ವಿಡಿಯೋ ವೈರಲ್: ಚಹಾಲ್​​ಗೆ ಕೈ ಮುಗಿಯುತ್ತ ಧೋನಿ ಪೆವಿಲಿಯನ್​ನತ್ತ ಓಡಿದ್ದೇಕೆ?

ಪಂದ್ಯ ಮುಗಿದ ಬಳಿಕ ಟ್ರೋಫಿ ನೀಡುವ ಸಮಾರಂಭದಲ್ಲಿ ಆಟಗಾರರೆಲ್ಲ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆದರೆ, ಇತ್ತ ಧೋನಿ ಅವರು ಚಹಾಲ್​​ರಿಂದ ತಪ್ಪಿಸಿಕೊಂಡು ಪೆವಿಲಿಯನ್​​ನತ್ತ ಓಡಿದ್ದು, ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

Vinay Bhat | news18
Updated:February 4, 2019, 6:57 PM IST
ವಿಡಿಯೋ ವೈರಲ್: ಚಹಾಲ್​​ಗೆ ಕೈ ಮುಗಿಯುತ್ತ ಧೋನಿ ಪೆವಿಲಿಯನ್​ನತ್ತ ಓಡಿದ್ದೇಕೆ?
ಎಂ ಎಸ್ ಧೋನಿ ಹಾಗೂ ಯಜುವೇಂದ್ರ ಚಹಾಲ್ (pic: twiiter)
Vinay Bhat | news18
Updated: February 4, 2019, 6:57 PM IST
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ 4-1 ರಿಂದ ಗೆದ್ದು ಸರಣಿ ತನ್ನ ಕೈವಶ ಮಾಡಿಕೊಂಡಿದೆ. ಇನ್ನೇನಿದ್ದರು ಮೂರು ಪಂದ್ಯಗಳ ಟಿ-20 ಸರಣಿ ಮೇಲೆ ಕಣ್ಣಿಟ್ಟಿದೆ.

ಸದ್ಯ ಏಕದಿನ ಸರಣಿ ಗೆದ್ದ ಖುಯಷಿಯಲ್ಲಿರುವ ಟೀಂ ಇಂಡಿಯಾದ ಹಲವು ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ. ಅದರಂತೆ ಪಂದ್ಯ ಮುಗಿದ ಬಳಿಕ ಟ್ರೋಫಿ ನೀಡುವ ಸಮಾರಂಭದಲ್ಲಿ ಆಟಗಾರರೆಲ್ಲ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆದರೆ, ಇತ್ತ ಧೋನಿ ಅವರು ಯಜುವೇಂದ್ರ ಚಹಾಲ್​​ರಿಂದ ತಪ್ಪಿಸಿಕೊಂಡು ಪೆವಿಲಿಯನ್​​ನತ್ತ ಓಡಿದ್ದು, ಈ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಟೀಂ ಇಂಡಿಯಾದ ಪ್ರತಿ ಪಂದ್ಯ ಮುಗಿದ ನಂತರ ಚಹಾಲ್ ಅವರು 'ಚಹಾಲ್ ಟಿವಿ' ಎಂಬ ಹೆಸರಿನಲ್ಲಿ ಆಟಗಾರರ ಜೊತೆ ತಮಾಷೆಯಾಗಿ ಸಂದರ್ಶನ ನಡೆಸುತ್ತಾರೆ. ಇದನ್ನು ಬಿಸಿಸಿಐ ಪ್ರತಿಬಾರಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುತ್ತದೆ.

ಇದನ್ನೂ ಓದಿ: ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ ಧೋನಿ ಬಗ್ಗೆ ಐಸಿಸಿ ಮಾಡಿದ ಆ ಒಂದು ಟ್ವೀಟ್

ಅದರಂತೆ ನಿನ್ನೆ 5ನೇ ಏಕದಿನ ಪಂದ್ಯ ಮುಗಿದ ಬಳಿಕ ಚಹಾಲ್ ಅವರು ಧೋನಿಯನ್ನು ಸಂದರ್ಶನಕ್ಕೆಂದು ಕರೆಯುತ್ತಾರೆ. ಆದರೆ, ಇದಕ್ಕೊಪ್ಪದ ಧೋನಿ ನೀನು ಮಾಡುವ ಸಂದರ್ಶನವೂ ಬೇಡ, ನೀನೂ ಬೇಡ ಎಂದು ಮೈದಾನದಲ್ಲಿ ಚಹಾಲ್​​ಗೆ ಕೈ ಮುಗಿಯುತ್ತ ತಪ್ಪಿಸಿಕೊಂಡು ಓಡಿದ್ದಾರೆ. ಈ ವಿಡಿಯೋ ಸದ್ಯ ಇಂಟರ್​ನೆಟ್​​ನಲ್ಲಿ ಸಖತ್ ವೈರಲ್ ಆಗುತ್ತಿದೆ.

 ನಿನ್ನೆಯ ಐದನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ಅಂಬಟಿ ರಾಯುಡು ಅವರ 90, ಹಾರ್ದಿಕ್ ಪಾಂಡ್ಯರ ಬಿರುಸಿನ 45 ರನ್​ಗಳ ನೆರವಿನಿಂದ 252 ರನ್ ಕಲೆಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 217 ರನ್​ಗೆ ಆಲೌಟ್ ಆಗಿ ಸೋಲುಪ್ಪಿಕೊಂಡಿತು. ಈ ಮೂಲಕ ಭಾರತ 35 ರನ್​ಗಳ ಜಯ ಸಾಧಿಸಿ ನ್ಯೂಜಿಲೆಂಡ್ ನೆಲದಲ್ಲಿ ಸರಣಿ ಗೆದ್ದ ಸಾಧನೆ ಮಾಡಿದೆ.

 First published:February 4, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...