• ಹೋಂ
  • »
  • ನ್ಯೂಸ್
  • »
  • ಕ್ರೀಡೆ
  • »
  • MS Dhoni: ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ ಧೋನಿ, ಚೆಪಾಕ್​ನಲ್ಲೇ ಮುಗಿದು ಹೋಯ್ತಾ 'ತಲಾ' ಐಪಿಎಲ್​ ಕೆರಿಯರ್​?

MS Dhoni: ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ನೀಡಿದ ಧೋನಿ, ಚೆಪಾಕ್​ನಲ್ಲೇ ಮುಗಿದು ಹೋಯ್ತಾ 'ತಲಾ' ಐಪಿಎಲ್​ ಕೆರಿಯರ್​?

ಎಂಎಸ್​ ಧೋನಿ

ಎಂಎಸ್​ ಧೋನಿ

MS Dhoni: ಸುನೀಲ್ ಗವಾಸ್ಕರ್ ಮೈದಾನಕ್ಕಿಳಿದು ಧೋನಿಯನ್ನು ಅಪ್ಪಿಕೊಂಡ ರೀತಿ ಮಹಿ ನಿವೃತ್ತಿಯ ಮಾತಿಗೆ ಮತ್ತಷ್ಟು ತೂಕ ನೀಡಿದೆ.

  • Share this:

ಚೆನ್ನೈನಲ್ಲಿ ಎಂಎಂ ಧೋನಿಯನ್ನು ಎಷ್ಟು ಇಷ್ಟಪಡುತ್ತಾರೆ ಎಂಬುದಕ್ಕೆ ಭಾನುವಾರ ಮತ್ತೊಮ್ಮೆ ಒಂದು ಉದಾಹರಣೆ ಕಂಡುಬಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ನಂತರ ಧೋನಿ ಮಾತನಾಡಲು ಬಂದಾಗ ಸಂಪೂರ್ಣ ಸ್ಟೇಡಿಯಂ ಧೋನಿ ಜಪ ಮಾಡುತ್ತಿತ್ತು. ಇದಕ್ಕಾಗಿ ಬಳೀಕ ಧೋನಿ ಇಡೀ ಕ್ರೀಡಾಂಗಣವನ್ನು ಸುತ್ತಿ ಪ್ರೇಕ್ಷಕರಿಗೆ ಧನ್ಯವಾದ ಹೇಳಿದರು. ಅಷ್ಟೇ ಅಲ್ಲ, ಭಾರತದ ಮಾಜಿ ದಿಗ್ಗಜ ಸುನಿಲ್ ಗವಾಸ್ಕರ್ ಸ್ವತಃ ಮೈದಾನಕ್ಕೆ ಇಳಿದು ತಮ್ಮ ಶರ್ಟ್ ಮೇಲೆ ಧೋನಿ ಸಹಿಯನ್ನು ತೆಗೆದುಕೊಂಡರು. ಇದಾದ ಬಳಿಕ ಇದು ಧೋನಿ ಅವರ ತವರು ನೆಲದಲ್ಲಿ ವಿದಾಯದ ಪಂದ್ಯವೇ ಎಂಬ ಪ್ರಶ್ನೆಯನ್ನು ಅಭಿಮಾನಿಗಳು ಹುಟ್ಟು ಹಾಕುತ್ತಿದೆ. ಕೆಕೆಆರ್ ಪಂದ್ಯದ ನಂತರ, 41 ವರ್ಷದ ಮಹೇಂದ್ರ ಸಿಂಗ್ ಧೋನಿ ಮೊಣಕಾಲಿನ ಗಾಯದಿಂದ ಬಳಲುತ್ತಿದ್ದಾರೆ.


ಅಭಿಮಾನಿಗಳಿಗೆ ಗಿಫ್ಟ್ ನೀಡಿದ ಮಹಿ:


ಇದು ಐಪಿಎಲ್ 2023ರ ಲೀಗ್ ಸುತ್ತಿನ ತವರಿನಲ್ಲಿ ಸಿಎಸ್‌ಕೆಯ ಕೊನೆಯ ಪಂದ್ಯವಾಗಿತ್ತು. ಆದಾಗ್ಯೂ, ಚೆನ್ನೈ ಸೂಪರ್ ಕಿಂಗ್ಸ್ ಪ್ಲೇಆಫ್ ತಲುಪಿದರೆ, ಅವರು ಮತ್ತೊಮ್ಮೆ ಚೆಪಾಕ್‌ನಲ್ಲಿ ಆಡುವ ಅವಕಾಶವನ್ನು ಪಡೆಯಬಹುದು.  ಅಲ್ಲದೇ ಧೋನಿ ಟೆನಿಸ್ ಚೆಂಡನ್ನು ಸಹಿ ಮಾಡಿ ಪ್ರೇಕ್ಷಕರ ಕಡೆಗೆ ಎಸೆದರು. ಈ ಮೈದಾನದಲ್ಲಿ ಇದು ಧೋನಿ ಅವರ ಕೊನೆಯ ಪಂದ್ಯ ಎಂದು ಅಭಿಮಾನಿಗಳು ಈಗ ಊಹಿಸುತ್ತಿದ್ದಾರೆ. ಧೋನಿ ಇಡೀ ಮೈದಾನವನ್ನು ಸುತ್ತಿ ಅಭಿಮಾನಿಗಳನ್ನು ಭೇಟಿಯಾದರು.



ಥ್ಯಾಂಕ್ಯೂ ಎಂ.ಎಸ್​ ಧೋನಿ:


ಈ ಬಾರಿಯ ಐಪಿಎಲ್‌ನಲ್ಲಿ ಹೆಚ್ಚು ಚರ್ಚೆಯಾಗುತ್ತಿರುವ ವಿಷಯವೆಂದರೆ ಯಾವ ತಂಡ ಗೆಲ್ಲುತ್ತದೆ ಎಂಬುದು ಅಲ್ಲ. ಬದಲಿಗೆ ಎಂಎಸ್ ಧೋನಿ ನಿಜವಾಗಿಯೂ ನಿವೃತ್ತಿ ನೀಡುತ್ತಾರಾ ಎಂಬ ಮಾತುಗಳು. ಚೆನ್ನೈ ಎಲ್ಲೆಲ್ಲಿ ಐಪಿಎಲ್ ಪಂದ್ಯಗಳು ನಡೆಯಿತೋ ಧೋನಿಯನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು. ಸಿಎಸ್‌ಕೆ ಸಿಇಒ ಹೇಳಿಕೆಯ ನಂತರ, ಅಭಿಮಾನಿಗಳು ಧೋನಿಯ ಫೋಟೋಗಳು ಮತ್ತು ವಿಶೇಷ ನೆನಪುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಮತ್ತು 'ಧನ್ಯವಾದ ಎಂಎಸ್ ಧೋನಿ' ಎಂದು ಬರೆಯುತ್ತಿದ್ದಾರೆ. ಸದ್ಯ, 'ಧನ್ಯವಾದ ಎಂಎಸ್ ಧೋನಿ' ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.



ನಿವೃತ್ತಿ ಹೊಂದುತ್ತಾರಾ ಧೋನಿ?:


ಐಪಿಎಲ್ 2023 ರಲ್ಲಿ ಎಂಎಸ್ ಧೋನಿ ಪಂದ್ಯಗಳನ್ನು ಆಡಲು ಹೋದಲ್ಲೆಲ್ಲಾ ಅಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಬಂದಿದ್ದು ಎಲ್ಲರಿಗೂ ತಿಳಿಸ ವಿಷಯ. ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದ ಪಂದ್ಯದ ನಂತರ ಅವರೇ ಹೇಳಿದ್ದು, ಅಭಿಮಾನಿಗಳು ತಮ್ಮನ್ನು ಬೀಳ್ಕೊಡಲು ಬಂದಿದ್ದರು ಎಂದು. ಮುಂದಿನ ಸೀಸನ್‌ನಲ್ಲಿ ಕಣಕ್ಕಿಳಿಯುವ ಬಗ್ಗೆ ಸ್ವತಃ ಮಹಿ ಹೇಳಿಲ್ಲ. ಹಠಾತ್ತನೆ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳುವವರಲ್ಲಿ ಅವರು ಹೆಸರುವಾಸಿಯಾಗಿದ್ದಾರೆ. 2019ರ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೋಲಿನ ನಂತರ ಅವರು 2020ರಲ್ಲಿ ಹಠಾತ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು.


ಇದನ್ನೂ ಓದಿ: IPL Playoff Scenario: ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಭರ್ಜರಿ ಏರಿಕೆ, ಇಲ್ಲಿದೆ RCB ಪ್ಲೇಆಫ್​ ಲೆಕ್ಕಾಚಾರ


ಇಂಡಿಯನ್ ಪ್ರೀಮಿಯರ್ ಲೀಗ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನೊಂದಿಗೆ ಎಂಎಸ್ ಧೋನಿಯ ವೀಡಿಯೊವನ್ನು ಹಂಚಿಕೊಂಡಿದೆ. ಆದರೆ ಆಟಗಾರನು ಇಡೀ ಮೈದಾನದಲ್ಲಿ ತಿರುಗಾಡುತ್ತಾನೆ ಮತ್ತು ನಿವೃತ್ತಿಯ ಮೊದಲು ಪ್ರೇಕ್ಷಕರನ್ನು ಭೇಟಿಯಾಗುತ್ತಾನೆ ಎಂದು ಬರೆದುಕೊಂಡಿದೆ. ಈ ವೀಡಿಯೋ ಕುರಿತು ಪ್ರತಿಕ್ರಿಯಿಸಿದ ಒಬ್ಬರು ಧೋನಿ ತಮ್ಮ ಕೊನೆಯ ಪಂದ್ಯವನ್ನು ಚೆಪಾಕ್‌ನಲ್ಲಿ ಆಡಿದ್ದಾರೆ ಎಂದು ಬರೆದಿದ್ದಾರೆ. ಇದೇ ರೀತಿಯ ಇನ್ನೂ ಅನೇಕ ಕಾಮೆಂಟ್‌ಗಳು ಬಂದಿವೆ.




ಸುರೇಶ ರೈನಾ ಮತ್ತು ರಾಬಿನ್ ಉತ್ತಪ್ಪ ಅವರಂತಹ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಆಡಿದ ಅನೇಕ ಅನುಭವಿಗಳು ಮಹೇಂದ್ರ ಸಿಂಗ್ ಧೋನಿ ಐಪಿಎಲ್‌ನ ಇನ್ನೂ ಒಂದು ಅಥವಾ ಎರಡು ಸೀಸನ್‌ಗಳನ್ನು ಆಡಬಹುದು ಎಂದು ಹೇಳಿದ್ದಾರೆ. ಆದರೆ ಸುನೀಲ್ ಗವಾಸ್ಕರ್ ಮೈದಾನಕ್ಕಿಳಿದು ಧೋನಿಯನ್ನು ಅಪ್ಪಿಕೊಂಡ ರೀತಿ ಮಹಿ ನಿವೃತ್ತಿಯ ಮಾತಿಗೆ ಮತ್ತಷ್ಟು ತೂಕ ನೀಡಿದೆ.


ಮಹೇಂದ್ರ ಸಿಂಗ್​ ಧೋನಿ

top videos


    ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕಿದ್ದರೆ ಚೆನ್ನೈ ಸೂಪರ್ ಕಿಂಗ್ಸ್‌ನೊಂದಿಗೆ ಮಾತ್ರ ಆಡುತ್ತಿದ್ದೆ, ಆದ್ದರಿಂದ ಧೋನಿಯಂತಹ ದೊಡ್ಡ ನಾಯಕನಿಗೆ ಅವರನ್ನು ಅರ್ಥಮಾಡಿಕೊಳ್ಳಲು ಅವಕಾಶ ಸಿಗುತ್ತಿತ್ತು ಎಂದು ಗವಾಸ್ಕರ್ ಈ ಹಿಂದೆ ಹೇಳಿದ್ದರು. ಧೋನಿಯಂತಹ ಆಟಗಾರರು 100 ವರ್ಷಕ್ಕೊಮ್ಮೆ ಬರುತ್ತಾರೆ ಎಂದು ಗವಾಸ್ಕರ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    First published: