ಚಿತ್ರೀಕರಣಕ್ಕಾಗಿ ಬುಲೆಟ್ ಏರಿ ಶಿಮ್ಲಾಕ್ಕೆ ತೆರಳಿದ ಧೋನಿ

news18
Updated:August 28, 2018, 5:16 PM IST
ಚಿತ್ರೀಕರಣಕ್ಕಾಗಿ ಬುಲೆಟ್ ಏರಿ ಶಿಮ್ಲಾಕ್ಕೆ ತೆರಳಿದ ಧೋನಿ
news18
Updated: August 28, 2018, 5:16 PM IST
ನ್ಯೂಸ್ 18 ಕನ್ನಡ

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಮುಗಿದ ಬಳಿಕ ಟೀಂ ಇಂಡಿಯಾ ಮಾಜಿ ನಾಯಕ ಎಂ ಎಸ್ ಧೋನಿ ಅವರು ಸದ್ಯ ಜಾಲಿ ಮೂಡ್​​ನಲ್ಲಿದ್ದಾರೆ. ಈ ಮಧ್ಯೆ ಧೋನಿ ತನ್ನ ನೆಚ್ಚಿನ ರಾಯಲ್ ಎನ್​ಫೀಲ್ಡ್ ಬೈಕ್ ಏರಿ ಹಿಮಾಚಲ ಪ್ರದೇಶದ ಶಿಮ್ಲಾಕ್ಕೆ ಪ್ರಯಾಣ ಬೆಳೆಸಿದ್ದಾರೆ.ಧೋನಿ ಅವರು ಜಾಹೀರಾತಿನ ಚಿತ್ರೀಕರಣಕ್ಕಾಗಿ ಶಿಮ್ಲಾಕ್ಕೆ ಭೇಟಿ ನೀಡಿದ್ದು, ದಾರಿ ಮಧ್ಯೆ ಬೈಕ್​ ರೈಡ್ ಮಾಡುತ್ತಿರುವ ಫೋಟೋ ಹಾಗೂ ವಿಡಿಯೋ ವೈರಲ್ ಆಗುತ್ತಿದೆ. ಕಾಫಿ ಬಣ್ಣದ ಜಾಕೆಟ್, ಜೀನ್ಸ್ ಹಾಗೂ ಹೆಲ್ಮೆಟ್ ಹಾಕಿ ಕೆಂಪು ಬಣ್ಣದ ಬುಲೆಟ್​​ನಲ್ಲಿ ಧೋನಿಯ ಬೈಕ್ ರೈಡಿಂಗ್​ನ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.

ಸೆ. 15ರಿಂದ ಆರಂಭವಾಗುವ ಏಷ್ಯಾ ಕಪ್​​​ನಲ್ಲಿ ಧೋನಿ ಅವರು ಮತ್ತೆ ಟೀಂ ಇಂಡಿಯಾ ಸೇರಲಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ