• Home
  • »
  • News
  • »
  • sports
  • »
  • MS Dhoni: ಧೋನಿ ಮನೆಗೆ ಹೊಸ ಅತಿಥಿ ಆಗಮನ, ವೆಲ್​ಕಮ್ ಮಾಡೋಕೆ ಬಂದ್ರು CSK ಪ್ಲೇಯರ್ಸ್

MS Dhoni: ಧೋನಿ ಮನೆಗೆ ಹೊಸ ಅತಿಥಿ ಆಗಮನ, ವೆಲ್​ಕಮ್ ಮಾಡೋಕೆ ಬಂದ್ರು CSK ಪ್ಲೇಯರ್ಸ್

ಮಹೇಂದ್ರ ಸಿಂಗ್ ಧೋನಿ

ಮಹೇಂದ್ರ ಸಿಂಗ್ ಧೋನಿ

MS Dhoni: ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS DhonI) ಅವರಿಗೆ ಈ ಕಾರುಗಳು (Car) ಮತ್ತು ಬೈಕ್ ಗಳೆಂದರೆ (Bike) ತುಂಬಾನೇ ಇಷ್ಟವೆಂಬುದು ಬಹುತೇಕವಾಗಿ ಎಲ್ಲರಿಗೂ ಗೊತ್ತಿದೆ.

  • Trending Desk
  • Last Updated :
  • New Delhi, India
  • Share this:

ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS DhonI) ಅವರಿಗೆ ಈ ಕಾರುಗಳು (Car) ಮತ್ತು ಬೈಕ್ ಗಳೆಂದರೆ (Bike) ತುಂಬಾನೇ ಇಷ್ಟವೆಂಬುದು ಬಹುತೇಕವಾಗಿ ಎಲ್ಲರಿಗೂ ಗೊತ್ತಿದೆ. ಹೌದು, ಕ್ರಿಕೆಟ್ (Cricket) ಆಟಗಾರರಿಗೆ ಮತ್ತು ಬಾಲಿವುಡ್ ನಟರಿಗೆ ವಿಭಿನ್ನ ರೀತಿಯ ಕಾರುಗಳು ಎಂದರೆ ತುಂಬಾನೇ ಇಷ್ಟ. ಧೋನಿ ಅವರು ತಮ್ಮ ಮನೆಯಲ್ಲಿ ಈ ಆಧುನಿಕ ಮತ್ತು ವಿಂಟೇಜ್ ಕ್ಲಾಸಿಕ್ ಬೈಕ್ ಮತ್ತು ಕಾರುಗಳನ್ನು ಸಹ ಹೊಂದಿದ್ದಾರೆ. ಈಗ ಆ ಕಾರುಗಳ ಪಟ್ಟಿಗೆ ಹೊಸದೊಂದು ಕಾರು ಸೇರ್ಪಡೆಯಾಗಿದೆ ನೋಡಿ.


ಕಿಯಾ ಇವಿ6 ಎಲೆಕ್ಟ್ರಿಕ್ ಕಾರನ್ನು ಖರೀದಿಸಿದ ಧೋನಿ:


ಧೋನಿ ಅವರು ಹೊಚ್ಚ ಹೊಸ ಕಿಯಾ ಇವಿ6 ಅನ್ನು ಖರೀದಿಸಿದ್ದಾರೆ. ಇದು ಅವರ ಕಾರು ಸಂಗ್ರಹಕ್ಕೆ ಸೇರ್ಪಡೆಯಾದ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಲಾದ ವೀಡಿಯೋದಲ್ಲಿ, ಮಹೇಂದ್ರ ಸಿಂಗ್ ಧೋನಿ ತಮ್ಮ ಹೊಸ ಕಿಯಾ ಇವಿ6 ಕಾರಿನಲ್ಲಿ ತಮ್ಮ ಚೈನೈ ಸೂಪರ್‌ಕಿಂಗ್ಸ್ ತಂಡದ ಸಹ ಆಟಗಾರರಾದ ರುತುರಾಜ್ ಗಾಯಕ್ವಾಡ್ ಮತ್ತು ಕೇದಾರ್ ಜಾಧವ್ ಅವರೊಂದಿಗೆ ಕುಳಿತುಕೊಳ್ಳುವುದನ್ನು ನೋಡಬಹುದು.ಕಿಯಾ ಇವಿ6 ಅತ್ಯಂತ ದುಬಾರಿ ಕಾರು:


2022 ರಲ್ಲಿ ಬಿಡುಗಡೆಯಾದ ಕಿಯಾ ಇವಿ6 ಅತ್ಯಂತ ದುಬಾರಿ ಮತ್ತು ಭಾರತದಲ್ಲಿನ ಕೊರಿಯನ್ ಕಾರು ತಯಾರಕರಿಂದ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. ಕಿಯಾ ಇವಿ6 ಅನ್ನು ತುಂಬಾನೇ ಸೀಮಿತ ಸಂಖ್ಯೆಯಲ್ಲಿ ಬಿಡುಗಡೆ ಮಾಡಲಾಯಿತು. ಆದಾಗ್ಯೂ, ಆಲ್-ಎಲೆಕ್ಟ್ರಿಕ್ ಕ್ರಾಸ್ ಓವರ್ ಕಾರನ್ನು ಖರೀದಿ ಮಾಡಿದ್ದಾರೆ. ಇತ್ತೀಚೆಗೆ, ಕಿಯಾ ಭಾರತದಲ್ಲಿ ಇವಿ6 ನ 200ಕ್ಕೂ ಹೆಚ್ಚು ಯೂನಿಟ್ ಗಳನ್ನು ಬಿಡುಗಡೆ ಮಾಡಿದಾಗಿನಿಂದ ಮಾರಾಟ ಮಾಡಿದೆ ಎಂದು ಬಹಿರಂಗಪಡಿಸಿದೆ.


ಕಿಯಾ ಇವಿ6 ಎರಡು ವಿಭಿನ್ನ ರೂಪಾಂತರಗಳಲ್ಲಿ ಭಾರತಕ್ಕೆ ಬಂದಿದ್ದು, ಆರಂಭಿಕ ಬೆಲೆ 59.95 ಲಕ್ಷ ರೂಪಾಯಿಯಾಗಿದೆ. ಇವಿ6 ನ ಬೇಸ್ ರೂಪಾಂತರವು ಫ್ರಂಟ್-ಮೌಂಟೆಡ್ ಸಿಂಗಲ್ ಮೋಟಾರ್ ನೊಂದಿಗೆ ಎರಡು-ವೀಲ್-ಡ್ರೈವ್ ಕಾನ್ಫಿಗರೇಶನ್ ನೊಂದಿಗೆ ಬರುತ್ತದೆ, ಇದು 229 ಬಿಹೆಚ್ ಪಿ ಗರಿಷ್ಠ ಪವರ್ ಮತ್ತು 350 ಎನ್ ಎಂ ಗರಿಷ್ಠ ಟಾರ್ಕ್ ಅನ್ನು ಹೊಂದಿದೆ.


ಇದನ್ನೂ ಓದಿ: MS Dhoni: ಕಡಕ್‌ನಾತ್ ಕೋಳಿ ಮಾರಾಟಕ್ಕೆ ರೆಡಿಯಾದ ಧೋನಿ, ಬೆಲೆ ಕೇಳಿದ್ರೆ ಶಾಕ್​ ಆಗ್ತೀರಾ!


ಈ ಎಲೆಕ್ಟ್ರಿಕ್ ಕಾರಿನ ವೈಶಿಷ್ಟ್ಯತೆಗಳೇನು?:


ಹೆಚ್ಚು ಪ್ರೀಮಿಯಂ ಆಲ್-ವ್ಹೀಲ್-ಡ್ರೈವ್ ಆವೃತ್ತಿಯು ಎರಡು ಎಲೆಕ್ಟ್ರಿಕ್ ಮೋಟಾರ್ ಗಳ ಸಂಯೋಜನೆಯಿಂದ ಚಾಲಿತವಾಗಿದೆ, ಮುಂಭಾಗ ಮತ್ತು ಹಿಂಭಾಗದ ಆಕ್ಸಲ್ ಗಳಲ್ಲಿ ತಲಾ ಒಂದರೊಂದಿಗೆ, ಸಂಯೋಜಿತ ಪವರ್ ಮತ್ತು ಟಾರ್ಕ್ ಔಟ್ ಪುಟ್ ಗಳು ಕ್ರಮವಾಗಿ 325 ಬಿಹೆಚ್ ಪಿ ಮತ್ತು 605 ಎನ್ಎಂ ರೇಟ್ ಹೊಂದಿವೆ.


ಕಿಯಾ ತನ್ನ 77.4 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ನಿಂದ ಇವಿ6 ಗಾಗಿ ಎಆರ್‌ಎಐ ಸೈಕಲ್ ನಲ್ಲಿ 708 ಕಿಲೋ ಮೀಟರ್ ಹ್ಯುಂಡೈ-ಕಿಯಾದ ಇ-ಜಿಎಂಪಿ ಪ್ಲಾಟ್ಫಾರ್ಮ್ ಅನ್ನು ಆಧರಿಸಿದ ಕಿಯಾದಿಂದ ಇವಿ6 ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ. ಕಿಯಾ ಇವಿ6 ಪ್ರಸ್ತುತ ವೋಲ್ವೊ ಎಕ್ಸ್‌ಸಿ 40 ರೀಚಾರ್ಜ್ ನೊಂದಿಗೆ ಸ್ಪರ್ಧಿಸುತ್ತದೆ ಮತ್ತು ಶೀಘ್ರದಲ್ಲಿಯೇ ಹ್ಯುಂಡೈ ಅಯೋನಿಕ್ 5 ನೊಂದಿಗೆ ಸ್ಪರ್ಧಿಸಲಿದೆ, ಇದು 2023ರ ಮೊದಲ ತ್ರೈಮಾಸಿಕದಲ್ಲಿ ಭಾರತಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ.


ಧೋನಿ ಅವರ ಬಳಿ ಇವೆಯಂತೆ ಅನೇಕ ವಿಂಟೇಜ್ ಕಾರುಗಳು:


ಧೋನಿ ಆಗಾಗ್ಗೆ ತಮ್ಮ ಸಂಗ್ರಹಕ್ಕೆ ಹೊಸ ಕಾರುಗಳನ್ನು ಸೇರಿಸುತ್ತಲೇ ಇರುತ್ತಾರೆ. ಧೋನಿ ಇತ್ತೀಚೆಗೆ 1969 ರ ಫೋರ್ಡ್ ಮಸ್ಟಾಂಗ್ ಅನ್ನು ಆ ಪಟ್ಟಿಗೆ ಸೇರಿಸಿದರು, ಇದು ಭಾರತದಲ್ಲಿ ತುಂಬಾ ವಿರಳವಾಗಿದೆ. ಇದು ಈ ಹಿಂದೆ ಅನೇಕ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದೆ.


1969 ರ ಮಸ್ಟಾಂಗ್ ರೋಲ್ಸ್ ರಾಯ್ಸ್ ಸಿಲ್ವರ್ ಶ್ಯಾಡೋ ಕಾರು ಧೋನಿಯವರ ಬಳಿ ಇದೆ. ಆರಂಭದಲ್ಲಿ ಈ ಕಾರನ್ನು ಖರೀದಿಸಿದಾಗ ಅವರು ರಾಂಚಿಯ ರಸ್ತೆಗಳಲ್ಲಿ ಈ ಕಾರನ್ನು ಓಡಿಸಿಕೊಂಡು ಹೋಗುತ್ತಿರುವುದನ್ನು ವೀಡಿಯೋಗಳಲ್ಲಿ ನೋಡಿದ್ದೆವು.


ಇಷ್ಟೆ ಅಲ್ಲದೆ ಧೋನಿ ಅವರ ಕಾರುಗಳ ಕಲೆಕ್ಷನ್ ನಲ್ಲಿ ಪಾಂಟಿಯಾಕ್ ಟ್ರಾನ್ಸ್-ಆಮ್ ಇದೆ, ಅದನ್ನು ಅವರು ಸ್ವಲ್ಪ ಸಮಯದ ಹಿಂದೆ ಖರೀದಿಸಿದರು. ಧೋನಿಯವರು ಇತ್ತೀಚಿಗೆ ಖರೀದಿಸಿದ ಪಾಂಟಿಯಾಕ್ ಫೈರ್ ಬರ್ಡ್ ಟ್ರಾನ್ಸ್ ಆಮ್ ಕ್ಲಾಸಿಕ್ ಕಾರು 455 ಬಿಗ್-ಬ್ಲಾಕ್ ವಿ8 ಎಂಜಿನ್ ಅನ್ನು ಹೊಂದಿದ್ದು, ಇದು ಹಿಂಭಾಗದ ಚಕ್ರಗಳಿಗೆ ಶಕ್ತಿಯನ್ನು ನೀಡುತ್ತದೆ. ಪೀಕ್ ಪವರ್ ಸುಮಾರು 325 ಬಿಹೆಚ್ ಪಿ ಮತ್ತು ಗೇರ್ ಬಾಕ್ಸ್ 4-ಸ್ಪೀಡ್ ಯೂನಿಟ್ ಆಗಿದೆ.


ಧೋನಿ ಆಧುನಿಕ ಕಾರುಗಳು ಮತ್ತು ಎಸ್‌ಯುವಿಗಳ ಸೆಟ್ ಅನ್ನು ಸಹ ಹೊಂದಿದ್ದಾರೆ. ಅವರು ಆಕರ್ಷಕ ಹಸಿರು ಬಣ್ಣದ ಹಮ್ಮರ್ ಎಚ್2 ಅನ್ನು ಡ್ರೈವ್ ಮಾಡುತ್ತಾರೆ. ಧೋನಿ ನಿಸ್ಸಾನ್ 1 ಟನ್ ಟ್ರಕ್ ಅನ್ನು ಸಹ ಹೊಂದಿದ್ದಾರೆ.

Published by:shrikrishna bhat
First published: