'ಧೋನಿಯಂತವರು 30-40 ವರ್ಷಗಳಲ್ಲಿ ಒಮ್ಮ ಮಾತ್ರ ಬರಲು ಸಾಧ್ಯ': ಟೀಂ ಇಂಡಿಯಾ ಕೋಚ್

ಧೋನಿ ಅವರಲ್ಲಿ ಈಗ 2008 ಅಥವಾ 2011ರ ಖದರ್ ಇಲ್ಲದಿರಬಹುದು. ಆದರೆ, ಅವರಲ್ಲಿ ಅಪಾರ ಅನುಭವದ ಸಂಪತ್ತಿದೆ. ಅದನ್ನು ಮಾರಲು ಅಥವಾ ಕೊಂಡುಕೊಳ್ಳಲು ಅಸಾಧ್ಯ- ರವಿ ಶಾಸ್ತ್ರಿ

Vinay Bhat | news18
Updated:February 7, 2019, 9:40 PM IST
'ಧೋನಿಯಂತವರು 30-40 ವರ್ಷಗಳಲ್ಲಿ ಒಮ್ಮ ಮಾತ್ರ ಬರಲು ಸಾಧ್ಯ': ಟೀಂ ಇಂಡಿಯಾ ಕೋಚ್
ರವಿ ಶಾಸ್ತ್ರಿ ಹಾಗೂ ಎಂ ಎಸ್ ಧೋನಿ
Vinay Bhat | news18
Updated: February 7, 2019, 9:40 PM IST
'ಮಹೇಂದ್ರ ಸಿಂಗ್ ಧೋನಿಯಂತಹ ವ್ಯಕ್ತಿಗಳು 30-40 ವರ್ಷಗಳಲ್ಲಿ ಒಮ್ಮೆ ಮಾತ್ರ ಬರಲು ಸಾಧ್ಯ. ಧೋನಿ ಒಬ್ಬ ಅತ್ಯುತ್ತಮ ಬ್ಯಾಟ್ಸ್​ಮನ್​​. ನಮಗಾಗಿ ಅವರು ಪಂದ್ಯವನ್ನು ಫಿನಿಶ್ ಮಾಡುತ್ತಾರೆ' ಎಂದು ಭಾರತ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.

'ಧೋನಿ ಅವರಲ್ಲಿ ಈಗ 2008 ಅಥವಾ 2011ರ ಖದರ್ ಇಲ್ಲದಿರಬಹುದು. ಆದರೆ, ಅವರಲ್ಲಿ ಅಪಾರ ಅನುಭವದ ಸಂಪತ್ತಿದೆ. ಅದನ್ನು ಮಾರಲು ಅಥವಾ ಕೊಂಡುಕೊಳ್ಳಲು ಅಸಾಧ್ಯ. ಧೋನಿಯನ್ನು ಟೀಕೆ ಮಾಡುವ ಹಂತಕ್ಕೆ ಇಲ್ಲಿ ಯಾರು ಬೆಳೆದಿಲ್ಲ. ಸಚಿನ್ ತೆಂಡೂಲ್ಕರ್, ಕಪಿಲ್ ದೇವ್ ಹಾಗೂ ಸುನಿಲ್ ಗವಾಸ್ಕರ್​​ಗೆ ಧೋನಿ ಸಮಾನ'.

'ಧೋನಿ ಈವರೆಗೆ ಯಾವ ಟ್ರೋಫಿ ಗೆದ್ದಿಲ್ಲ ಹೇಳಿ. ಎಲ್ಲವನ್ನು ಅರಿದು ಕುಡಿದಂತಹ ವ್ಯಕ್ತಿ ಅವರು. ಕೊನೆಯ ಏಕದಿನ ಪಂದ್ಯದಲ್ಲಿ ಜೇಮ್ಸ್​ ನೀಶಂ ರನೌಟ್ ಆದ ಪರಿಯನ್ನೆ ನೋಡಬಹುದು. ಎಲ್ಲರು ಎಲ್​​ಬಿಡಬ್ಲ್ಯು ಔಟ್​​ಗಾಗಿ ಮನವಿ ಮಾಡುತ್ತಿದ್ದರೆ, ಇತ್ತ ಧೋನಿ ಕ್ಷಣರ್ಧದಲ್ಲಿ ರನೌಟ್ ಮಾಡಿಬಿಟ್ಟರು. ಇದು ಪಂದ್ಯದ ಗತಿಯನ್ನೇ ಬದಲಾಯಿಸಿತು.'

ಇದನ್ನೂ ಓದಿ: ಕೇವಲ 1 ಎಸೆತದಲ್ಲಿ ಬರೋಬ್ಬರಿ 17 ರನ್ ನೀಡಿದ ಬೌಲರ್: ಹೇಗೆ ಇಲ್ಲಿದೆ ವಿಡಿಯೋ ನೋಡಿ

'ಧೋನಿ ಒಬ್ಬ ಅತ್ಯುತ್ತಮ ವಿಕೆಟ್ ಕೀಪರ್. ಈಗಲೂ ವಿಕೆಟ್ ಹಿಂದೆ ನಿಂತು ಬೌಲರ್​ಗಳಿಗೆ ಸಲಹೆ ನೀಡುವುದು, ಪೀಲ್ಡ್​ ಸೆಟ್ ಮಾಡುತ್ತಿರುತ್ತಾರೆ. ಇಂತಹ ಗುಣ ಎಲ್ಲರಲ್ಲು ಇರಲಾರದು. ಮುಂಬರುವ ವಿಶ್ವಕಪ್​​​ನಲ್ಲಿ ಧೋನಿಯೆ ಪ್ರಮುಖ ಕೇಂದ್ರ ಬಿಂದು. ಧೋನಿ ಬಗ್ಗೆ ಕಾಮೆಂಟು ಮಾಡುವ ಮುನ್ನ ಯೋಚಿಸಿ ಮಾತನಾಡಿ' ಎಂದು ಶಾಸ್ತ್ರಿ ಹೇಳಿದ್ದಾರೆ.

First published:February 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...