Instagram ಪ್ರೊಫೈಲ್ ಪಿಕ್ ಬದಲಾಯಿಸಿದ ಧೋನಿ, ಕ್ಯಾಪ್ಟನ್‌ ಕೂಲ್ DP ಕಾಪಿ ಮಾಡಿದ ಫ್ಯಾನ್ಸ್!

ಧೋನಿ ಅಷ್ಟಾಗಿ ಸಾಮಾಜಿಕ ಜಾಲತಾಣವನ್ನು ಬಳಸುವುದಿಲ್ಲ. ಹೀಗಾಗಿ ಅವರ ಇನ್ಸ್ಟಾಗ್ರಾಂ ಡಿಪಿ ಅನೇಕ ವರ್ಷಗಳಿಂದ ಬದಲಾಗಿರಲಿಲ್ಲ. ಆದರೆ ಇದೀಗ ಧೋನಿ ತಮ್ಮ ಇನ್ಸ್ಟಾ ಡಿಪಿ ಬದಲಿಸಿದ್ದಾರೆ.

ಎಂಎಸ್ ಧೋನಿ

ಎಂಎಸ್ ಧೋನಿ

  • Share this:
ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni), ಕ್ರಿಕೆಟ್​​​ನ (Cricket) ಗ್ರೇಟ್ ಮೈಂಡ್.  ಧೋನಿಯ ಸ್ಟೈಲಿಶ್​ ಲುಕ್ಸ್​ಗೆ (Stylish Look) ಸಾಕಷ್ಟು ಮಂದಿ ಪ್ರಭಾವ ಆಗಿದ್ದಾರೆ. ಧೋನಿ ಟೀಮ್‌ ಇಂಡಿಯಾ (Team India) ನಾಯಕತ್ವ (Captaincy) ವಹಿಸಿಕೊಂಡ ಬಳಿಕ ಐಸಿಸಿ ಎಲ್ಲಾ  ಟ್ರೋಪಿಗಳನ್ನು ಗೆದ್ದಿದ್ದಾರೆ. ಈ ದಾಖಲೆ ಮಾಡಿರುವ ವಿಶ್ವದ ಏಕೈಕ ನಾಯಕ ಎಂಬ ಹೆಗ್ಗಳಿಕೆಗೆ MSD ಪಾತ್ರರಾಗಿದ್ದಾರೆ. ಕ್ರಿಕೆಟ್ ನಿಂದ ಧೋನಿ ಈಗಾಗಲೇ ದೂರವಾಗಿದ್ದರೂ ಅವರ ಫೇಮ್​ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಯಾವುದಾದರೂ ಒಂದು ರೀತಿಯಲ್ಲಿ ಅವರು ಸುದ್ದಿಯಲ್ಲಿರುತ್ತಾರೆ. ಇದೀಗ ಧೋನಿ ತಮ್ಮ ಇನ್ಸ್ಟಾಗ್ರಾಂ (Instagram) ಡಿಪಿ ಬದಲಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಡಿಪಿ ಬದಲಿಸಿದ ಧೋನಿ:

ಹೌದು, ಧೋನಿ ಅಷ್ಟಾಗಿ ಸಾಮಾಜಿಕ ಜಾಲತಾಣವನ್ನು ಬಳಸುವುದಿಲ್ಲ. ಹೀಗಾಗಿ ಅವರ ಇನ್ಸ್ಟಾಗ್ರಾಂ ಡಿಪಿ ಅನೇಕ ವರ್ಷಗಳಿಂದ ಬದಲಾಗಿರಲಿಲ್ಲ. ಆದರೆ ಇದೀಗ ಧೋನಿ ತಮ್ಮ ಇನ್ಸ್ಟಾ ಡಿಪಿ ಬದಲಿಸಿದ್ದಾರೆ. ಭಾರತವು ಸ್ವಾತಂತ್ರ್ಯದ ಅಮೃತ ಮಹೋತ್ಸವನ್ನು ಆಚರಿಸುತ್ತಿದೆ. ಹೀಗಾಗಿ ಎಲ್ಲರೂ ತಮ್ಮ ಸಾಮಾಜಿಕ ಜಾಲತಾಣದ ಡಿಪಿ ಅನ್ನು ತ್ರಿವರ್ಣವಾಗಿ ಬದಲಿಸುವಂತೆ ಪ್ರಧಾನಿ ಮೋದಿ ಮನವಿ ಮಾಡಿದ್ದರು. ಹೀಗಾಗಿ ಅನೇಕರು ತಮ್ಮ ಡಿಪಿ ಅನ್ನು ಬದಲಿಸಿದ್ದರು. ಅದರಂತೆ ಇದೀಗ ಧೋನಿ ಸಹ ಡಿಪಿ ಬದಲಿಸಿದ್ದಾರೆ.

ವಿಶೇಷ DP ಹಾಕಿಕೊಂಡ ಧೋನಿ:

ಇನ್ನು, ತಮ್ಮ ಇನ್ಸ್ಟಾಗ್ರಾಂ ಡಿಪಿ ಬದಲಾಯಿಸಿರುವ ಧೋನಿ, ಒಂದು ಉತ್ತಮ ಸಂದೇಶವಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಎಂಎಸ್​​ಡಿ ಭಾರತದ ಧ್ವಜ ಹೊಂದಿರುವ ಫೋಟೋವನ್ನು ಪ್ರೊಫೈಲ್ ಪಿಕ್​ ಮಾಡಿಕೊಂಡಿದ್ದು, ಈ ಫೋಟೋದಲ್ಲಿ ‘ನಾನು ಭಾರತೀಯನಾಗಲು ಪುಣ್ಯ ಮಾಡಿದ್ದೇನೆ‘ ಎಂದು ಬರೆದುಕೊಂಡಿದೆ. ಈ ಫೋಟೋ ನೋಡಲೂ ಸುಂದರವಾಗಿದ್ದು, ಇದೇ ಡಿಪಿ ಅನ್ನು ಅನೇಕರು ಇದೀಗ ತಮ್ಮ ಪ್ರೊಪೈಲ್ ಪಿಕ್​ ಆಗಿ ಬದಲಾಯಿಸಿಕೊಳ್ಳುತ್ತಿದ್ದು, ಧೋನಿ ಡಿಪಿ ಅನ್ನು ಅಭಿಮಾನಿಗಳು ಕಾಪಿ ಮಾಡುತ್ತಿದ್ದಾರೆ.

ಸೇನೆಯಲ್ಲಿಯೂ ಧೋನಿಗೆ ಗೌರವ ಹುದ್ದೆ:

ಈ ವಿಚಾರ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಹೌದು, ಧೋನಿ ಈಗಾಗಲೇ ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಹೊಂದಿದ್ದಾರೆ. ಇದರ ಜೊತೆಗೆ ಅವರು ಅರ್ಹ ಪ್ಯಾರಾಟ್ರೂಪರ್ ಕೂಡ ಆಗಿದ್ದು, ಅನೇಖ ಬಾರಿ ಭಾರತೀಯ ಸೇನೆಯ ಜೊತೆ ಕಾಣಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದೆ ಅವರು ಭಾರತೀಯ ಸೇನೆಯ ತರಬೇತಿಯಲ್ಲೂ ಕಾಣಿಸಿಕೊಂಡಿದ್ದರು. ಹೀಗಾಗಿ ಅವರು ದೇಶಕ್ಕಾಗಿ ಆಟವಾಡಿದ್ದಲ್ಲದೇ ಸೇನೆಯ ಗೌರವಕ್ಕೂ ಪಾತ್ರರಾಗಿದ್ದಾರೆ. ಇನ್ನೊಂದು ವಿಶೇಷ ಸಂಗತಿ ಎಂದರೆ ಲೆಫ್ಟಿನೆಂಟ್ ಕರ್ನಲ್ ಆಗಿರುವ MSD ಏನಾದರೂ ಯುದ್ದದಂತಹ ಸನ್ನವೇಶ ಬಂದಲ್ಲಿ ಭಾರತೀಯ ಸೇನೆಯ ಜೊತೆ ಸೇರಿಕೊಳ್ಳಬಹುದಾಗಿದೆ.

ಇದನ್ನೂ ಓದಿ: Mithali Raj: ಮಿಥಾಲಿ ರಾಜ್ ಮದುವೆಯಾಗದೇ ಇರುವುದಕ್ಕೆ ಇದೇ ಕಾರಣಾನಾ? ಇಲ್ಲಿದೆ ಕುತೂಹಲಕಾರಿ ಸಂಗತಿ

ಬಣ್ಣದ ಲೋಕಕ್ಕೆ ಕಾಲಿಟ್ಟ ಧೋನಿ:

ಮಹೇಂದ್ರ ಸಿಂಗ್ ಧೋನಿ ಮತ್ತು ನಟಿ ನಯನತಾರಾ ಹೊಸ ಯೋಜನೆಗಾಗಿ ಜೊತೆಯಾಗುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಭಾರತೀಯ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಿದ್ದಾರೆ.ಭಾರತದ ಮಾಜಿ ನಾಯಕ, ಅವರು 2011 ರ ವಿಶ್ವಕಪ್ ಸೇರಿದಂತೆ ಭಾರತಕ್ಕಾಗಿ ಅನೇಕ ಟ್ರೋಫಿಗಳನ್ನು ಗೆದ್ದಿದ್ದಾರೆ.ಪ್ರಸ್ತುತ ಐಪಿಎಲ್‌ನಲ್ಲಿ ಸಿಎಸ್‌ಕೆ ತಂಡದ ನಾಯಕರಾಗಿದ್ದಾರೆ. ಹೀಗಿರುವಾಗ ಧೋನಿ ನಿರ್ಮಾಣ ಸಂಸ್ಥೆ ಆರಂಭಿಸಿ ತಮಿಳಿನಲ್ಲಿ ಸಿನಿಮಾ ಮಾಡಲು ಹೊರಟಿದ್ದಾರೆ. ನಟ ರಜನಿಕಾಂತ್ ಅವರ ನಿರ್ಮಾಣ ಸಂಸ್ಥೆಯಲ್ಲಿ ಸಹಾಯಕರಾಗಿದ್ದ ಸಂಜಯ್ ಈಗಷ್ಟೇ ಸೇರಿಕೊಂಡಿದ್ದಾರೆ.
Published by:shrikrishna bhat
First published: