• Home
  • »
  • News
  • »
  • sports
  • »
  • MS Dhoni: ಧೋನಿ ಅಭಿಮಾನಿಗಳಿಗೆ ಗುಡ್​ ನ್ಯೂಸ್,​ ಐಪಿಎಲ್ 2023ರ ಕುರಿತು ಮಹತ್ವದ ಹೇಳಿಕೆ ನೀಡಿದ ಕ್ಯಾಪ್ಟನ್ ಕೂಲ್

MS Dhoni: ಧೋನಿ ಅಭಿಮಾನಿಗಳಿಗೆ ಗುಡ್​ ನ್ಯೂಸ್,​ ಐಪಿಎಲ್ 2023ರ ಕುರಿತು ಮಹತ್ವದ ಹೇಳಿಕೆ ನೀಡಿದ ಕ್ಯಾಪ್ಟನ್ ಕೂಲ್

ಎಂ ಎಸ್ ಧೋನಿ

ಎಂ ಎಸ್ ಧೋನಿ

MS Dhoni: ಮಹೇಂದ್ರ ಸಿಂಗ್ ಧೋನಿ ಐಪಿಎಲ್ 2023 ರಲ್ಲಿ ಆಡುತ್ತಾರೋ ಇಲ್ಲವೋ? ಅದನ್ನು ಅವರು ಬಹಿರಂಗಪಡಿಸಿದ್ದಾರೆ. ಚೆನ್ನೈನಲ್ಲಿ ಅವರ ಐಪಿಎಲ್ ಫ್ರಾಂಚೈಸಿಯ ಕಾರ್ಯಕ್ರಮದಲ್ಲಿ ಈ ಕುರಿತು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ.

  • Share this:

ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತು ಕ್ರಿಕೆಟ್ (Cricket) ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿ ಇದೆ. ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Dhoni) ಐಪಿಎಲ್ 2023ರಲ್ಲಿ (IPL 2023) ಸಿಎಸ್‌ಕೆ ಪರ ಆಡಲಿದ್ದಾರೆ. ತಮ್ಮ ಐಪಿಎಲ್ ಫ್ರಾಂಚೈಸಿಗೆ ಸಂಬಂಧಿಸಿದ ಕಾರ್ಯಕ್ರಮವೊಂದರಲ್ಲಿ ಅವರು ಇದನ್ನು ಖಚಿತಪಡಿಸಿದ್ದಾರೆ. ಈ ವೇಳೆ ಧೋನಿ ಮುಂದಿನ ವರ್ಷ ಚೆನ್ನೈನ ಚೆಪಾಕ್ ಸ್ಟೇಡಿಯಂಗೆ ವಾಪಸಾಗುತ್ತಿರುವುದಾಗಿ ಹೇಳಿದ್ದಾರೆ. 2019 ರಲ್ಲಿ ಧೋನಿ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಮ್ಮ ತವರು ನೆಲದಲ್ಲಿ ಕೊನೆಯ ಬಾರಿ ಪಂದ್ಯವನ್ನು ಆಡಿದ್ದರು. ಇದರ ನಂತರ 2020 ರಲ್ಲಿ ಕೊರೋನಾ ಕಾರಣ ಯುಎಇಯಲ್ಲಿ ಲೀಗ್ ನಡೆಯಿತು. ಅದೇ ಸಮಯದಲ್ಲಿ, 2021 ರಲ್ಲಿ, ಲೀಗ್‌ನ ಎರಡನೇ ಹಂತವನ್ನು ಯುಎಇಯಲ್ಲಿಯೇ ಆಡಲಾಯಿತು.


ಮುಂದಿನ ಐಪಿಎಲ್​ ಹಳೆಯ ಮಾದರಿಯಲ್ಲಿ:


IPL 2022 ಲೀಗ್ ಹಂತದ ಮುಂಬೈ ಮತ್ತು ಪುಣೆಯಲ್ಲಿಯೂ ಆಡಲಾಯಿತು. ಇದಾದ ನಂತರ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಗಳು ಕೋಲ್ಕತ್ತಾ ಮತ್ತು ಅಹಮದಾಬಾದ್‌ನಲ್ಲಿ ನಡೆದವು. ಆದರೆ, ಮುಂದಿನ ವರ್ಷದಿಂದ ತವರು ಮತ್ತು ವಿದೇಶ ಮಾದರಿಯಲ್ಲೇ ಲೀಗ್ ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ, ಎಲ್ಲಾ ತಂಡಗಳು ತಮ್ಮ ತವರಿನಲ್ಲಿ ಆಡುತ್ತವೆ. ಧೋನಿ 2020 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು. ಅಂದಿನಿಂದ ಅವರು ಐಪಿಎಲ್ ಮಾತ್ರ ಆಡುತ್ತಿದ್ದಾರೆ.



ನಾವು ಮುಂದಿನ ವರ್ಷ ಚೆಪಾಕ್‌ಗೆ ಹಿಂತಿರುಗುತ್ತೇವೆ.ಧೋನಿ ಅವರ ಈ ಹೇಳಿಕೆಯನ್ನು ಚೆನ್ನೈ ಸೂಪರ್ ಕಿಂಗ್ಸ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ.  ಅದರೊಂದಿಗೆ ಅವರ ಚಿತ್ರವನ್ನೂ ಹಂಚಿಕೊಂಡಿದ್ದಾರೆ. ಇದರ ವಿಡಿಯೋ ಕೂಡ ವೈರಲ್ ಆಗುತ್ತಿದೆ. ಧೋನಿ ಮುಂದಿನ ಸೀಸನ್‌ಗೆ ಚೆಪಾಕ್‌ಗೆ ಬರುವುದಾಗಿ ಘೋಷಿಸಿದ ತಕ್ಷಣ ಅಭಿಮಾನಿಗಳು ಜೋರಾಗಿ ಕೂಗಲು ಪ್ರಾರಂಭಿಸಿರುವ ವಿಡಿಯೋ ವೈರಲ್ ಆಗಿದೆ.


ಇದನ್ನೂ ಓದಿ: David Miller: ಅಭಿಮಾನಿ ಸಾವಿಗೆ ಕಂಬನಿ ಮಿಡಿದ ಡೇವಿಡ್ ಮಿಲ್ಲರ್, ಭಾವನಾತ್ಮಕ ಪೋಸ್ಟ್ ಹಂಚಿಕೊಂಡ ಸ್ಟಾರ್​ ಕ್ರಿಕೆಟರ್​


ಮುಂದಿನ ಐಪಿಎಲ್​ ಧೊನಿಗೆ ಕೊನೆಯದೇ?:


ಐಪಿಎಲ್ 16ನೇ ಸೀಸನ್ ಧೋನಿ ಹಾಗೂ ಸಿಎಸ್ ಕೆ ಅಭಿಮಾನಿಗಳಿಗೆ ವಿಶೇಷ ಎನಿಸಬಹುದು. ಏಕೆಂದರೆ ತವರಿನಲ್ಲಿ ಅಂದರೆ ಚೆನ್ನೈನಲ್ಲಿ ಆಡಿದ ನಂತರವೇ ಐಪಿಎಲ್‌ನಿಂದ ನಿವೃತ್ತಿ ಕುರಿತು ಯಾವುದೇ ನಿರ್ಧಾರ ತೆಗೆದುಕೊಳ್ಳುವುದಾಗಿ ಧೋನಿ ಕಳೆದ ವರ್ಷ ಹೇಳಿದ್ದರು. ಇಂತಹ ಪರಿಸ್ಥಿತಿಯಲ್ಲಿ 2023 ಐಪಿಎಲ್‌ನಲ್ಲಿ ಧೋನಿಗೆ ಕೊನೆಯ ವರ್ಷವಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.


ಐಪಿಎಲ್​ನ ಯಶಸ್ವಿ ನಾಯಕ ಧೋನಿ:


ಈ ಮಾತನ್ನು ಯಾರೂ ಸಹ ಅಲ್ಲಗೆಳೆಯುವುದಿಲ್ಲ. ಹೌದು, ಐಪಿಎಲ್​ ನ ಓರ್ವ ಯಶಸ್ವಿ ನಾಯಕ ಎಂದರೆ ಅದು ಧೋನಿ. ಚೆನ್ನೈ ತಂಡವು 4 ಬಾರಿ ಚಾಂಪಿಯನ್​ ಆಗುವಂತೆ ಮಾಡಿದ ಧೋನಿ ಸಿಎಸ್​ಕೆ ಪಾಲಿನ ಅದೃಷ್ಟದ ನಾಯಕ. ಧೋನಿ ನಾಯಕತ್ವದಲ್ಲಿ ಚೆನ್ನೈ ತಂಡ 2010, 2011, 2018, 2021 ರಲ್ಲಿ ಚಾಂಪಿಯನ್‌ ಪಟ್ಟ ಅಲಂಕರಿಸಿತ್ತು. 2008, 2012, 2013, 2015, 2019ರಲ್ಲಿ ರನ್ನರ್‌ ಅಪ್‌ ಆಗಿ ಹೊರಹೊಮ್ಮಿತ್ತು.


ಇದನ್ನೂ ಓದಿ: Sanju Samson: ಟೀಂ ಇಂಡಿಯಾಗೆ ಮತ್ತೊಬ್ಬ ಧೋನಿ ಎಂಟ್ರಿ? ಈ ಆಟಗಾರನಲ್ಲಿದೆ ಕ್ಯಾಪ್ಟನ್ ಕೂಲ್​ ಗುಣಲಕ್ಷಣಗಳು



ಕಳೆದ ನವೆಂಬರ್‌ನಲ್ಲಿ ವಿದಾಯದ ಕುರಿತು ಮಾತನಾಡಿದ್ದ ಧೋನಿ, ‘ನನ್ನ ಕೊನೆಯ ಏಕದಿನ ಪಂದ್ಯ ರಾಂಚಿಯಲ್ಲೇ ನಡೆದಿದ್ದರೆ, ಕೊನೆಯ ಟಿ20 ಪಂದ್ಯ ಚೆನ್ನೈನಲ್ಲೇ  ನಡೆಯಬೇಕೆಂದು ಆಶಿಸುತ್ತೇನೆ. ಇದು ಮುಂದಿನ ವರ್ಷ ಆಗಿರುತ್ತಾ ಅಥವಾ ಮುಂದಿನ ಐದು ವರ್ಷದಲ್ಲಿ ಆಗುತ್ತಾ ಗೊತ್ತಿಲ್ಲ‘ ಎಂದು ಹೇಳಿದ್ದರು. ಇದರಿಂದಾಗಿ ಈ ಬಾರಿ ಐಪಿಎಲ್ ಅವರ ಪಾಲಿಗೆ ಕೊನೆಯ ಟೂರ್ನಿ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.


Published by:shrikrishna bhat
First published: