• Home
  • »
  • News
  • »
  • sports
  • »
  • MS Dhoni: ಮಹತ್ವದ ಘೋಷಣೆ ಮಾಡಿದ ಧೋನಿ, ವಿಶ್ವಕಪ್​ ಕುರಿತು ಭವಿಷ್ಯ ನುಡಿದ ಕ್ಯಾಪ್ಟನ್​ ಕೂಲ್

MS Dhoni: ಮಹತ್ವದ ಘೋಷಣೆ ಮಾಡಿದ ಧೋನಿ, ವಿಶ್ವಕಪ್​ ಕುರಿತು ಭವಿಷ್ಯ ನುಡಿದ ಕ್ಯಾಪ್ಟನ್​ ಕೂಲ್

ಧೋನಿ

ಧೋನಿ

MS Dhoni: ಧೋನಿ ಲೈವ್​ ಬರುವುದಾಗಿ ಅಭಿಮಾನಿಗಳಿಗೆ ಫೇಸ್​ಬುಕ್​ ಮೂಲಕ ತಿಳಿಸಿದ್ದರು. ಅದರಂತೆ ಇಂದು ಅವರು ಲೈವ್​ ಬರುವ ಮೂಲಕ ಓರಿಯೋ (Oreo) ಬಿಸ್ಕಿಟ್​ ಅನ್ನು ಮೊದಲ ಬಾರಿಗೆ ಭಾರತದಲ್ಲಿ ಲಾಂಚ್​ ಮಾಡಿದ್ದಾರೆ.

  • Share this:

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಕುರಿತು ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ಅವರು ತಮ್ಮ ಕ್ರಿಕೆಟ್​ ಮೂಲಕ ಅಷ್ಟು ಜನಮಾನಸದಲ್ಲಿ ನೆಲೆಸಿದ್ದಾರೆ. ಇಂದು ಧೋನಿ ಲೈವ್ (Live)​ ಬರುವುದಾಗಿ ಅಭಿಮಾನಿಗಳಿಗೆ ಫೇಸ್​ಬುಕ್​ ಮೂಲಕ ತಿಳಿಸಿದ್ದರು. ಅದರಂತೆ ಇಂದು ಅವರು ಲೈವ್​ ಬರುವ ಮೂಲಕ ಓರಿಯೋ (Oreo) ಬಿಸ್ಕಿಟ್​ ಅನ್ನು ಮೊದಲ ಬಾರಿಗೆ ಭಾರತದಲ್ಲಿ ಲಾಂಚ್​ ಮಾಡಿದ್ದಾರೆ. ಅಲ್ಲದೇ ಈ ಬಾರಿ ಭಾರತ ತಂಡವು ಟಿ20 ವಿಶ್ವಕಪ್ (T20 World Cup 2022)​ ಸಹ ಗೆಲ್ಲಲಿದೆ ಎಂದು ಧೋನಿ ಹೇಳಿದ್ದಾರೆ. ಅದಕ್ಕೆ ತಮ್ಮದೇ ರೀತಿಯಲ್ಲಿ ಉದಾಹರಣೆಯನ್ನೂ ಸಹ ನೀಡಿದ್ದಾರೆ.


ಭಾರತ ಈ ಬಾರಿ ವಿಶ್ವಕಪ್​ ಗೆಲ್ಲಲಿದೆ ಎಂದ ಧೋನಿ:


ಇನ್ನು, ಭಾರತ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ ನಲ್ಲಿ ಜಯ ಸಾಧಿಸುವ ಮೂಲಕ ಮತ್ತೊಮ್ಮೆ ವಿಶ್ವಕಪ್​ ಗೆಲ್ಲಲಿದೆ ಎಂದು ಧೋನಿ ಹೇಳಿದ್ದಾರೆ. ಇದಕ್ಕೆ ಉದಾಹರಣೆಯನ್ನು ನೀಡಿದ ಅವರು, 2011ರಲ್ಲಿ ಪ್ರಥಮ ಬಾರಿಗೆ ಓರಿಯೋ ಭಾರತದಲ್ಲಿ ಲಾಂಚ್​ ಆಯಿತು ಆ ವರ್ಷ ನಾವು ಭಾರತ ವಿಶ್ವಕಪ್​ ಗೆದ್ದಿತು. ಅದರಂತೆ ಈ ಬಾರಿಯೂ ಓರಿಯೋ  ಪ್ರಥಮ ಬಾರಿಗೆ ಇಂಡಿಯಾದಲ್ಲಿ ಲಾಂಚ್​ ಆಗುತ್ತಿದೆ ಅಂದರೆ ಈ ಸಲವೂ ಭಾರತ ಟಿ20 ವಿಶ್ವಕಪ್​ ಗೆಲ್ಲಲಿದೆ ಎಂದು ಹೇಳಿದ್ದಾರೆ.



ಲೈವ್​ಗಾಗಿ ಕಾದಿದ್ದ ಲಕ್ಷಾಂತರ ಮಂದಿ:


ಇನ್ನು, ನಿನ್ನೆ ಧೋನಿ ಲೈವ್ಗ ಬರುವುದಾಗಿ ಹೇಳಿಕೊಂಡಿದ್ದರು. ಹೀಗಾಗಿ ಇಂದು ಸರಿಯಾಗಿ 2 ಗಂಟೆಗೆ ಧೋನಿ ಲೈವ್ ಬರುವುದನ್ನು ವೀಕ್ಷಿಸಲು ಲಕ್ಷಾಂತರ ಮಂದಿ ಕಾತುರತೆಯಿಂದ ಕಾಯುತ್ತಿದ್ದರು. ಏನದರೂ ಧೋನಿ ನಿವೃತ್ತಿ ಘೋಷಿಸಲಿದ್ದಾರೆಯೇ ಎಂಬ ಪ್ರಶ್ನೆ ಎಲ್ಲರಲ್ಲಿಯೂ ಕಾಡುತ್ತಿತ್ತು. ಹೀಗಾಗಿ ಲೈವ್​ ಅನ್ನು ಸುಮಾರು 100K ಗೂ ಹೆಚ್ಚಿನ ಜನ ಧೋನಿ ಅವರ ಲೈವ್​ ಅನ್ನು  ವೀಕ್ಷಿಸುತ್ತಿದ್ದರು. ಇದು ಓರಿಯೋ ಕಂಪನಿಗೆ ಒಂದೊಳ್ಳೆ ಜಾಹೀರಾತು ಆಯಿತೆಂದು ಜನ ಸಾಮಾಜಿಕ ಜಾಲತಾಣದಲ್ಲಿ ಹೇಳುತ್ತಿದ್ದಾರೆ. ಈ ಮೂಲಕ ಅವರು BringBack2011 ಪ್ರಚಾರವನ್ನು ಆರಂಭಿಸಿದ್ದಾರೆ.


ಇದನ್ನೂ ಓದಿ: IND vs AUS: ಇಂದು ಭಾರತ-ಆಸ್ಟ್ರೇಲಿಯಾ 3ನೇ ಟಿ20; ಹೇಗಿದೆ ಪಿಚ್​ ರಿಪೋರ್ಟ್? ಇಲ್ಲಿದೆ ಪ್ಲೇಯಿಂಗ್​ 11 ಡಿಟೇಲ್ಸ್


ಜೆರ್ಸಿ ತೋರಿಸಲು ಬಿಡದ ಕಂಪನಿ:


ಇನ್ನು, ಧೋನಿ ಓರಿಯೋ ಜೊತೆಗಿನ ಜೆರ್ಸಿಯನ್ನು ಪ್ರತಿಕಾಗೋಷ್ಠಿಯಲ್ಲಿ ರಿವೀಲ್​ ಮಾಡಲು ಕಂನಿಯು ನಿರಾಕರಿಸಿದೆ. ಜೆರ್ಸಿಯನ್ನು ತೋರಿಸದಂತೆ ಲೈವ್​ ವೇಳೆ ಹೇಳಲಾಯಿತು. ಇದಕ್ಕೆ ಧೋನಿ ಸಹ ಸಖತ್​ ಆಗಿ ಕೌಂಟರ್​ ನೀಡುವಂತೆ ಹೇರ್​ಸ್ಟೈಲ್​ ಆದರೂ ತೋರಿಸಬಹುದೆ ಎಂದು ಕೇಳುವ ಮೂಲಕ ನೆರೆದವರಿಗೆ ತಮ್ಮ ಓರಿಯೋ ಜಾಹೀರಾತಿಗಾಗಿ ಮಾಡಿರುವ ಹೊಸ ಹೇರ್​ಸ್ಟೈಲ್​ ಅನ್ನು ಪ್ರದರ್ಶಿಸಿದರು. ಒಟ್ಟಾರೆಯಾಗಿ ಧೋನಿಯು ಲೈವ್​ ಬರುವುದಕ್ಕಾಗಿ ಅವರ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು.


ಇದನ್ನೂ ಓದಿ: T20 World Cup 2007: ಆ ಇತಿಹಾಸಕ್ಕೆ ಇಂದು 15 ವರ್ಷ, ಟಿ20 ಲೋಕದ ರಾಜರಾಗಿ ಮೆರೆದಿದ್ದ ಧೋನಿ ಯುವ ಬ್ರಿಗೇಡ್


ನಿವೃತ್ತಿ ಘೊಷಿಸದ್ದಕ್ಕೆ ನಿಟ್ಟುಸಿರು ಬಿಟ್ಟ ಫ್ಯಾನ್ಸ್:


ಇನ್ನು, ನಿನ್ನೆಯಿಂದ ಧೋನಿ ಐಪಿಎಲ್​ಗೂ ವಿದಾಯ ಹೇಳಲು ಈ ಲೈವ್​ ಬರುತ್ತಿದ್ದಾರೆ ಎಂಬ ಮಾತುಗಳು ಕೇಲಿಬರುತ್ತಿತ್ತು. ಆದರೆ ಇದೀಗ ಈ ಎಲ್ಲಾ ಊಹಾಪೋಹಗಳಿಗೂ ಅಂತಿಮವಾಗಿ ತೆರೆಬಿದ್ದಿದೆ. ಈ ಮೂಲಕ ಅವರು ಈ ಬಾರಿ ಐಪಿಎಲ್ ಆಡುವುದು ಪಕ್ಕಾ ಆಗಿದೆ. ಅಲ್ಲದೇ ಅವರ ಅಭಿಮಾನಿಗಳೂ ಸಹ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ತಮ್ಮ ಮೆಚ್ಚಿನ ಆಟಗಾರನನ್ನು ಇನ್ನೊಂದು ಸೀಸನ್​ನಲ್ಲಿ ಮೈದಾನದಲ್ಲಿ ನೋಡಬಹುದು ಎಂಬ ಸಂತಸದಲ್ಲಿದ್ದಾರೆ.

Published by:shrikrishna bhat
First published: