ನ ಕೊನೆಯ ಪಂದ್ಯದಲ್ಲಿ ನಡೆದ ಘಟನೆಯೊಂದು ಚರ್ಚಾ ವಿಷಯವಾಗಿ ಮಾರ್ಪಾಡಾಗಿತ್ತು.

ಪಂದ್ಯದಲ್ಲಿ ಸೋಲನುಭವಿಸಿದ ಬಳಿಕ ಧೋನಿ ಅಂಪಾಯರ್​ ಬಳಿ ತೆರಳಿ ಬಾಲ್​ ಕೇಳಿ ಪಡೆದುಕೊಂಡಿದ್ದರು. ಇದಾದ ಬಳಿಕ ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಗೆ ಧೋನಿ ಏಕದಿನ ಪಂದ್ಯದಿಂದಲೂ ನಿವೃತ್ತಿ ಪಡೆಯುತ್ತಾರಾ ಎಂಬ ಭಯ ಹುಟ್ಟಿತ್ತು. ಆದರೆ ಇದಾದ ಬಳಿಕ ಮಹಿ ಬೇರೆ ಕಾರಣದಿಂದ ಬಾಲ್​ ಪಡೆದುಕೊಂಡಿದ್ದರೆಂಬ ಮಾತುಗಳು ಕೇಳಿ ಬಂದಿದ್ದವು. ಆದರೀಗ ಧೋನಿ ಈ ವಿಚಾರವಾಗಿ ಬಹಿರಂಗವಾಗಿ ಮಾತನಾಡಿರುವ ಧೋನಿ ಸದ್ಯಕ್ಕೆ ತಾನು ನಿವೃತ್ತಿ ಘೋಷಿಸುವುದಿಲ್ಲ. ಬದಲಾಗಿ ತಾನು 2019ರ ವಿಶ್ವಕಪ್​ಗೆ ಪ್ಲಾನ್​ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಮಂಗಳವಾರದಂದು ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಧೋನಿ ತಾನು ಬಾಲ್​ ಪಡೆದಿದ್ದೇಕೆ ಎಂಬುವುದನ್ನು ತಿಳಿಸಿದ್ದಾರೆ. "ಬಾಲ್​ ಯಾಕೆ ಸ್ವಿಂಗ್​ ಆಗುತ್ತಿಲ್ಲ ಎಂದು ನನಗೆ ತಿಳಿದುಕೊಳ್ಳಬೇಕಿತ್ತು. ಬಾಲ್​ನ ಕಂಡೀಷನ್​ ಹೇಗಿದೆ? ಅದು ಯಾಕೆ ರಿವರ್ಸ್​ ಸ್ವಿಂಗ್​ ಆಗುತ್ತಿಲ್ಲ ಎಂದು ತಿಳಿದುಕೊಳ್ಳುವ ಸಲುವಾಗಿ ಅಂಪಾಯರ್​ನಿಂದ ನಾನದನ್ನು ಪಡೆದುಕೊಂಡಿದ್ದೆ. 2019ರ ವಿಶ್ವಕಪ್​ ನಾವು ಇಂಗ್ಲೆಂಡ್​ನಲ್ಲೇ ಆಡಬೇಕಿದೆ. ಈ ಕಾರಣದಿಂದ ನಮಗೆ ಆ ಸೀರೀಸ್​ ಬಹಳ ಮಹತ್ವಪೂರ್ಣವಾಗಿತ್ತು. ಎದುರಾಳಿ ತಂಡಕ್ಕೆ ರಿವರ್ಸ್​ ಸ್ವಿಂಗ್​ ಸಿಗುತ್ತದೆ ಎಂದಾದರೆ ನಮಗೂ ಸಿಗಬೇಕಿತ್ತು. ಇದೇ ಕಾರಣದಿಂದ ಬಾಲ್​ ಕೇಲಿ ಪಡೆದುಕೊಂಡೆ. ನಾನು ಕೇಳಿದ ಕೂಡಲೇ ಅಂಪಾಯರ್​ ನನಗೆ ಬಾಲ್​ ಕೊಟ್ಟರು. ಇದಾದ ಬಳಿಕ ನಾನದನ್ನು ಬೌಲಿಂಗ್​ ಕೋಚ್​ಗೆ ನೀಡಿ ರಿವರ್ಸ್​ ಸ್ವಿಂಗ್​ ಮಾಡಲು ಏನು ಮಾಡಬೇಕೆಂದು ಸಲಹೆ ಪಡೆದುಕೊಂಡೆ" ಎಂದಿದ್ದಾರೆ.

ಧೋನಿ ತಮ್ಮ ಮಾತುಗಳಿಂದ ನಿವೃತ್ತಿ ಪಡೆಯುವುದಿಲ್ಲ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮುಂದಿನ ವರ್ಷ ನಡೆಯಲಿರುವ ವಿಶ್ವಕಪ್​ಗೆ ಸಿದ್ಧತೆಯನ್ನು ನಡೆಸುತ್ತಿರುವುದಾಗಿಯೂ ಹೇಳಿದ್ದಾರೆ. ಈಗಾಗಲೆ ಟೆಸ್ಟ್​ ಕ್ರಿಕೆಟ್​ಗೆ ವಿದಾಯ ಹೇಳಿರುವ ಧೋನಿ ಶೀಘ್ರದಲ್ಲೇ ಏಕದಿನ ಪಂದ್ಯಕ್ಕೂ ಗುಡ್​ ಬೈ ಹೇಳುತ್ತಾರೆ ಎಂಬ ವದಂತಿಗಳು ಹಬ್ಬಿವೆ. ಆದರೀಗ ಈ ಎಲ್ಲಾ ಅನುಮಾನಗಳಿಗೆ ಖುದ್ದು ಧೋನಿಯೇ ತೆರೆ ಎಳೆದಿದ್ದು, ತಾನು ವಿಶ್ವಕಪ್​ಗೂ ಮೊದಲು ನಿವೃತ್ತಿ ಪಡೆಯುವುದಿಲ್ಲ, ಅಲ್ಲದೇ ಇದಕ್ಕಾಗಿ ತಾನು ಈಗಾಗಲೇ ತಯಾರಿ ನಡೆಸುತ್ತಿದ್ದೇನೆಂದು ಸ್ಪಷ್ಟವಾಗಿ ಹೇಳಿದ್ಧಾರೆ. ಎಂ ಎಸ್​ ಧೋನಿಗೆ 37 ವರ್ಷ ವಯಸ್ಸಾಗಿದ್ದು, ಟೀಂ ಇಂಡಿಯಾದಲ್ಲಿರುವ ಅತ್ಯಂತ ಹಿರಿಯ ಆಟಗಾರರಾಗಿದ್ದಾರೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626