MS Dhoni: ನನಗೆ ಅವಕಾಶಗಳು ದೊರಕದಿರಲು ಧೋನಿಯೇ ಕಾರಣ , ಕ್ಯಾಪ್ಟನ್​ ಕೂಲ್ ವಿರುದ್ಧ ಮಾಜಿ CSK ಆಟಗಾರನ ಗಂಭೀರ ಆರೋಪ

MS Dhoni: ಅಂತರಾಷ್ಟ್ರೀಯ ಪಂದ್ಯವನ್ನೂ ಆಡದ ಈಶ್ವರ್ ಪಾಂಡೆ ತಮ್ಮ ಕ್ರಿಕೆಟ್​ ವೃತ್ತಿ ಜೀವನಕ್ಕೆ ಇದೀಗ ನಿವೃತ್ತಿ ಘೋಷಿಸಿದ್ದಾರೆ. ಆದರೆ ನಿವೃತ್ತಿ ನಂತರ ಅವರು ಧೋನಿ ಬಗ್ಗೆ ನೀಡಿರುವ ಹೇಳಿಕೆ ಇದೀಗ ಸಖತ್ ಷರ್ಷೆಗೆ ಕಾರಣವಾಗಿದೆ.

ಧೋನಿ-ಈಶ್ವರ್ ಪಾಂಡೆ

ಧೋನಿ-ಈಶ್ವರ್ ಪಾಂಡೆ

  • Share this:
ಪಂದ್ಯಗಳು, ಸರಣಿಗಳ ಹೊರತಾಗಿ ಕ್ರಿಕೆಟ್ (Cricket) ಜಗತ್ತು ನಿರಂತರವಾಗಿ ಸುದ್ದಿಯಲ್ಲಿದೆ. ಸದ್ಯ, ವೇಗದ ಬೌಲರ್ ನಿವೃತ್ತಿ ಘೋಷಣೆಯು ಸಖತ್ ಚರ್ಚೆಗೆ ಗ್ರಾಸವಾಗಿದೆ. ಭಾರತದ ವೇಗದ ಬೌಲರ್ ಈಶ್ವರ್ ಪಾಂಡೆ (Ishwar pandey) ಅಂತರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.  ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಹಂಚಿಕೊಳ್ಳುವ ಮೂಲಕ ಈ ವಿಷಯವನ್ನು ಅಧಿಕೃತಗೊಳಿಸಿದ್ದಾರೆ.  ಅಲ್ಲದೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ಬಗ್ಗೆಯೂ ಈಶ್ವರ್ ಪಾಂಡೆ ಮಹತ್ವದ ಹೇಳಿಕೆ ನೀಡಿದ್ದಾರೆ. ಸದ್ಯ ಅವರ ಹೇಳಿಕೆ ಚರ್ಚೆಗೆ ಗ್ರಾಸವಾಗಿದ್ದು, ಇದೊಂದು ವಿಷಯ ಎಲ್ಲಡೆ ಹೊಸ ಸಂಚಲನ ಮೂಡಿಸಿದೆ.

ಕ್ರಿಕೆಟ್​ಗೆ ವಿದಾಯ ಹೇಳಿದ ಪಾಂಡೆ:

ಸಿಎಸ್​ಕೆ ತಂಡದ ಮಾಜಿ ಆಟಗಾರ ಈಶ್ವರ್ ಪಾಂಡೆ  ಅಂತರಾಷ್ಟ್ರೀಯ ಕ್ರಿಕೆಟ್ ಮತ್ತು ಪ್ರಥಮ ದರ್ಜೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವ ಪೋಸ್ಟ್ ಅನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಿಂದ ಅವರು ಎಲ್ಲರಿಗೂ ಧನ್ಯವಾದಗಳನ್ನು ಸಹ ತಿಳಿಸಿದ್ದಾರೆ. 2007ರಿಂದ ಆರಂಭವಾದ ಈ ಪಯಣ ಉತ್ತಮವಾಗಿತ್ತು. ನಾನು ಮೈದಾನದಲ್ಲಿ ಆಟವನ್ನು ಸಂಪೂರ್ಣವಾಗಿ ಆನಂದಿಸಿದೆ ಎಂದಿದ್ದಾರೆ.










View this post on Instagram






A post shared by Ishwar pandey (@ishwar22)






ಪಾಂಡೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿರಲಿಲ್ಲ. 'ಭಾರತಕ್ಕಾಗಿ ಆಡಲು ಸಾಧ್ಯವಾಗಲಿಲ್ಲ ಎಂಬ ಬೇಸರವಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ನನ್ನನ್ನು ತಂಡದಲ್ಲಿ ಸೇರಿಸಲಾಗಿತ್ತು. ಇದು ನನಗೆ ಹೆಮ್ಮೆಯ ವಿಷಯ. ಆದರೆ ನನಗೆ ದೇಶಕ್ಕಾಗಿ ಆಡುವ ಅವಕಾಶ ಸಿಗಲಿಲ್ಲ ಎನ್ನುವ ದುಃಖ ನನ್ನ ಹೃದಯದಲ್ಲಿ ಸದಾ ಉಳಿಯುತ್ತದೆ' ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Rohit Sharma: ರೋಹಿತ್ ಶರ್ಮಾ ಎಜುಕೇಷನ್​ ಏನು ಗೊತ್ತಾ? ಹಿಟ್​ಮ್ಯಾನ್​ಗೂ ಸೌತ್​ಗೂ ಇದೆ ನಂಟು

ಧೋನಿ ನನಗೆ ಅವಕಾಶ ನೀಡಲಿಲ್ಲ:

ಇನ್ನು, ನಿವೃತ್ತಿಯ ನಂತರ ಅವರು ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಇದೀಗ ಕ್ರಿಕೆಟ್​ ವಲಯದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಿದೆ. ಹೌದು, ಸಂದರ್ಶನದಲ್ಲಿ ಮಾತನಾಡಿದ ಅವರು, ‘ಧೋನಿ ನನಗೆ ಅವರ ಅಡಿಯಲ್ಲಿ ಆಡುವ ಅವಕಾಶವನ್ನು ನೀಡಿದ್ದರೆ, ನಾನು ಬಹುಶಃ ನನ್ನ ವೃತ್ತಿಜೀವನದಲ್ಲಿ ಅತ್ಯುತ್ತಮ ಸಾಧನೆ ಮಾಡುತ್ತಿದ್ದೆ. ಧೋನಿ ನನಗೆ ಅವಕಾಶ ನೀಡಿದ್ದರೆ, ಇಂದು ನನ್ನ ವೃತ್ತಿಜೀವನದ ಚಿತ್ರಣ ವಿಭಿನ್ನವಾಗಿರುತ್ತಿತ್ತು. ಆಗ ನನಗೆ 23-24 ವರ್ಷ. ನನ್ನ ಫಿಟ್ನೆಸ್ ಕೂಡ ಚೆನ್ನಾಗಿತ್ತು. ಭಾರತ ಪರ ಆಡುವ ಅವಕಾಶ ಸಿಕ್ಕಿದ್ದರೆ ಮತ್ತು ಉತ್ತಮ ಪ್ರದರ್ಶನ ನೀಡಿದ್ದರೆ ಇಂದು ನನ್ನ ವೃತ್ತಿ ಬದುಕೇ ಬೇರೆಯಾಗುತ್ತಿತ್ತು‘ ಎಂದು ಹೇಳಿದ್ದಾರೆ. ಪಾಂಡೆ ಅವರನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆಯೇ?  ಎಂಬ ಹೊಸ ಚರ್ಚೆ ಇದೀಗ ಕ್ರಿಕೆಟ್ ವಲಯದಲ್ಲಿ ಸಖತ್ ಸಂಚಲನ ಮೂಡಿಸುತ್ತಿದೆ.

ಇದನ್ನೂ ಓದಿ: IND vs AUS: ಭಾರತ ಪ್ರವಾಸಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಬಿಗ್​ ಶಾಕ್​, 3 ಆಟಗಾರರು ಔಟ್

ಪಾಂಡೆ ವೃತ್ತಿ ಜೀವನ:

ಈಶ್ವರ್ ಪಾಂಡೆ, 75 ಪ್ರಥಮ ದರ್ಜೆ ಪಂದ್ಯಗಳಲ್ಲಿ 263 ವಿಕೆಟ್ ಕಬಳಿಸುವ ಮಿಂಚಿದ್ದರು. ಜೊತೆಗೆ  ಲಿಸ್ಟ್ ಎ ನಲ್ಲಿ 63 ಮತ್ತು ಟಿ20 ಕ್ರಿಕೆಟ್‌ನಲ್ಲಿ 71 ವಿಕೆಟ್ ಪಡೆದು ಮಿಂಚಿದ್ದರು. ಇದಾದ ಬಳಿಕ ಪಾಂಡೆ 2013 ರಲ್ಲಿ ಪುಣೆ ವಾರಿಯರ್ಸ್​  ತಂಡಕ್ಕೆ ಆಯ್ಕೆ ಆಗುವ ಮೂಲಕ ಐಪಿಎಲ್​ಗೆ ಆಯ್ಕೆ ಆದರು. ನಂತರ 2015ರಲ್ಲಿ ಧೊಣಿ ನಾಯಕತ್ವದ ಚೆನ್ನೈ ಸೂಪೆ್ ಕಿಂಗ್ಸ್ ತಂಡದಲ್ಲಿ ಕಾಣಿಸಿಕೊಂಡರು. ಐಪಿಎಲ್‌ನಲ್ಲಿ 25 ಪಂದ್ಯಗಳನ್ನು ಆಡಿರುವ ಈಶ್ವರ್ ಪಾಂಡೆ ಒಟ್ಟು 18 ವಿಕೆಟ್​ಗಳನ್ನು ಕಬಳಿಸಿದ್ದಾರೆ.
Published by:shrikrishna bhat
First published: